ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದರ ಏರಿಕೆಯ ಶಾಕ್ ನೀಡಿದೆ.
ನೆಲಮಂಗಲ–ಹಾಸನ(Nelamangala-Hassana) ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ-ದೇವಿಹಳ್ಳಿ ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿ ಇಂದು ಮಧ್ಯರಾತ್ರಿ (ಸೆಪ್ಟೆಂಬರ್ 1) 12 ಗಂಟೆಯಿಂದ ಅನ್ವಯವಾಗುವಂತೆ ಟೋಲ್ ಶುಲ್ಕವನ್ನು 5 ರೂ. ನಿಂದ 10 ರೂ. ರಷ್ಟು ಹೆಚ್ಚಿಸಲಾಗಿದೆ.
ನೆಲಮಂಗಲ–ದೇವಿಹಳ್ಳಿ ಎಕ್ಸ್‌ಪ್ರೆಸ್‌ವೇ ವ್ಯಾಪ್ತಿಗೆ ಬರುವ ದೊಡ್ಡಕರೇನಹಳ್ಳಿ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದ್ದು, ನಿತ್ಯ ಸಂಚರಿಸುವ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.
ಯಾವ ವಾಹನಕ್ಕೆ ಎಷ್ಟು?
ಕಾರು, ಜೀಪ್, ವ್ಯಾನ್ ಹಾಗೂ ಲಘು ವಾಹನಗಳು (LMV): ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಏಕಮುಖ ಸಂಚಾರಕ್ಕೆ 60 ರೂ. ನಿಗದಿಯಾಗಿದ್ದು, ಅದೇ ದಿನದ ಮರು ಸಂಚಾರದ (ರಿಟರ್ನ್ ಪಾಸ್) ದರ 85 ರೂ. ನಿಂದ 90 ರೂ.ಗೆ ಏರಿಕೆಯಾಗಿದೆ.
ಲಘು ವಾಣಿಜ್ಯ ಹಾಗೂ ಸರಕು ವಾಹನಗಳು (LCV): ಏಕಮುಖ ಸಂಚಾರದ ದರ 100 ರಿಂದ 105 ರೂ.ಗೆಕ್ಕೆ ಹಾಗೂ ದಿನದ ಸಂಚಾರದ ದರ 155 ರೂ.ಗೆ ಹೆಚ್ಚಳವಾಗಿದೆ.
ಬಸ್ ಮತ್ತು ಟ್ರಕ್: ಏಕಮುಖ ಸಂಚಾರಕ್ಕೆ 205 ರೂ. ಹಾಗೂ ದಿನದ ಸಂಚಾರಕ್ಕೆ 310 ರೂ. ನಿಗದಿಪಡಿಸಲಾಗಿದೆ.
ಮಲ್ಟಿ ಆಕ್ಸಲ್ ಹಾಗೂ ಬೃಹತ್ ವಾಹನಗಳು: ಏಕಮುಖ ಸಂಚಾರಕ್ಕೆ 330 ರೂ. ಹಾಗೂ ದಿನದ ಸಂಚಾರಕ್ಕೆ 495 ರೂ. ಶುಲ್ಕ ನಿಗದಿ ಮಾಡಲಾಗಿದೆ.
