ಟೋಕಿಯೋ: ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 56 ವಿಭಾಗದಲ್ಲಿ ಭಾರತದ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
Advertisement
24 ವರ್ಷದ ಯೋಗೇಶ್ ಕಥುನಿಯಾ ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 56 ವಿಭಾಗದಲ್ಲಿ 44.38 ಮೀಟರ್ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತಕ್ಕೆ ಐದನೇ ಪದಕ ತಂದುಕೊಟ್ಟಿದ್ದಾರೆ. ಈ ಹಿಂದೆ ದುಬೈನಲ್ಲಿ ನಡೆದಿದ್ದ ವಲ್ರ್ಡ್ ಪ್ಯಾರಾ ಅಥ್ಲಿಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ
Advertisement
Advertisement
ಯೋಗೇಶ್ ಕಥುನಿಯಾ ಸಾಧನೆಗೆ ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ನಿನ್ನೆ ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.91 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದು ವಿಶ್ವ ದಾಖಲೆ ಸರಿದೂಗಿಸಿದ್ದರು. ಆದರೆ ಅವರ ಪದಕಕ್ಕೆ ತಡೆ ಹಿಡಿಯಲಾಗಿದ್ದು ಇಂದು ಅಧಿಕೃತ ಘೋಷಣೆ ಹೊರಬರಲಿದೆ. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ
Advertisement
Let's 'discus' this #silver medal-winning throw ????
Watch #IND's Yogesh Kathuniya's season-best throw of 44.38m which earned #IND another medal at the #Tokyo2020 #Paralympics❗????#ParaAthleticspic.twitter.com/DkD5793ImC
— Olympic Khel (@OlympicKhel) August 30, 2021
ಟೋಕಿಯೋ 2020 ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತವು ಇದುವರೆಗೆ 1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಗೆದ್ದಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್
Outstanding performance by Yogesh Kathuniya. Delighted that he brings home the Silver medal. His exemplary success will motivate budding athletes. Congrats to him. Wishing him the very best for his future endeavours. #Paralympics
— Narendra Modi (@narendramodi) August 30, 2021