Latest

ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

Published

on

Share this

ಟೋಕಿಯೋ: ಪ್ಯಾರಾಲಿಂಪಿಕ್ಸ್ ವನಿತಾ ವಿಭಾಗದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಭವಿನಾಬೆನ್ ಪಟೇಲ್ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಚೀನಾದ ಯಿಂಗ್ ಜ್ಯೂ ಅವರು ಭವಿನಾಬೆನ್ ಪಟೇಲ್, 7-11, 5-11, 6-11 ನೇರ ಸೆಟ್‍ಗಳಿಂದ ಜಯಗಳಿಸಿದರು. ಫೈನಲ್ ಸೋತರೂ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪರ ಮೊದಲ ಪದಕ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

ಈ ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದಲ್ಲಿ ಪರಿಕ್ ರ್ಯಾನ್ಕೊವಿಕ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ನಂತರ ಸೆಮಿಪೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಜಾಂಗ್ ಮಿಯಾವೂ ಅವರನ್ನು 7-11, 11-7, 11-4, 9-11, 11-8, ಸೆಟ್‍ಗಳ ಅಂತರದಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು. ಇದನ್ನೂ ಓದಿ: ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

ಗುಜರಾತ್ ಮೂಲದ34 ವರ್ಷದ ಭವಿನಾಬೆನ್ 12 ವರ್ಷದವರಿದ್ದಾಗ ಪೋಲಿಯೊ ಕಾಣಿಸಿಕೊಂಡಿತ್ತು. ಬಳಿಕ ಕ್ರೀಡೆಯಲ್ಲಿ ತೊಡಗಿಕೊಂಡು ಇದೀಗ ಟೋಕಿಯೋ ಪ್ಯಾರಾಲಿಂಪಿಕ್ಸ್ ಮಹಿಳಾ ವಿಭಾಗದ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Bengaluru City8 mins ago

ಸಿಂದಗಿ, ಹಾನಗಲ್‍ನಲ್ಲಿ ಹಣ ಹಂಚ್ತಿದ್ಯಾ ಬಿಜೆಪಿ? – ಡಿಕೆಶಿ, ಸಿದ್ದು ಗಂಭೀರ ಆರೋಪ

Bengaluru City33 mins ago

ಬಿಎಸ್‍ವೈ ಆಪ್ತನ ಮೇಲಿನ ಐಟಿ ದಾಳಿಗೆ ಬಿಗ್ ಟ್ವಿಸ್ಟ್ – 750 ಕೋಟಿಯಲ್ಲಿ 600 ಕೋಟಿ ಬೇನಾಮಿ

Districts1 hour ago

ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

meghana raj
Bengaluru City2 hours ago

ನಾಳೆ ರಾಯನ್ ಸರ್ಜಾ ಹುಟ್ಟುಹಬ್ಬ – ಮಗನ ಬರ್ತ್‍ಡೇಗೆ ಮೇಘನಾ ಭರ್ಜರಿ ತಯಾರಿ

Chikkaballapur2 hours ago

ಅಪ್ರಾಪ್ತ ವಿದ್ಯಾರ್ಥಿಗಳ ರೌಡಿಸಂ – ಕಾಲೇಜಿನಲ್ಲಿ ಸ್ಟೂಡೆಂಟ್ ಮರ್ಡರ್ ಜಸ್ಟ್ ಮಿಸ್

Chikkaballapur3 hours ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಎಂಜಿನಿಯರ್ಸ್ ಭೇಟಿ, ಪರಿಶೀಲನೆ

sriramulu
Districts3 hours ago

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

Advertisement
Public TV We would like to show you notifications for the latest news and updates.
Dismiss
Allow Notifications