ಟೋಕಿಯೋ: ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 52 ವಿಭಾಗದಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಫಲಿತಾಂಶ ಘೋಷಣೆ ತಡೆ ಹಿಡಿಯಲಾಗಿದೆ.
Advertisement
ವಿನೋದ್ ಕುಮಾರ್ 19.91 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ವಿನೋದ್ ಕುಮಾರ್ ಏಷ್ಯನ್ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಇವರ ಪದಕದ ವಿಜಯಕ್ಕೆ ಇತರ ದೇಶದ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದಾಗಿ ಫಲಿತಾಂಶಕ್ಕೆ ತಡೆ ಬಿದ್ದಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್
Advertisement
India is rejoicing thanks to Vinod Kumar’s stupendous performance! Congratulations to him for the Bronze Medal. His hard work and determination is yielding outstanding results. #Paralympics
— Narendra Modi (@narendramodi) August 29, 2021
Advertisement
ಇತರ ದೇಶದ ಸ್ಪರ್ಧಿಗಳ ಆಕ್ಷೇಪದ ಪ್ರಕಾರ ವಿನೋದ್ ಎಫ್52 ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಹೊಂದಿರಲಿಲ್ಲ. ಆದರೆ ಪ್ಯಾರಾಲಂಪಿಕ್ಸ್ ಸಮಿತಿ ಹೇಳಿರುವ ಪ್ರಕಾರ ದುರ್ಬಲ ಮಾಂಸ ಖಂಡಗಳಿರುವವರು, ನಿಧಾನಗತಿಯ ಚಲನೆ ಹೊಂದಿರುವವರು ಮತ್ತು ಕಾಲಿನಲ್ಲಿ ಸಮತೋಲನ ಶಕ್ತಿ ಇಲ್ಲದವರು ಭಾಗವಹಿಸಬಹುದು ಎಂದಿತ್ತು. ಹಾಗಾಗಿ ವಿನೋದ್ ಅವರು ಸ್ಪರ್ಧಿಸಿದ್ದರು.
Advertisement
Vinod Kumar – Remember the name ????
It's a #Bronze for #IND as his best throw of 19.91m in the Men's Discus Throw F52 final earns the nation their THIRD medal of the day.
P.S – He also set a new Asian record! ????#Tokyo2020 #Paralympics #ParaAthletics pic.twitter.com/jv92vZgBDQ
— Olympic Khel (@OlympicKhel) August 29, 2021
ಟೋಕಿಯೋ 2020 ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು ಇದುವರೆಗೆ 2 ಪದಕಗಳನ್ನು ಗೆದ್ದಿದೆ. ಮೂರನೇ ಪದಕ ಗೆದ್ದಿದ್ದರೂ ಕೂಡ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದುಕೊಂಡಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್‍ನಲ್ಲಿ ಹೈ ಜಂಪ್‍ನಲ್ಲಿ ಗೆದ್ದ ನಿಶಾದ್ ಕುಮಾರ್ – ಪ್ರಧಾನಿ ಮೋದಿ ವಿಶ್