– ಸುಹಾಸ್ ಆಟವಾಡೋದನ್ನು ಕಂಡರೆ ಭಯ
ಟೋಕಿಯೋ: ಪ್ಯಾರಾಲಂಪಿಕ್ಸ್ ಬ್ಯಾಡ್ಮಿಂಟನ್‍ನಲ್ಲಿ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿರುವ ಬಗ್ಗೆ ಅವರ ಪತ್ನಿ ರಿತು ಮೆಚ್ಚುಗೆ ಸೂಚಿಸಿದ್ದು, ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ ಎಂದು ಅವರ ಪತಿಯ ಸಾಧನೆಯನ್ನು ಕೊಂಡಾಡಿದ್ದಾರೆ.
Advertisement
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವ ಸುಹಾಸ್ ಯತಿರಾಜ್, ತಮ್ಮ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮತ್ತು ಮಂಡ್ಯದಲ್ಲಿ ಪೂರೈಸಿದ್ದರು. ಬಳಿಕ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸಾಗಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ಕುಟುಂಬ ಸಮೇತರಾಗಿ ದೆಹಲಿಯ ನೋಯ್ಡಾದಲ್ಲಿ ನೆಲೆಸಿದ್ದಾರೆ.
Advertisement
ಪ್ಯಾರಾಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಖುಷಿಯನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡ ಸುಹಾಸ್ ಪತ್ನಿ ರಿತು, ನಮಗೆ ತುಂಬಾ ಸಂತೋಷವಾಗಿದೆ. ಈ ದಿನಕ್ಕಾಗಿ ಕಳೆದ 6 ವರ್ಷಗಳಿಂದ ಸುಹಾಸ್ ಅವರು ಕಷ್ಟ ಪಟ್ಟಿದ್ದರು. ಅವರು ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷೆ ಇತ್ತು, ನಾವು ದೇವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ
Advertisement
ಅವರು ಜಿಲ್ಲಾಧಿಕಾರಿಯಾಗಿದ್ದರು ಕೂಡ ಅಥ್ಲೆಟಿಕ್‍ನ್ನು ಸಮಾನವಾಗಿ ನಿರ್ವಹಿಸಿದ್ದರು. ತುಂಬಾ ಶ್ರಮದಿಂದ ದಿನಗಳನ್ನು ಕಳೆಯುತ್ತಿದ್ದರು. ಕ್ರೀಡೆ ಮತ್ತು ಡಿಸಿಯಾಗಿ ಎರಡು ಕೆಲಸಗಳ ಜವಾಬ್ದಾರಿ ಅವರ ಮೇಲೆ ತುಂಬಾ ಇತ್ತು. ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿದ್ದರು. ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಹಬ್ಬ ಹರಿದಿನಗಳನ್ನು ತೊರೆದು ಕ್ರೀಡೆಗಾಗಿ ಅವರ ಗುರಿಗಾಗಿ ಶ್ರಮ ವಹಿಸುತ್ತಿದ್ದರು. ಮೊದಲು ಬ್ಯಾಡ್ಮಿಂಟನ್‍ನ್ನು ಹವ್ಯಾಸವಾಗಿಸಿಕೊಂಡಿದ್ದರು ಬಳಿಕ ವೃತ್ತಿಪರವಾಗಿ ತೆಗೆದುಕೊಂಡು ಯಶಸ್ಸುಗಳಿಸಿದ್ದಾರೆ ಎಂದರು.
Advertisement
ಅಷ್ಟು ದೊಡ್ಡ ಕ್ರೀಡಾಕೂಟದಲ್ಲಿ ಆಟವಾಡುವ ಬಗ್ಗೆ ತುಂಬಾ ದೊಡ್ಡ ಗುರಿ ಹೊಂದಿದ್ದರು. ನಾನು ಅವರೊಂದಿಗೆ ನಿಮ್ಮ ನೈಜಾ ಸಾಮಥ್ರ್ಯದೊಂದಿಗೆ ಆಟವಾಡಿ ಎಂದಿದ್ದೆ. ಆದರೆ ನಾನು ಮಾತ್ರ ಅವರ ಆಟವನ್ನು ಯಾವತ್ತು ನೋಡುವುದಿಲ್ಲ. ನನಗೆ ತುಂಬಾ ಹೆದರಿಕೆ ಆದರೆ ದೇವರೊಂದಿಗೆ ಪ್ರಾರ್ಥಿಸುತ್ತಿದ್ದೆ. ನಾನು ಮ್ಯಾಚ್ ನೋಡಿಲ್ಲ ಆದರು ಕೂಡ ಅಂಕಗಳನ್ನು ತಿಳಿದುಕೊಳ್ಳುತ್ತಿದ್ದೆ. ಅವರ ಪಂದ್ಯ ನಡೆಯುತ್ತಿದ್ದಾಗ ನಾನು ವಾಕಿಂಗ್ ಮಾಡುತ್ತಿದೆ ಒಂದು ಗಂಟೆಗಳ ಒಂದ್ಯದಲ್ಲಿ ಅವರು ಆಡುತ್ತಿದ್ದರೆ ನಾನು ಇಲ್ಲಿ 6 ಕಿಮೀ. ವಾಕಿಂಗ್ ಮಾಡಿದ್ದೇನೆ. ನನಗೆ ಕುಳಿತುಕೊಳ್ಳಲು ಆಗದೆ ಓಡಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಅವರಿಂದ ನಾನು ಕಲಿಯಲು ಇನ್ನು ಇದೆ. ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಖುಷಿಪಟ್ಟರು. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್
A fantastic confluence of service and sports! @dmgbnagar Suhas Yathiraj has captured the imagination of our entire nation thanks to his exceptional sporting performance. Congratulations to him on winning the Silver medal in Badminton. Best wishes to him for his future endeavours. pic.twitter.com/bFM9707VhZ
— Narendra Modi (@narendramodi) September 5, 2021
ನನ್ನ ಮಗ ಎಲ್ಲರಿಗೂ ಕೂಡ ಸ್ಪೂರ್ತಿ:
ಸುಹಾಸ್ ತಾಯಿ ಜಯಶ್ರೀ ಮಾತನಾಡಿ, ನಮಗೆ ತುಂಬಾ ಸಂತೋಷವಾಗಿದೆ. ಅವನ ಒಂದು ಗುರಿಯಾಗಿತ್ತು ಈ ಕ್ರೀಡಾಕೂಟದ ಸಾಧನೆ. ನಾನು ಸಾಧನೆ ಮಾಡಬೇಕೆಂಬ ಹಂಬಲ ಇತ್ತು ದೇವರು ನೇರವೇರಿಸಿದ್ದಾನೆ. ಅವನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅವನು ಎಲ್ಲರಿಗೂ ಕೂಡ ಸ್ಪೂರ್ತಿ ಎಂದು ಸಂಭ್ರಮಿಸಿದರು.
ಫೈನಲ್‍ನಲ್ಲಿ ವಿರೋಚಿತ ಸೋಲು ಕಂಡರು ಕೂಡ ಅವನ ಆಟ ತುಂಬಾ ಖುಷಿಯಾಯಿತು. ಆತ ಛಲವಾದಿ. ಆತನ ಪರಿಶ್ರಮ ಮತ್ತು ಗುರಿ ಆತನಿಗೆ ಯಶಸ್ಸು ತಂದು ಕೊಟ್ಟಿದೆ. ಕೆಲಸ ಮುಗಿಸಿ 10 ಗಂಟೆಗೆ ಬಂದರು ಕೂಡ ಅಭ್ಯಾಸವನ್ನು ಮಾತ್ರ ಯಾವತ್ತೂ ನಿಲ್ಲಿಸುತ್ತಿರಲಿಲ್ಲ. ಅವನು ತುಂಬಾ ಬುದ್ಧಿವಂತ ಎಂದು ಮಗನ ಸಾಧನೆಗೆ ಸಂಭ್ರಮ ಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು