Latest

ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

Published

on

Share this

ಟೋಕಿಯೋ: ಪ್ಯಾರಾಲಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‍ನಲ್ಲಿ ಭಾರತದ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದರೆ, ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 16ಕ್ಕೆ ಏರಿಕೆ ಕಂಡಿದೆ.

ಪ್ರಮೋದ್ ಭಗತ್ ಫೈನಲ್ ಪಂದ್ಯದಲ್ಲಿ ಡೇನಿಯಲ್ ಬೆಥೆಲ್ ವಿರುದ್ಧ 21-14, 21-17 ನೇರ ಸೆಟ್ ಗಳಿಂದ ಗೆದ್ದು ಚಿನ್ನಕ್ಕೆ ಮುತ್ತಿಕ್ಕಿದ್ದರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದರು. ಸೆಮಿಫೈನಲ್ ನಲ್ಲಿ ಪ್ರಮೋದ್ ಭಗತ್, ಜಪಾನಿನ ಫುಜಿಹಾರಾ ಡಾಯಿಸುಕೆ ಅವರನ್ನು 21-11, 21-16 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಫೈನಲ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ಇಂದು ಎರಡು ಚಿನ್ನದ ಪದಕ ಗೆದ್ದುಕೊಂಡಿದೆ.. ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ – ಶೂಟಿಂಗ್‍ನಲ್ಲಿ ಮನೀಷ್‍ಗೆ ಚಿನ್ನ, ಸಿಂಗ್‍ರಾಜ್‍ಗೆ ಬೆಳ್ಳಿ

ಈ ಮೊದಲು ಶೂಟಿಂಗ್‍ನಲ್ಲಿ ಭಾರತ ಎರಡು ಪದಕ ಗೆದ್ದುಕೊಂಡಿತ್ತು. 50 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‍ನಲ್ಲಿ ಮನೀಷ್ ನರ್ವಾಲ್ ಚಿನ್ನಕ್ಕೆ ಮುತ್ತಿಟ್ಟರೆ, ಸಿಂಗ್‍ರಾಜ್ ಅಧಾನಾ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಇದೀಗ ಭಗತ್ ಅವರ ಪದಕದೊಂದಿಗೆ ಭಾರತ 4 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕದೊಂದಿಗೆ ಒಟ್ಟು 17 ಪದಕ ಗೆದ್ದುಕೊಂಡಿದೆ. ಇದನ್ನೂ ಓದಿ: ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications