ಬೆಂಗಳೂರು: ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಅಭಿಯಾನ ಶುರು ಮಾಡಿದ್ದಾರೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಟಾಯ್ಲೆಟ್ ಬಾಡಿಗೆ ಮನೆ ಸಖತ್ ಟ್ರೆಂಡ್ ಆಗಿದೆ
ಬಿಬಿಎಂಪಿ ಸ್ಥಾಪಿಸಿರುವ ನಿರ್ಮಲ ಶೌಚಾಲಯ ಮನೆಯಾಗಿ ಪರಿವರ್ತನೆಯಾಗಿದೆ. ಅಂದಹಾಗೇ ಈ ಶೌಚಾಲಯ ಕಮ್ ಮನೆ ವಾರ್ಡ್ ನಂಬರ್ 130ರ ಭುವನೇಶ್ವರಿ ನಗರದಲ್ಲಿದೆ. ಎಂಎಲ್‍ಎ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಗುತ್ತಿಗೆದಾರ ಸತೀಶ್ ನಾಯ್ಕ್ ಈ ಟಾಯ್ಲೆಟ್‍ನ್ನು ಬಾಡಿಗೆ ಕೊಟ್ಟು ದೇಶದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
Advertisement
Advertisement
ಆರ್ಮಿ ಲ್ಯಾಂಡ್‍ನಲ್ಲಿ ಈ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದ್ದು, ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಕುಟುಂಬವೊಂದು ಇದನ್ನ ನಿರ್ವಹಣೆ ಮಾಡುತ್ತಿದೆ. ಪೌರಕಾರ್ಮಿಕ ಕುಟುಂಬ ಪ್ರತಿ ತಿಂಗಳು ಗುತ್ತಿಗೆದಾರ ಸತೀಶ್ ನಾಯ್ಕ್ ಗೆ 10 ಸಾವಿರ ರೂಪಾಯಿ ಕೊಡಬೇಕು. ಶೌಚಾಲಯದ ನಿರ್ವಹಣೆಗಾಗಿ ಮೂರು ದಿನಕ್ಕೊಮ್ಮೆ ಟ್ಯಾಂಕರ್ ನೀರನ್ನ ಪೌರಕಾರ್ಮಿಕರೇ ತರಿಸಿಕೊಳ್ಳುತ್ತಾರೆ ಎಂದು ಶೌಚಾಲಯದಲ್ಲಿ ವಾಸಿಸುವವರು ಹೇಳುತ್ತಿದ್ದಾರೆ.
Advertisement
ಮನೆ ಮಾತ್ರ ಅಲ್ಲ ಶೌಚಾಲಯದ ಮುಂದಿನ ಜಾಗದಲ್ಲಿ ಟೀ-ಕಾಫಿ ಅಂಗಡಿಯನ್ನು ನಡೆಸಲು ಅಲ್ಲಿನ ಬಿಬಿಎಂಪಿ ಸದಸ್ಯೆ ಶಾರದಾ ಮುನಿರಾಜು ಅವರೇ ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಬೇರೆ ಬಾಡಿಗೆ ತಗೋತಾರೆ ಎಂದು ತಿಳಿದು ಬಂದಿದೆ.
Advertisement
ಒಂದೇ ಜಾಗದಲ್ಲಿ ಶೌಚಾಲಯ, ಟೀ-ಕಾಫಿ ಅಂಗಡಿ ಮತ್ತು ಒಂದು ಕುಟುಂಬದ ವಾಸ. ಇದೆಲ್ಲಾ ಕಳೆದ 8 ವರ್ಷದಿಂದ ನಡೆಯುತ್ತಿದೆ. ಶೌಚಾಲಯದಲ್ಲೇ ವಾಸವಾದರೆ ಆ ಪೌರಕಾರ್ಮಿಕರ ಆರೋಗ್ಯವೇನಾಗಬೇಕು? ಈ ತರಾನೂ ದಂಧೆ ನಡೆಸ್ತಾರ? ಬಿಬಿಎಂಪಿ ಸದಸ್ಯೆ ಅನುಮತಿಯನ್ನ ನೀಡಿರುವುದಾದರೂ ಯಾಕೆ ಎಂಬ ಅನುಮಾನ ಜನರಲ್ಲಿ ಮೂಡಿದೆ.