ಶ್ರೀನಗರ: ಭಯೋತ್ಪಾದನೆ ವಿರುದ್ಧ ಒಟ್ಟಿಗೆ ಹೋರಾಟ ಮಾಡೋಣ ಎಂದು ಕಾಶ್ಮೀರಿಗಳಿಗೆ ಭಾರತೀಯ ಸೇನೆ ವಿಶೇಷ ಸಂದೇಶ ಕೊಟ್ಟಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಭಾರತೀಯ ಸೇನೆಯು, ಸಮಾಜದ ಪ್ರತಿಯೊಂದು ವರ್ಗವು ಹೇಗೆ ಭಯೋತ್ಪಾದನೆಯ ನೋವನ್ನು ಅನುಭವಿಸಿದೆ ಎಂಬುದನ್ನು ಒತ್ತಿಹೇಳುವ ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಎಲ್ಲರೂ ಒಟ್ಟಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡೋಣ ಎಂದು ನಾಗರಿಕರಿಗೆ ಕರೆ ನೀಡಿದೆ. ಇದನ್ನೂ ಓದಿ: ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್
Advertisement
Advertisement
ಟ್ವಿಟ್ಟರ್‌ನಲ್ಲಿ ಏನಿದೆ?
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ‘ಕಾಶ್ಮೀರ್ ಫೈಟ್ಸ್ ಬ್ಯಾಕ್’ ಎಂಬ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿದೆ. ಈ ಟ್ವೀಟ್‍ನಲ್ಲಿ, ಜನರು ಭಯೋತ್ಪಾದನೆಯಿಂದ ಅನುಭವಿಸುತ್ತಿರುವ ನೋವು ಕೊನೆಗೊಳಿಸಲು ಭದ್ರತಾ ಪಡೆಗಳನ್ನು ಇನ್ನಷ್ಟು ಬಲಪಡಿಸಬೇಕು. ನಮ್ಮ ಸೇನೆ ಜೊತೆಗೆ ನಾಗರಿಕರು ಕೈಜೋಡಿಸಬೇಕು ಎಂದು ಕೇಳಿಕೊಂಡರು.
Advertisement
खुशहाली की ओर बढ़ता हमारा #Kashmir @adgpi @Whiteknight_IA @firefurycorps @prodefencejammu @PRODefSrinagar @proudhampur https://t.co/8AKc9BZg2B
— NORTHERN COMMAND – INDIAN ARMY (@NorthernComd_IA) April 15, 2022
Advertisement
ವೀಡಿಯೋದಲ್ಲಿ, ಕಾಶ್ಮೀರಿ ಪಂಡಿತರ ನಿರ್ಗಮನ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಕಲ್ಲು ತೂರಾಟದ ದೃಶ್ಯಗಳನ್ನು ತೋರಿಸಲಾಗಿದೆ. ದಶಕಗಳಿಂದ ಭಯೋತ್ಪಾದಕರು ಕಾಶ್ಮೀರಿ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದಾರೆ. ವಿವಿಧ ಸಮುದಾಯಗಳ ನಡುವೆ ಹೇಗೆ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ಈ ವೀಡಿಯೋ ಎತ್ತಿ ತೋರಿಸುತ್ತೆ. ಈ ಮೂಲಕ ಕೋಮು ಸೌಹಾರ್ದತೆಯ ಮಹತ್ವವನ್ನು ಒತ್ತಿಹೇಳುತ್ತದೆ.
ಶುಜಾತ್ ಬುಖಾರಿ, ಅರ್ಜುಮಂಡ್ ಮಜೀದ್, ಮಖನ್ ಲಾಲ್ ಬಿಂದ್ರೂ, ಸರಪಂಚ್ ಅಜಯ್ ಪಂಡಿತ್, ಸುಪಿಂದರ್ ಕೌರ್, ವಾಸಿಂ ಬಾರಿ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತ್ ಮತ್ತು ಪರ್ವೇಜ್ ಅಹ್ಮದ್ ದಾರ್ ಸೇರಿದಂತೆ ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿಗಳಿಗೆ ವೀಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಯಬಾಗದಲ್ಲಿ ಆರನೇ ವಾರಕ್ಕೆ ಕಾಲಿಟ್ಟ ‘ಕನ್ನೇರಿ’ ಚಿತ್ರ – ಪ್ರೇಕ್ಷಕರಿಂದ ಸಂಭ್ರಮಾಚರಣೆ
ಕೊನೆಯಲ್ಲಿ, ಈ ಹೋರಾಟದಲ್ಲಿ ಕಾಶ್ಮೀರ ಏಕಾಂಗಿಯಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಒಟ್ಟಾಗಿ ನಾವು ಈ ಹೋರಾಟವನ್ನು ಗೆಲ್ಲುತ್ತೇವೆ. ಯಾರು ಬೇಕಾದರೂ ನಮ್ಮ ಜೊತೆ ಕೈಜೋಡಿಸಿ ಎಂದು ಬರೆದು ಭಾರತೀಯ ಸೇನೆ ಕರೆ ನೀಡಿದೆ.