– ಒಂದು ವಾರ ಕಾಲೇಜುಗಳನ್ನು ಬಂದ್ ಮಾಡಿ
– ಯಾರು ಎಷ್ಟೆಷ್ಟು ಕೇಸರಿ ಶಾಲಿಗೆ ಆರ್ಡರ್ ಕೊಟ್ಟಿದ್ದಾರೆ..?
ಬೆಂಗಳೂರು: ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಅತಿ ದುಃಖದ ದಿನವಾಗಿದೆ. ಆ ದುಃಖವನ್ನ ಹೇಳುವುದಕ್ಕೆ ಸಾಧ್ಯವಿಲ್ಲ. ನಮಗೆ ಒಂದು ಸಂವಿಧಾನ ಕೊಟ್ಟಿದ್ದಾರೆ. ನಮ್ಮ ಧ್ವಜವೇ ನಮ್ಮ ಧರ್ಮ. ನಮ್ಮ ದೇಶ ಕಟ್ಟಲು ಐಕ್ಯತೆಗೆ ಹಲವರು ಪ್ರಾಣ ಕೊಟ್ಟಿದ್ದಾರೆ. ನಮ್ಮ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ. ರಾಜ್ಯದಲ್ಲಿ ಏನ್ ಆಗ್ತಿದೆ ಎಂದು ಪ್ರಶ್ನಿಸಿದರು.
Advertisement
ಕೇಸರಿ ಬಗ್ಗೆ ಎಲ್ಲರಿಗೂ ಗೌರವ ಇದೆ. ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಹೀಗಿರುವಾಗ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿಧ್ವಜ ಹಾರಿಸುವ ಅಗತ್ಯವೇನಿದೆ. ರಾಷ್ಟ್ರಧ್ವಜ ಇಳಿಸಿರುವುದಕ್ಕೆ ಯಾರು ಉತ್ತರ ಕೊಡ್ತಾರೆ..? ವಿದ್ಯಾರ್ಥಿಗಳ ಭವಿಷ್ಯ ಅವರ ಉದ್ಯೋಗದಲ್ಲಿ ಬದುಕಿನ ಬಗ್ಗೆ ಯೋಚನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಮೊದಲಿನಿಂದ ಏನು ಪಾಲನೆ ಮಾಡಿಕೊಂಡು ಬಂದಿದ್ದಾರೆ ಅದನ್ನ ಮುಂದುವರಿಸಿಕೊಂಡು ಹೋಗಬೇಕು ಎಂದರು. ಇದನ್ನೂ ಓದಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ
Advertisement
Advertisement
ನಾನು ಸಿಎಂಗೆ ಮನವಿ ಮಾಡ್ತೇನೆ. ರಾಜ್ಯಕ್ಕೆ ಹಿಂದಕ್ಕೆ ಹೋಗುತ್ತಿದೆ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ಸಮಸ್ಯೆ ಬಗ್ಗೆ ಹರಿಯುವರಿಗೂ ಒಂದು ವಾರಗಳ ಕಾಲೇಜುಗಳನ್ನು ಬಂದ್ ಮಾಡಿ. ಪೋಷಕರು, ಶಾಲಾ ಆಡಳಿತ ಮಂಡಳಿ, ಜಿಲ್ಲಾ ಆಡಳಿತ ಜೊತೆ ಚರ್ಚೆ ತೀರ್ಮಾನ ಮಾಡಲಿ. ಒಟ್ಟಿನಲ್ಲಿ ರಾಜ್ಯಾದ್ಯಂತ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂಗೆ ಕೈಮುಗಿದು ಡಿಕೆಶಿ ಮನವಿ ಮಾಡಿದರು.
Advertisement
ಯಾರು ಎಷ್ಟೆಷ್ಟು ಕೇಸರಿ ಶಾಲಿಗೆ ಆರ್ಡರ್ ಕೊಟ್ಟಿದ್ದಾರೆ. ಆರ್ಡರ್ ಕೊಟ್ಟಿರುವವರ ಬಗ್ಗೆ ಗೊತ್ತಿದೆ. ಇದು ಇನ್ನೆಲ್ಲಿಗೆ ಹೋಗುತ್ತೋ ಗೊತ್ತಿಲ್ಲ. ಸೀಮೆಎಣ್ಣೆ, ಪೆಟ್ರೋಲ್ ಹಾಕೋರು ಗೊತ್ತಿದೆ. ಮೊದಲು ಇದನ್ನ ನಿಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಕಿಡಿಕಾರಿದರು.
ಇದೇ ವೇಳೆ ವಿವಾದದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾವ ಸಚಿವರಿಗೂ ಉತ್ತರ ಕೊಡಲು ಹೋಗುವುದಿಲ್ಲ. ಯಾರ್ ಯಾರ್ ರಾಜಕಾರಣ ಮಾಡ್ಕೋಬೇಕು, ಯಾರ್ ಯಾರ್ ಸೀಮೆ ಹಾಕೋಬೇಕು. ಯಾರ್ ಯಾರ್ ಎಷ್ಟೆಷ್ಟು ಶಾಲುಗಳಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಗೊತ್ತಿದೆ. ಮಿನಿಸ್ಟರ್ ಪಾಲಿಟಿಕ್ಸ್, ಬಿಜೆಪಿ ಪಾಲಿಟಿಕ್ಸ್, ಸಂಘಪರಿವಾರದ ಪಾಲಿಟಿಕ್ಸ್, ಕಾಂಗ್ರೆಸ್ ಪಾಲಿಟಿಕ್ಸ್, ಎಸ್.ಡಿ ಪಿ ಐ ಪಾಲಿಟಿಕ್ಸ್ ಇವೆಲ್ಲ ಈಗ ಬೇಡ. ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ. ಕೋರ್ಟ್ ಕೊಟ್ಟ ಆದೇಶ ತಲೆ ಬಾಗಬೇಕು ಎಂದು ಗರಂ ಆದರು. ಇದನ್ನೂ ಓದಿ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ