ಬೆಂಗಳೂರು: 2014 ಲೋಕಸಭಾ ಚುನಾವಣೆಯಲ್ಲಿ ನಿಖರ ಭವಿಷ್ಯ ನುಡಿದಿದ್ದ ಟುಡೇಸ್ ಚಾಣಕ್ಯ ಈ ಬಾರಿ ಮಧ್ಯಪ್ರದೇಶ, ಚತ್ತೀಸ್‍ಗಢ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದ್ದು, ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಕೊಚ್ಚಿಹೋಗಲಿದೆ ಎಂದು ತಿಳಿಸಿದೆ.
ಟುಡೇಸ್ ಚಾಣಕ್ಯದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ 125 (± 12), ಬಿಜೆಪಿ 103 (± 12) ಹಾಗೂ ಇತರೇ 2 ರಿಂದ 5 ಸ್ಥಾನ ಗಳಿಸಲಿದೆ ಎಂದು ತಿಳಿಸಿದೆ. ಇದರಲ್ಲಿ ಕಾಂಗ್ರೆಸ್ ಶೇ.45 ರಷ್ಟು ಮತ, ಬಿಜೆಪಿ ಶೇ.41 ಹಾಗೂ ಇತರೇ ಶೇ. 14 ಮತಗಳು ಲಭಿಸಲಿದೆ ಎಂದಿದೆ.
Advertisement
#TCExitPoll
MP Seat Projection
Congress 125 ± 12 seats
BJP 103 ± 12 seats
Others 2 ± 5 seats
— Today's Chanakya (@TodaysChanakya) December 7, 2018
Advertisement
ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ 50 (±8), ಬಿಜೆಪಿ 36 (±8) ಹಾಗೂ ಇತರೇ 4 (±3) ಸ್ಥಾನಗಳು ಪಡೆಯಲಿದೆ. ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.42, ಬಿಜೆಪಿ ಶೇ.38 ಹಾಗೂ ಇತರೇ ಶೇ.20 ರಷ್ಟು ಲಭಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.
Advertisement
#TCExitPoll
Chhattisgarh Seat Projection
Congress 50 ± 8 seats
BJP 36 ± 8 seats
Others 4 ± 3 seats
— Today's Chanakya (@TodaysChanakya) December 7, 2018
Advertisement
ರಾಜಸ್ತಾನದಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದ್ದು ಎಂದು ಸಮೀಕ್ಷೆ ತಿಳಿಸಿದ್ದು, ಒಟ್ಟು 199 ಸ್ಥಾನಗಳಲ್ಲಿ ಕಾಂಗ್ರೆಸ್ 123 (±12), ಬಿಜೆಪಿ 68 (±12) ಹಾಗೂ ಇತರೆ 8 (±5) ಸ್ಥಾನಗಳು ಪಡೆಯಲಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಶೇ.47 (±3), ಬಿಜೆಪಿ ಶೇ.37 (±3) ಹಾಗೂ ಇತರೇ ಶೇ.16 (±3) ಪ್ರಮಾಣದಲ್ಲಿ ಪಡೆಯಲಿವೆ ಎಂದು ತಿಳಿಸಿದೆ. ಇದನ್ನು ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್‌ಎಸ್ – ಮಧ್ಯಪ್ರದೇಶ, ಛತ್ತೀಸ್‍ಗಢ ಕೈ, ಕಮಲ ಮಧ್ಯೆ ಭಾರೀ ಫೈಟ್
#TCExitPoll
Rajasthan Seat Projection
Congress 123 ± 12 seats
BJP 68 ± 12 seats
Others 8 ± 5 seats
— Today's Chanakya (@TodaysChanakya) December 7, 2018
ಕರ್ನಾಟಕ ವಿಧಾನಸಭಾ ಚುನಾವಣೆಗೂ ಚುನಾವಣೋತ್ತರ ಸಮೀಕ್ಷೆಯಲ್ಲಿ ಟುಡೇಸ್ ಚಾಣಕ್ಯ, ಬಿಜೆಪಿ 120 ±11, ಕಾಂಗ್ರೆಸ್ 73 ±11, ಜೆಡಿಎಸ್ 26 ±7 ಹಾಗೂ ಇತರೇ 3 ±3 ಸಿಗಲಿದೆ ಎಂದು ತಿಳಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 291 ಸ್ಥಾನಗಳಿಸಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282 ಸ್ಥಾನ ಗೆದ್ದುಕೊಂಡಿತ್ತು. ಆದರೆ ಬಿಹಾರ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯದ ಲೆಕ್ಕಾಚಾರ ತಲೆಕೆಳಗೆ ಆಗಿತ್ತು. ಬಿಜೆಪಿ ಮೈತ್ರಿಕೂಟ 155 ಸ್ಥಾನಗಳಿಸಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಎನ್‍ಡಿಎ ಮೈತ್ರಿಕೂಟ 61 ಸ್ಥಾನಗಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv