ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಅದ್ಧೂರಿ ರೋಡ್‌ಶೋ ನಡೆಸಿರುವ ಪ್ರಧಾನಿ ಮೋದಿ ಅವರು ಭಾನುವಾರ ಮೈಸೂರಿನ ವಿವಿಧೆಡೆ ರೋಡ್ ಶೋ (Modi Roadshow) ನಡೆಸುತ್ತಿದ್ದು, ವಿವಿಧ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
5 ಕ್ಷೇತ್ರಗಳ ಮತದಾರರ ಮನ ಗೆಲ್ಲಲು ಅಖಾಡಕ್ಕಿಳಿದಿರುವ ಮೋದಿ ದಸರಾ ಜಂಬೂ ಸವಾರಿ ಮಾರ್ಗದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಗನ್‌ಹೌಸ್ ವೃತ್ತದಿಂದ ರೋಡ್ ಶೋ ಆರಂಭವಾಗಲಿದ್ದು, ಅದಕ್ಕೂ ಮುನ್ನ ಜೆಎಸ್‌ಎಸ್ ವಿದ್ಯಾಪೀಠದ ಮುಂಭಾಗದಲ್ಲಿರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಮೋದಿ ʻಮನ್ ಕಿ ಬಾತ್ʼ100ನೇ ಸಂಚಿಕೆ ಇಂದು ಪ್ರಸಾರ
ರೋಡ್ ಶೋಗೆ ಸಜ್ಜಾದ ಮೈಸೂರು: ಮೈಸೂರಿನ 5 ಕ್ಷೇತ್ರಗಳನ್ನ ಗುರಿಯಾಗಿಸಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸ್ಕೃತ ಪಾಠ ಶಾಲೆ ಸರ್ಕಲ್, ಕಾಪೋರೇಷನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಕೆ.ಆರ್ ಸರ್ಕಲ್ ಆಯುರ್ವೇದ ಸರ್ಕಲ್, ಹಳೆ ಆರ್‌ಎಂಸಿ, ಹೈವೆ ಸರ್ಕಲ್, ಮಿಲೀನಿಯಂ ಸರ್ಕಲ್ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಕೂರಲು ದೇವರಾಜ ಮಾರುಕಟ್ಟೆ, ಹಳೆ ಎಪಿಎಂಸಿ ಸರ್ಕಲ್, ಗನ್ ಹೌಸ್ ಸೇರಿದಂತೆ 5 ಕಡೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಗಂಟೆ ಸಮಯದಲ್ಲಿ 4 ಕಿಮೀ ರ‍್ಯಾಲಿ ನಡೆಯಲಿದೆ. ಸಕಲ ಸಿದ್ಧತೆಗಳೊಂದಿಗೆ ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಬೇಲೂರಿನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಮೋದಿ, ಸಂಜೆ 5.30ಕ್ಕೆ ಮೈಸೂರಿನ ಓವೆಲ್ ಮೈದಾನಕ್ಕೆ ಬರಲಿದ್ದಾರೆ. 5.45 ರಿಂದ ಮೋದಿ ರೋಡ್ ಶೋ ಆರಂಭವಾಗಲಿದೆ. ರೋಡ್ ಶೋ ಮುಗಿಸಿ ರಿಂಗ್ ರಸ್ತೆ ಮಾರ್ಗವಾಗಿ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಲಿರುವ ಮೋದಿ, ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ
ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಮಾರ್ಗಗಳಲ್ಲಿ ಬೆಳಗ್ಗೆ 12 ರಿಂದ ರಾತ್ರಿ 8 ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗಿದೆ. ಇದನ್ನೂ ಓದಿ: ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ – ಕನ್ನಡದಲ್ಲೇ ಮೋದಿ ಘೋಷಣೆ
ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
– ಕೌಟಿಲ್ಯ ಸರ್ಕಲ್ ನಿಂದ ಮುಡಾ ಜಂಕ್ಷನ್ ವರೆಗಿನ ರಾಧಕೃಷ್ಣ ಮಾರ್ಗ.
– ಮುಡಾ ಸರ್ಕಲ್ ನಿಂದ ರಾಮಸ್ವಾಮಿ ಸರ್ಕಲ್ ವರೆಗಿನ ಜೆಎಲ್‌ಬಿ ರಸ್ತೆ.
– ರಾಮಸ್ವಾಮಿ ಸರ್ಕಲ್ ನಿಂದ ಗನ್ ಹೌಸ್ ವರೆಗಿನ ಚಾಮರಾಜ ಜೋಡಿ ರಸ್ತೆ.
– ಬಸವೇಶ್ವರ ವೃತ್ತದಿಂದ ಹೈವೆ ವೃತ್ತದವರೆಗಿನ ಸಯ್ಯಾಜಿರಾವ್ ರೋಡ್.
– ಹೈವೇ ಸರ್ಕಲ್ ನಿಂದ ಎಲ್‌ಐಸಿ ಸರ್ಕಲ್ ವರೆಗಿನ ನೆಲ್ಸನ್ ಮಂಡೇಲ ರಸ್ತೆ.
– ಎಲ್‌ಐಸಿ ಸರ್ಕಲ್ ನಿಂದ ಕೆಂಪೇಗೌಡ ವೃತ್ತದವರೆಗಿನ ಹಳೇ ಮೈಸೂರು ಬೆಂಗಳೂರು ರಸ್ತೆ.
– ಕೆಂಪೇಗೌಡ ಸರ್ಕಲ್ ನಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ರಿಂಗ್ ರಸ್ತೆ.