ಬೆಂಗಳೂರು: ಗುರುವಾರ ಮೆಟ್ರೋ ಸಿಬ್ಬಂದಿ ಮೇಲೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಫೋರ್ಸ್ ಕಾನ್ಸ್‍ಟೇಬಲ್‍ನಿಂದ ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ನಡುವೆ ನಡೆದಿದ್ದ ಗಲಾಟೆ ವೇಳೆ ಆರು ಜನ ಬಿಎಂಆರ್‍ಸಿಎಲ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು..
Advertisement
ಬಿಎಂಆರ್‍ಸಿಎಲ್ ಸಿಬ್ಬಂದಿ ಬಂಧನವನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೂಡಲೇ ಬಂಧಿಸಲ್ಟಟ್ಟ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿಬೇಕೆಂದು ಬೈಯಪ್ಪನಹಳ್ಳಿ ಡಿಪೋದಲ್ಲಿ ಸಾವಿರಾರರು ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಮೆಟ್ರೋ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಮೆಟ್ರೋ ಸಂಚಾರ ಸಂಪೂರ್ಣ ನಿಂತು ಹೋಗಿದೆ.
Advertisement
Advertisement
ಇನ್ನು ಬಂಧಿಸಿದ ಮೆಟ್ರೋ ಸಿಬ್ಬಂದಿಯನ್ನು ಬಿಡಡುಗಡೆ ಮಾಡಲಾಗುವುದಿಲ್ಲ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ. ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್‍ಸಿಎಲ್ ಎಂ.ಡಿ ಪ್ರದೀಪ್ ಸಿಂಗ್ ಭೇಟಿ ನೀಡಿದ್ದು, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement