ಹಾಸನ: ವರ್ಷಕ್ಕೊಮ್ಮೆ ದೇವಾಲಯ ಬಾಗಿಲು ತೆರೆಯುವ ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆ ಹಾಸನಾಂಬೆ ದೇವಿ (Hassanambe) ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬರುತ್ತಿದೆ.
Advertisement
ಹಾಸನಾಂಬೆ ಸಾರ್ವಜನಿಕರ ದರ್ಶನಕ್ಕೆ ಇಂದು 12ನೇ ದಿನದ ಸಾರ್ವಜನಿಕ ದರ್ಶನ ಹಾಗೂ ದೇವಿಯ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು, ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ. ಇಂದು ಸಂಜೆ 4 ಗಂಟೆಯವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಹಾನೈವೇದ್ಯ ಹಾಗೂ ಉತ್ಸವವಿರುವುದರಿಂದ ಈ ವೇಳೆ ದೇವಿ ದರ್ಶನಕ್ಕೆ ಅವಕಾಶವಿರುವುದಿಲ್ಲ.
Advertisement
Advertisement
ಮತ್ತೆ ರಾತ್ರಿ 11 ಗಂಟೆಯಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೂ ಸಾರ್ವಜನಿಕರಿಗೆ ದೇವಿ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದ್ದು, ನಾಳೆ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ರೂ. ಪಂಗನಾಮ
Advertisement
ನಿನ್ನೆ ಸೂರ್ಯ ಗ್ರಹಣ ಹಿನ್ನೆಲೆ ದೇವಲಾಯದ ಬಾಗಿಲು ಮುಚ್ಚಿತ್ತು. ಇಂದು ಮತ್ತೆ ದರ್ಶನ ಆರಂಭವಾದ ಹಿನ್ನೆಲೆ ದೀಪಾವಳಿ ಸಂಭ್ರಮದ ನಡುವೆ ಶಕ್ತಿ ದೇವತೆ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ಗುರಾಯಿಸಿದ್ದಕ್ಕೆ ಪೊಲೀಸರಿಂದ ಕಪಾಳಮೋಕ್ಷ – ಸೇಡಿಗೆ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಇಂದು ಹಾಸನಾಂಬೆ ದೇವಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರು ಸರತಿ ಸಾಲಿನಿಂದ ಏಕಾಏಕಿ ದೇವಿ ದರ್ಶನ ಪಡೆಯಲು ನುಗ್ಗಿದ್ದಾರೆ. ಈ ವೇಳೆ ಹಾಸನಾಂಬೆ ದೇವಿ ಕಾಣುತ್ತಲೇ ದೇವರು ಮೈಮೇಲೆ ಬಂದಂತೆ ಮಹಿಳೆ ಜೋರಾಗಿ ಕಿಡುಚಾಡಿದ್ದಾಳೆ. ಮಹಿಳೆಯನ್ನು ಹಿಡಿದುಕೊಳ್ಳಲು ಪತಿ ಹಾಗೂ ಪೊಲೀಸರು ಹರಸಹಾಸ ಪಟ್ಟಿದ್ದಾರೆ. ನಂತರ ಹಣೆಗೆ ಕುಂಕುಮ ಹಚ್ಚುತ್ತಿದ್ದಂತೆ ಮಹಿಳೆ ಶಾಂತಳಾಗಿದ್ದಾಳೆ.