– ಸೋಲದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು (Cremation) ಅವರ ನೆಚ್ಚಿನ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
Advertisement
ಈಗಾಗಲೇ ಜೆಸಿಬಿ ಮೂಲಕ ಫಾರ್ಮ್‌ಹೌಸ್‌ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭಗೊಂಡಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ತರಯಾರಿ ಶುರುವಾಗಿದೆ. ಮತ್ತೊಂದೆಡೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು ಬರುವ ಗಣ್ಯರಿಗೆ ಅಂತಿಮ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇದನ್ನೂ ಓದಿ: ಲೀಲಾವತಿ ಖಾಸಗಿ ವಿಷಯ ಹೇಳಿ ತುಂಬಾ ಅತ್ತಿದ್ದರು: ನಟಿ ಸರೋಜಾದೇವಿ
Advertisement
Advertisement
ಬೆಳಗ್ಗೆ 9:30ರ ವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈದಾನ ಸುತ್ತ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕರು ದರ್ಶನ ಪಡೆಯುತ್ತಿದ್ದು, ಎಲ್ಲರೂ ಲೀಲಾವತಿ ಅವರ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಿದ್ದಾರೆ. ಇತರ ಗಣ್ಯರೂ ಅಂತಿಮ ದರ್ಶನ ಪಡೆದ ಬಳಿಕ ಅಂತ್ಯಕ್ರಿಯೆ ಕಾರ್ಯ ನೆರವೇರಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಕಾವು – 14 ಸಂಘಟನೆಗಳಿಂದ ಸಾಲು ಸಾಲು ಧರಣಿ
Advertisement
ಪೊಲೀಸ್ ಭದ್ರತೆ ಹೇಗೆ?
ಶನಿವಾರ (ಇಂದು) ಮಧ್ಯಾಹ್ನ ಮೆರವಣಿಗೆ ಮೂಲಕ ಸೋಲದೇವನಹಳ್ಳಿಯ ತೋಟಕ್ಕೆ ತೆರಳಿ, ಅಲ್ಲಿ ಮಣ್ಣು ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರ ಕುಟುಂಬದೊಂದಿಗೆ ಮಾತನಾಡಲಾಗಿದೆ. ಲೀಲಾವತಿ ಅಂತಿಮ ದರ್ಶನದ ಭದ್ರತೆಗೆ 500 ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ, ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ 6 ಮಂದಿ ಡಿವೈಎಸ್ಪಿ, 15 ಮಂದಿ ಇನ್ಸ್‌ಪೆಕ್ಟರ್ ಹೆಚ್ಚುವರಿಯಾಗಿ ಕೆಎಸ್ಆರ್‌ಪಿ ತುಕಡಿಗಳ ನಿಯೋಜನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ. ಇದನ್ನೂ ಓದಿ: ಲೀಲಾವತಿ ವಯಸ್ಸು ಚಿಕಿತ್ಸೆಗೆ ಸ್ಪಂದಿಸಲಿಲ್ಲ: ಡಾ.ವಿಕಾಸ್