ನಟಿ ಲೀಲಾವರ ಜೊತೆ ಸಾಕಷ್ಟು ಒಡನಾಟ ಹೊಂದಿದ್ದ ಮತ್ತು ಅವರೊಂದಿಗೆ ಸಿನಿಮಾದಲ್ಲೂ ನಟಿಸಿರುವ ಹಿರಿಯ ನಟಿ ಬಿ.ಸರೋಜಾದೇವಿ (B. Sarojadevi) ಅವರು ಲೀಲಾವತಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಲೀಲಾವತಿ ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನೇ ಕೇಳೋಕೆ ಕಷ್ಟವಾಗುತ್ತಿದೆ ಎಂದು ಅವರು, 25 ದಿನಗಳ ಹಿಂದೆಯಷ್ಟೇ ಅವರ ಮನೆಗೆ ಹೋಗಿ ಭೇಟಿ ಮಾಡಿರುವ ಸಂಗತಿಯನ್ನು ತಿಳಿಸಿದರು.
Advertisement
ಲೀಲಾವತಿ ಮತ್ತು ನಾನು ಒಟ್ಟಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇವೆ. ನಾವಿಬ್ಬರೂ ಬೆಂಗಳೂರಿನಿಂದ ಮದ್ರಾಸ್ ಗೆ ವಿಮಾನದಲ್ಲಿ ಹೋಗುವಾಗ, ನನ್ನ ಪಕ್ಕದಲ್ಲೇ ಬಂದು ಕೂರುತ್ತಿದ್ದರು. ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಂಡು ತುಂಬಾ ಅಳುತ್ತಿದ್ದರು. ಅವರು ಅಳದೇ ಇರುವ ದಿನಗಳೇ ಇಲ್ಲ ಎನ್ನಬಹುದು. ಅಷ್ಟೊಂದು ಕಷ್ಟ ಪಟ್ಟ ಜೀವವದು. ಹಲವು ದಿನಗಳ ಹಿಂದೆ ನಾನು ಅವರಿಗೆ ಮನೆಗೆ ಹೋಗಿದ್ದಾಗ, ಅವರ ಮಗ ಯಾರು ಬಂದಿದ್ದಾರೆ ಹೇಳು ಅಂದ.. ಸರೋಜಾದೇವಿ ಎಂದು ಹೇಳಿದ್ದರು. ಈಗ ಮತ್ತೆ ಆ ಮಾತನ್ನು ಕೇಳಿಸಿಕೊಳ್ಳೊಕೆ ಆಗ್ತಿಲ್ಲವಲ್ಲ ಅಂತ ಸಂಕಟ ಆಗುತ್ತಿದೆ ಎಂದರು ಸರೋಜಾದೇವಿ.
Advertisement
Advertisement
ಅವರ ದೇಹ ಬಳಲಿತ್ತು
Advertisement
ಸತತ ಎರಡು ತಿಂಗಳಿಂದ ನಟಿ ಲೀಲಾವತಿ (Leelavati) ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ವಿಕಾಸ್ (Dr.Vikas), ನಟಿಗೆ ಚಿಕಿತ್ಸೆ ನೀಡಿದ ವಿವರವನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಲೀಲಾವತಿ ಅವರಿಗೆ ಏನೆಲ್ಲ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನುವ ವಿವರವನ್ನೂ ಅವರು ನೀಡಿದ್ದಾರೆ.
ಸತತ ಎರಡು ತಿಂಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ವಾರದ ಹಿಂದೆಯಷ್ಟೇ ನಾನು ಅವರ ಮನೆಗೆ ಹೋಗಿದ್ದೆ. ಮಲಗಿದ್ದಲ್ಲೇ ಮಲಗಿದ್ದರಿಂದ ಬೆನ್ನಿನಲ್ಲಿ ನೋವಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸೋದು ಕಷ್ಟವಾಗಿಲ್ಲ. ಮನೆಯಲ್ಲೇ ಟ್ರೀಟ್ ಮೆಂಟ್ ಕೊಡಲು ಮುಂದಾದೆವು ಎಂದರು ಡಾ.ವಿಕಾಸ್.
ಮುಂದುವರೆದು ಮಾತನಾಡಿದ ಡಾ.ವಿಕಾಸ್, ‘ಲೀಲಾವತಿ ಅವರ ದೇಹದಲ್ಲಿ ಪ್ರೊಟಿನ್ ಕಡಿಮೆ ಇತ್ತು. ಉಪ್ಪಿನಾಂಶ ಕೂಡ ತೀರಾ ಕಡಿಮೆ ಆಗಿತ್ತು. ಹೊಟ್ಟೆಗೆ ಡೈರೆಕ್ಟ್ ಆಗಿ ಅವರಿಗೆ ಆಹಾರವನ್ನು ಕೊಡುವಂತಹ ವ್ಯವಸ್ಥೆ ಮಾಡಲಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ವಯಸ್ಸಿನ ಕಾರಣದಿಂದಾಗಿ ಅವರ ದೇಹ ಚಿಕಿತ್ಸೆಗೆ ಬೇಗ ಬೇಗ ಸ್ಪಂದಿಸುತ್ತಿರಲಿಲ್ಲ ಎಂದಿದ್ದಾರೆ.