ಸ್ಯಾಂಡಲ್‌ವುಡ್ (Sandalwood) ಅಂಗಳದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ (Toby Film) ಸಿನಿಮಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಮಾಲಿವುಡ್‌ನಲ್ಲಿ ಅಬ್ಬರಿಸಲು ವೇದಿಕೆ ಸಜ್ಜಾಗಿದೆ. ಮಲಯಾಳಂನಲ್ಲೂ ‘ಟೋಬಿ’ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ.
ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್ ಬಿ ಶೆಟ್ಟಿ (Raj B Shetty) ನಟನೆಗೆ ಕರ್ನಾಟಕ ಜನತೆ ಮಾರು ಹೋಗಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿತ್ತು. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸೆ.22ಕ್ಕೆ ಟೋಬಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಇದನ್ನೂ ಓದಿ:ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ
View this post on Instagram
ರಾಜ್ ಬಿ ಶೆಟ್ಟಿ ಮಾತು ಬರ ವ್ಯಕ್ತಿಯಾಗಿ ಸಿನಿಮಾದಲ್ಲಿ ಜೀವತುಂಬಿದ್ದಾರೆ. ಸಿನಿಮಾದಲ್ಲಿ ಅವರಿಗೆ ಡೈಲಾಗ್ ಇಲ್ಲ, ಆದರೆ ಅವರ ನಟನೆಯೇ ಮಾತನಾಡುವಂತೆ ಮಾಡಿದೆ.
‘ಟೋಬಿ’ಗೆ ನಾಯಕಿಯರಾಗಿ ಚೈತ್ರಾ ಆಚಾರ್ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಮನಗೆದ್ದ ಈ ಸಿನಿಮಾ, ಈಗ ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]