‘ಟೋಬಿ’ (Toby) ಬ್ಯೂಟಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ ಅವತಾರ ತಾಳಿರೋದು ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಸಖತ್ ಬೋಲ್ಡ್ ಆಗಿರೋ ಫೋಟೋಶೂಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ.
Advertisement
ಕಪ್ಪು ಬಣ್ಣದ ಲಾಂಗ್ ಡ್ರೆಸ್‌ನಲ್ಲಿ ನಟಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ನಿಂತಿರುವ ಲುಕ್ ನೋಡಿ ಪಡ್ಡೆಹುಡುಗರು ಸೈಕ್ ಆಗಿದ್ದಾರೆ. ನಟಿಯ ಅವತಾರಕ್ಕೆ ಹಾಟ್, ಸೆಕ್ಸಿ, ಬ್ಯೂಟಿಫುಲ್ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
Advertisement
Advertisement
ಈ ಹಿಂದೆ ಕೂಡ ನಟಿ ರವಿಕೆ ಧರಿಸಿದೇ ಸೀರೆಯುಟ್ಟ ಫೋಟೋವೊಂದನ್ನು ಹಂಚಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದರು. ಆ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇವರನ್ನು ಕನ್ನಡದ ಆಲಿಯಾ ಭಟ್ ಎಂದು ಫ್ಯಾನ್ಸ್ ಬಣ್ಣಿಸಿದ್ದಾರೆ. ಇದನ್ನೂ ಓದಿ:ಕಿಯಾರಾ ಜೊತೆ ರಾಮ್ ಚರಣ್ ರೊಮ್ಯಾನ್ಸ್- ‘ಗೇಮ್ ಚೇಂಜರ್’ ಸಾಂಗ್ ಔಟ್
Advertisement
ಇನ್ನೂ ಕನ್ನಡತಿ ಚೈತ್ರಾ ತಮಿಳಿನ ಎರಡು ಬಂಪರ್ ಆಫರ್‌ಗಳನ್ನು ಬಾಚಿಕೊಂಡಿದ್ದಾರೆ. ಸ್ಟಾರ್ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಗಳಿಂದ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ.
ಸಪ್ತಸಾಗರದಾಚೆ ಎಲ್ಲೋ, ‘ಟೋಬಿ’ ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅದ್ಭುತವಾಗಿ ನಟಿಸಿದರು.
2019ರಲ್ಲಿ `ಮಹಿರಾ’ ಸಿನಿಮಾದ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದರು.