‘ಟೋಬಿ’ ನಟಿಗೆ ಬೇಡಿಕೆ- ಸೌತ್‌ ಸಿನಿಮಾಗಳಲ್ಲಿ ಚೈತ್ರಾ ಆಚಾರ್‌ ಬ್ಯುಸಿ

Public TV
1 Min Read
chaithra achar

ನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ, ರುಕ್ಮಿಣಿ ವಸಂತ್ ಅವರಂತೆ ಚೈತ್ರಾ ಆಚಾರ್ (Chaithra Achar) ಕೂಡ ಸೌತ್‌ನತ್ತ ಮುಖ ಮಾಡಿದ್ದಾರೆ. ಕನ್ನಡದ ಜೊತೆಗೆ ದಕ್ಷಿಣದ ಸಿನಿಮಾದಲ್ಲೂ ಮಿಂಚಲು ಅವರು ರೆಡಿಯಾಗಿದ್ದಾರೆ.

chaithra achar 6

ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರಗಳಲ್ಲಿ ಗುರುತಿಸಿಕೊಂಡ್ಮೇಲೆ ತಮಿಳಿನಿಂದ ಚೈತ್ರಾಗೆ ಉತ್ತಮ ಅವಕಾಶಗಳು ಅರಸಿ ಬಂದಿವೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಪತ್ನಿ ರಿಲ್ಯಾಕ್ಸ್‌- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್

chaithra achar

ಶಿವಣ್ಣ, ಡಾಲಿ, ಭಾವನಾ ಮೆನನ್, ಐಶ್ವರ್ಯಾ ರಾಜೇಶ್ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲಿ ಚೈತ್ರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?

chaithra achar 5

ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿ ಹೊಸ ಚಿತ್ರಕ್ಕೂ ಚೈತ್ರಾ ನಾಯಕಿಯಾಗಿದ್ದಾರೆ. ಟೋಬಿ ಬಳಿಕ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಲಿದ್ದಾರೆ. ಒಂದಿಷ್ಟು ಚಿತ್ರಗಳ ಮಾತುಕತೆ ನಡೆಯುತ್ತಿದೆ.

chaithra achar 2

ತಮಿಳು ನಟ ಸಿದ್ಧಾರ್ಥ್ ನಟನೆಯ ‘3BHK’ ಚಿತ್ರಕ್ಕೆ ಚೈತ್ರಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇವರೊಂದಿಗೆ ಶರತ್‌ ಕುಮಾರ್‌, ದೇವಯಾನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇದರ ಜೊತೆ ತಮಿಳಿನ ನಟ ಶಶಿಕುಮಾರ್ ಜೊತೆಗೂ ಅವರು ತೆರೆಹಂಚಿಕೊಂಡಿದ್ದಾರೆ. ಮತ್ತೊಂದು ಹೆಸರಿಡದ ಹೊಸ ಚಿತ್ರಕ್ಕೂ ಅವರು ಆಯ್ಕೆ ಆಗಿದ್ದಾರೆ.

Chaithra J Achar 6 1

ಒಟ್ನಲ್ಲಿ ಕನ್ನಡದ ಜೊತೆ ತಮಿಳಿನಲ್ಲೂ ಮಿಂಚಲು ‘ಟೋಬಿ’ ಬೆಡಗಿ ರೆಡಿಯಾಗಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತೆಯೇ (Sreeleela) ಸೌತ್‌ನಲ್ಲಿ ಚೈತ್ರಾ ಮೋಡಿ ಮಾಡ್ತಾರಾ? ಎಂದು ಕಾದುನೋಡಬೇಕಿದೆ.

Share This Article