ಪ್ಯಾರಿಸ್: ತನ್ನನ್ನು ಭೇಟಿಯಾಗಲು ಬರುತ್ತಿದ್ದ ತಂದೆ ತಾಯಿಯನ್ನು ತಡೆಯಲು ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಈಸಿ ಜೆಟ್ ಏರ್‌ಲೈನ್ಸ್ ಗೆ ಕರೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ ಪುತ್ರ ಪೊಲೀಸರ ಅತಿಥಿಯಾಗಿದ್ದಾನೆ.
ತಂದೆ ತಾಯಿಯನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ದೂರದ ಊರಿಗೆ ಹೋಗುವ ಮಕ್ಕಳು ತಮ್ಮ ಹೆತ್ತವರನ್ನು ಯಾವಾಗ ನೋಡುತ್ತೇವೆ ಅಂತ ಕಾಯುತ್ತಿರುತ್ತಾರೆ. ಆದ್ರೆ ಪಶ್ಚಿಮ ಫ್ರಾನ್ಸಿನ ರೆನೆಸ್‍ನಲ್ಲಿ ಓದುತ್ತಿದ್ದ 23 ವರ್ಷದ ವಿದ್ಯಾರ್ಥಿಯೊಬ್ಬ ತಂದೆ ತಾಯಿ ತನ್ನನ್ನು ನೋಡಲು ಬರುವುದು ಇಷ್ಟವಿಲ್ಲದೆ ಅವರು ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ವಾರದ ಹಿಂದೆ ಸುಳ್ಳು ಸುದ್ದಿ ಹಬ್ಬಿಸಿದ್ದನು. ವಿದ್ಯಾರ್ಥಿಯ ಈ ಹುಚ್ಚಾಟಕ್ಕೆ ದಾರಿ ಮಧ್ಯದಲ್ಲೇ ಈಸಿ ಜೆಟ್ ವಿಮಾನ ಹಿಂತಿರುಗಿತ್ತು.
Advertisement
Advertisement
ಬಳಿಕ ಈ ಸುದ್ದಿ ಸುಳ್ಳು ಅಂತ ಗೊತ್ತಾದ ಮೇಲೆ ತನಿಖೆ ನಡೆಸಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸುಳ್ಳು ಕರೆಯಿಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಭಯಪಟ್ಟಿದ್ದರು. ಅಲ್ಲದೆ ಈ ಸುದ್ದಿ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದಾ ಅಂತ ಶಂಕಿಸಿದ್ದರು. ಆದ್ರೆ ತನಿಖೆ ಬಳಿಕ ವಿದ್ಯಾರ್ಥಿಯ ಹುಚ್ಚಾಟ ಬೆಳಕಿಗೆ ಬಂದಿದೆ.
Advertisement
ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಮೇಲಿನ ಆರೋಪ ಸಾಬೀತಾದರೆ ನ್ಯಾಯಾಲಯವು ಸುಮಾರು 5 ವರ್ಷಗಳ ಕಾಲ ಜೈಲು ಶಿಕ್ಷೆ, 85 ಸಾವಿರ ಡಾಲರ್(ಅಂದಾಜು 60 ಲಕ್ಷ ರೂ.) ದಂಡ ವಿಧಿಸುವ ಸಾಧ್ಯತೆಯಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv