ನವದೆಹಲಿ: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ದೆಹಲಿಯ ವಾಯುಸೇನೆ ನಿಲ್ದಾಣದ ಆವರಣಕ್ಕೆ ಅಧಿಕಾರಿಯಂತೆ ವೇಷ ಧರಿಸಿ ಬಂದ ವ್ಯಕ್ತಿಯನ್ನು ಬಂಧಿಸಲಾಗಿದೆ.
ವ್ಯಕ್ತಿಯನ್ನು ಅಲಿಗಢದ ನಿವಾಸಿ ಗೌರವ್ ಎಂದು ಗುರುತಿಸಲಾಗಿದೆ. ಜುಲೈ 22 ರಂದು ವಾಯುಪಡೆಯ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ವ್ಯಕ್ತಿ, ಕಾಂಪೌಂಡ್‍ಗೆ ಪ್ರವೇಶಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ. ಐಡಿ ತಪಾಸಣೆಗೆಂದು ಗೌರವ್ ಅನ್ನು ಪ್ರವೇಶ ದ್ವಾರದಲ್ಲಿ ನಿಲ್ಲಿಸಲಾಯಿತು. ನಂತರ ಭದ್ರತಾ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ವ್ಯಕ್ತಿ ತಡಬಡಾಯಿಸಿದಾಗ ಆತನ ಮೇಲೆ ಅನುಮಾನ ಮೂಡಿದೆ.
ಬಳಿಕ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ, ಭದ್ರತಾ ಸಂಸ್ಥೆಯಲ್ಲಿ ಸಮವಸ್ತ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ವಾಯುಪಡೆಯ ನಿಲ್ದಾಣಕ್ಕೆ ಬಂದಿರುವುದಾಗಿ ವ್ಯಕ್ತಿ ಸತ್ಯ ಬಾಯ್ಬಿಟ್ಟಿದ್ದಾನೆ. ತಾನು ಐಎಎಫ್‍ನಲ್ಲಿ ಅಧಿಕಾರಿ ಎಂದು ಹೇಳಿದಾಗ ತನ್ನ ಪ್ರಿಯತಮೆ ನಂಬಲಿಲ್ಲ. ಹಾಗಾಗಿ ಅವಳನ್ನು ಮೆಚ್ಚಿಸಲು ಹೀಗೆ ಮಾಡಿದೆ ಎಂದಿದ್ದಾನೆ. ಇದನ್ನೂ ಓದಿ: 6 ತಿಂಗಳಿನಿಂದ ಮನೆಯಲ್ಲೇ ಕೂಡಿಹಾಕಿದ್ದ ತಂದೆ – ಹೊರಗೆ ಬಿಡಲಿಲ್ಲವೆಂದು ಚಾಕುವಿನಿಂದ ಇರಿದು ಕೊಂದ ಮಗ
ಇದೀಗ ಆರೋಪಿಯನ್ನು ತುಗ್ಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಮತ್ತು ಆತನ ವಿರುದ್ಧ ಸೆಕ್ಷನ್ 140, 170, 171, 449 ಮತ್ತು 447 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ