ಇಸ್ಲಾಮಾಬಾದ್: ಟಿ20 ವಿಶ್ವಕಪ್ನಲ್ಲಿ (T20 WorldCup) ಇಂಗ್ಲೆಂಡ್ (England) ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಿದೆ.
ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ಮಾತನಾಡಿದ್ದು, ನನ್ನ ರೋಲ್ ಮಾಡೆಲ್ ವಿರಾಟ್ ಕೊಹ್ಲಿ (Virat Kohli) ಅಲ್ಲ, ಎಬಿಡಿ ವಿಲಿಯರ್ಸ್ (AB de Villiers) ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್ಗೆ ಆಘಾತ – ಹೆಸರಿಲ್ಲದ ವೈರಸ್ಗೆ ತುತ್ತಾದ ಸ್ಟೋಕ್ಸ್ ಪಡೆ
ಟಿ20 ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಫ್ಲಾಪ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪಾಕ್ ತಂಡದ ನಾಯಕ ಬಾಬರ್ ಆಜಂ ಸೆಮಿಸ್ ಹಾಗೂ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಇದೀಗ ಇಂಗ್ಲೆಂಡ್ನೊಂದಿಗೆ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿರುವ ಬಾಬರ್ ಅಜಂ ತನ್ನ ನೆಚ್ಚಿನ ಕ್ರಿಕೆಟಿಗ ಯಾರು ಎಂಬುದನ್ನ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಓವರ್ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್
ಈ ವೇಳೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಬಿಡಿ ವಿಲಿಯರ್ಸ್ (AB de Villiers) ನನ್ನ ರೋಲ್ ಮಾಡೆಲ್. ನನಗೆ ಅವರೆಂದರೆ ಇಷ್ಟ. ವಿಶೇಷವಾಗಿ ಅವರು ಆಡುವ ಶೈಲಿ ಹಾಗೂ ಶಾಟ್ಗಳು ಬಹಳ ಇಷ್ಟ. ಅವರು ಆಡುವುದನ್ನು ಟಿವಿಯಲ್ಲಿ ನೋಡಿದ ಬಳಿಕ ಮರುದಿನ ನಾನು ನೆಟ್ಸ್ನಲ್ಲಿ ಅದೇ ರೀತಿಯಾಗಿ ಅಭ್ಯಾಸ ನಡೆಸುತ್ತಿದ್ದೆ. ನನಗೆ ಅವರು ಆದರ್ಶ ಕ್ರಿಕೆಟಿಗನಾಗಿದ್ದ ಕಾರಣದಿಂದಾಗಿ ಅವರಂತೆ ಆಡಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿಕೋಂಡಿದ್ದಾರೆ.
ಟೀಂ ಇಂಗ್ಲೆಂಡ್ಗೆ ವೆಲ್ಕಮ್: ಮುಂದುವರಿದು ಮಾತನಾಡುತ್ತಾ, ಪಾಕಿಸ್ತಾನಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ ಎಂದಿದ್ದಾರೆ. ನಾವು ಈ ಸರಣಿಗಾಗಿ ಎದುರುನೋಡುತ್ತಿದ್ದೇವೆ. ಮೊದಲನೆಯದಾಗಿ ನಾನು ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ. ಟಿ20 ಸರಣಿಗಾಗಿ ಕೆಲ ಆಟಗಾರರು ಆಗಮಿಸಿದ್ದರು. ಅವರು ಇಲ್ಲಿನ ಸಮಯವನ್ನು ಆನಂದಿಸಿದ್ದಾರೆ. ಇಲ್ಲಿನ ವಾತಾವರಣ, ಪಾಕಿಸ್ತಾನದ ಆತಿಥ್ಯವನ್ನು ಆನಂದಿಸಲಿದ್ದಾರೆ. ಈಗ ನಾವು ಸರಣಿಗಾಗಿ ಎದುರುನೋಡುತ್ತಿದ್ದೇವೆ. ಎಲ್ಲರೂ ಉತ್ತಮವಾಗಿ ಆಡಲಿ ಎಂದು ಶುಭ ಕೋರಿದ್ದಾರೆ.
ಡಿಸೆಂಬರ್ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು, ಡಿ.1 ರಿಂದ 5ರ ವರೆಗೆ ಮೊದಲ ಟೆಸ್ಟ್, ಡಿ.9 ರಿಂದ 13ರ ವರೆಗೆ 2ನೇ ಟೆಸ್ಟ್ ಹಾಗೂ ಡಿ.17 ರಿಂದ 21ರ ವರೆಗೆ 3ನೇ ಟೆಸ್ಟ್ ಪಂದ್ಯಗಳು ನಡೆಯಲಿವೆ.