ಚೆನ್ನೈ: ಐಪಿಎಲ್ (IPL) ಮಾದರಿಯಂತೆ ಇದೇ ಮೊದಲ ಬಾರಿಗೆ ತಮಿಳುನಾಡು ಪ್ರೀಮಿಯರ್ ಲೀಗ್ (TNPL)ಗೆ ಹರಾಜು ಪ್ರಕ್ರಿಯೆ ನಡೆಯಿತು.
ಹರಾಜು ಪ್ರಕ್ರಿಯೆಯನ್ನು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 6 ಆವೃತ್ತಿಗಳನ್ನು ನಡೆಸಿರುವ ಟಿಎನ್‌ಪಿಎಲ್ ತನ್ನ 7ನೇ ಆವೃತ್ತಿಗೆ ಐಪಿಎಲ್ ಮಾದರಿಯಲ್ಲೇ ಹರಾಜು ಪ್ರಕ್ರಿಯೆ ನಡೆಸಿತು. ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾದ (Team India) ಆಲ್‌ರೌಂಡರ್ ಆರ್. ಅಶ್ವಿನ್ (R Ashwin) ಸಹ ಪಾಲ್ಗೊಂಡಿದ್ದು, ದಿಂಡಿಗಲ್ ಡ್ರ‍್ಯಾಗನ್ಸ್ ಫ್ರಾಂಚೈಸಿ ಪರವಾಗಿ ಬಿಡ್ಡಿಂಗ್ ಮಾಡಿದರು. ಇದೇ ಮೊದಲ ಬಾರಿಗೆ ನಡೆದ ಹರಾಜು ಪ್ರಕ್ರಿಯೆಲ್ಲಿ ಪ್ರಮುಖ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು.
Advertisement
Ravichandran Ashwin at the TNPL auction table for Dindigul Dragons. pic.twitter.com/umVdXQYwwD
— Johns. (@CricCrazyJohns) February 23, 2023
Advertisement
ಟಿಎನ್‌ಪಿಎಲ್‌ನಲ್ಲಿ ದಿಂಡಿಗಲ್ ಡ್ರ‍್ಯಾಗನ್ಸ್, ಲೈಕಾ ಕೋವೈ ಕಿಂಗ್ಸ್ (Lyca Kovai Kings), ನೆಲ್ಲೈ ರಾಯಲ್ ಕಿಂಗ್ಸ್, ಐಡ್ರೀಮ್ ತಿರುಪ್ಪೂರ್ ತಮಿಳು ಸೇರಿದಂತೆ 8 ತಂಡಗಳಿಗಾಗಿ ಹರಾಜು ನಡೆಸಲಾಯಿತು. ಪ್ರತಿ ತಂಡಕ್ಕೆ ಹರಾಜಿನಲ್ಲಿ ಖರ್ಚು ಮಾಡಲು 60 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್
Advertisement
Advertisement
ಈ ವೇಳೆ ಟಿಎನ್‌ಪಿಎಲ್‌ನಲ್ಲಿ ಐಪಿಎಲ್ (IPL) ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆಟಗಾರ ಸಾಯಿ ಸುದರ್ಶನ್ (Sai Sudarshan) ದಾಖಲೆ ಮೊತ್ತಕ್ಕೆ ಬಿಕರಿಯಾದರು. ಲೈಕಾ ಕೋವೈ ಕಿಂಗ್ಸ್ ಸಾಯಿ ಸುದರ್ಶನ್ ಒಬ್ಬರಿಗೇ 21.6 ಲಕ್ಷ ರೂ. ಬಿಡ್ ಮಾಡುವ ಮೂಲಕ ಗಮನ ಸೆಳೆಯಿತು. ಎಡಗೈ ಬ್ಯಾಟರ್ ಆಗಿರುವ ಸುದರ್ಶನ್‌ಗೆ ಭಾರೀ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಲೈಕಾ ಕೋವೈ ಕಿಂಗ್ಸ್ 21.6 ಲಕ್ಷ ರೂ.ಗಳಿಗೆ ಬಿಡ್ ಮಾಡಿತು.
ಸದ್ಯ ಸುದರ್ಶನ್ ಐಪಿಎಲ್ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಲಿದ್ದಾರೆ. ಕಳೆದ ಬಾರಿ 20 ಲಕ್ಷ ರೂ.ಗೆ ಐಪಿಎಲ್‌ಗೆ ಹರಾಜಾಗಿದ್ದ ಸುದರ್ಶನ್ ಇದೀಗ ಐಪಿಎಲ್‌ಗಿಂತಲೂ ದುಬಾರಿ ಮೊತ್ತಕ್ಕೆ ಟಿಎನ್‌ಪಿಎಲ್‌ಗೆ ಬಿಕರಿಯಾಗಿದ್ದಾರೆ. ಇದನ್ನೂ ಓದಿ: ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್
2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಸೀಸನ್‌ನಲ್ಲಿ ಅವರು 5 ಪಂದ್ಯಗಳಲ್ಲಿ 145 ರನ್ ಗಳಿಸಿದ್ದರು. ನಿಯಮಿತವಾಗಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, 2023ರ ಐಪಿಎಲ್‌ನಲ್ಲಿ ಕೂಡ ಅವರು ತಂಡದಲ್ಲಿ ಉಳಿದುಕೊಂಡಿದ್ದಾರೆ.
ಮೊದಲ ದಿನದ ಟಿಎನ್‌ಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸುದರ್ಶನ್ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ನಂತರದಲ್ಲಿ ಸಂಜಯ್ ಯಾದವ್ 17.60 ಲಕ್ಷ ರೂಗೆ ಚೆಪಾಕ್ ಸೂಪರ್ ಗಿಲ್ಲಿಸ್ ತಂಡಕ್ಕೆ ಖರೀದಿಯಾದರೆ, ಶಿವಂ ಸಿಂಗ್ 15.95 ಲಕ್ಷ ರೂ.ಗಳಿಗೆ ದಿಂಡಿಗಲ್ ಡ್ರ್ಯಾಗನ್ಸ್‌ಗೆ ಹರಾಜಾದರು. 2ನೇ ದಿನದ ಹರಾಜಿನಲ್ಲಿ 50 ಸಾವಿರ ಮೂಲ ಬೆಲೆಯ ಕಿರಣ್ ಆಕಾಶ್ ಅವರನ್ನ ಕೋವೈ ಕಿಂಗ್ಸ್ 6.40 ಲಕ್ಷ ರೂ.ಗೆ ಖರೀದಿ ಮಾಡಿತು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k