ಚೆನ್ನೈ: ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಇತ್ತೀಚೆಗಷ್ಟೇ ವೈರಲ್ ಆಗಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಶಿವ ಸಿಗರೇಟ್ ಸೇದುತ್ತಿರುವ ಬ್ಯಾನರ್ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಇತ್ತೀಚೆಗಷ್ಟೇ ಮದುವೆಯಾದ ತಮ್ಮ ಗೆಳೆಯನ ವಿವಾಹಕ್ಕೆ ಸ್ನೇಹಿತರೆಲ್ಲರೂ ಬ್ಯಾನರ್ ಕಟ್ಟಿದ್ದರು. ಈ ಬ್ಯಾನರ್‍ನಲ್ಲಿ ವರ ಮತ್ತು ವಧುವಿನ ಫೋಟೋ ಜೊತೆಗೆ ಶಿವ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಪ್ರಿಂಟ್ ಮಾಡಲಾಗಿತ್ತು. ಸದ್ಯ ಈ ಬ್ಯಾನರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ
Advertisement
Advertisement
ಕನ್ಯಾಕುಮಾರಿ ಜಿಲ್ಲೆಯ ಆರೋಕಿಯಪುರಂ ಗ್ರಾಮದ ಪ್ರತೀಶ್ ಅವರ ಮದುವೆ ಇತ್ತೀಚೆಗಷ್ಟೇ ನೆರವೇರಿತು. ಈ ಹಿನ್ನೆಲೆ ಪ್ರತೀಶ್‍ಗೆ ಶುಭ ಕೋರುವ ಸಲುವಾಗಿ ಸ್ನೇಹಿತರು ಬ್ಯಾನರ್ ಹಾಕಿದ್ದರು. ಈ ಬ್ಯಾನರ್‌ನಲ್ಲಿ ಶಿವ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಕೂಡ ಪ್ರಿಂಟ್ ಮಾಡಿದ್ದರಿಂದ, ಕೆಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಚಿಂತಾಜನಕ- ಪಾಟ್ನಾದಿಂದ ದೆಹಲಿಗೆ ಏರ್‌ಲಿಫ್ಟ್
Advertisement
ನಂತರ ಮಾಹಿತಿ ದೊರೆತ ಪೊಲೀಸರು ಆರೋಕಿಯಾಪುರಂನಲ್ಲಿ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದರು. ಅಲ್ಲದೇ ಈ ಸಂಬಂಧ ಪೊಲೀಸರು ಮದು ಮಗ ಹಾಗೂ ಆತನ ಸ್ನೇಹಿತರಿಗೆ ನೋಟಿಸ್ ಜಾರಿ ಮಾಡಿ, ವಶಕ್ಕೆ ಪಡೆದಿದ್ದರು. ಬಳಿಕ ಮತ್ತೆ ಈ ರೀತಿಯ ಕೆಲಸವನ್ನು ಮಾಡಬಾರದೆಂದು ಎಚ್ಚರಿಕೆ ನೀಡಿ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.