-ಬಿಜೆಪಿಯ ಯೋಜಿತ ಕೊಲೆಯೆಂದು ಟಿಎಂಸಿ ಆರೋಪ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿದ್ದಾರೆ. ಕೃಷ್ಣಗಂಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸತ್ಯಜಿತ್ ಅವರನ್ನು ಶನಿವಾರ ರಾತ್ರಿ ಮನೆಯ ಸಮೀಪದಲ್ಲಿ ಗುಂಡಿಟ್ಟು ಕೊಲೆಗೈದು ಪರಾರಿಯಾಗಿದ್ದಾರೆ.
ಶನಿವಾರ ರಾತ್ರಿ ತಮ್ಮ ನಿವಾಸದ ಸಮೀಪದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು. ಜನರ ಗುಂಪಿನ ಮಧ್ಯದಲ್ಲಿದ್ದ ಇಬ್ಬರು ಆಗಂತುಕರು ವೇದಿಕೆಯಲ್ಲಿಯೇ ಆಸೀನರಾಗಿದ್ದ ಶಾಸಕರ ಎದೆ ಭಾಗಕ್ಕೆ ಗುಂಡು ಹೊಡೆದಿದ್ದಾರೆ ಎಂದು ವರದಿಯಾಗಿದೆ.
Advertisement
ರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಜನರ ಗುಂಪಿನಿಂದಲೇ ಗುಂಡು ಹಾರಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸತ್ಯಜಿತ್ ಅವರನ್ನು ಶಕ್ತಿನಗರದ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಶಾಸಕರು ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಾಸಕರ ಮೇಲೆ ಗುಂಡು ಹಾರಿಸಿದ ಮೂವರ ಸಹಿತ ರಿವಾಲ್ವರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೃತ ಶಾಸಕರಿಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ ಗರಿಶಂಕರ್ ದತ್ತ, ಇದೊಂದು ಬಿಜೆಪಿಯ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಟಿಎಂಸಿ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ವಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಶ್, ಆಡಳಿತ ಪಕ್ಷದ ಆಂತರಿಕ ಕಲಹದ ಫಲಿತಾಂಶ ಇದಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv