ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ಚಾಂಪಿಯನ್ ‘ದಿ ಗ್ರೇಟ್’ ಖಲಿ ಪ್ರಚಾರ ಮಾಡಿರುವ ವಿಚಾರವಾಗಿ ತೃಣಮೂಲಕ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಖಲಿ ಸದ್ಯ ಅಮೆರಿಕ ಪೌರತ್ವವನ್ನು ಪಡೆದಿದ್ದು, ಒಬ್ಬ ವಿದೇಶಿ ಪ್ರಜೆ ಚುನಾವಣೆಯಲ್ಲಿ ಪ್ರಚಾರ ನಡೆಸಿ ಪ್ರಭಾವ ಬೀರುವುದು ನಿಯಮ ಬಾಹಿರವಾಗಿದೆ ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದೆ.
Advertisement
Advertisement
ಪಶ್ಚಿಮ ಬಂಗಾಳದ ಜಾದವಪುರ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ನಾಮಪತ್ರ ಸಲ್ಲಿಸುವ ವೇಳೆ ಅಂದರೆ ಏಪ್ರಿಲ್ 26 ರಂದು ಖಲಿ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹಜ್ರಾ, ನಾವಿಬ್ಬರು ಸಹೋದರರಂತೆ ಎಂದು ಹೇಳಿದ್ದರು. ಅಂದಹಾಗೇ ಖಲೀ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ನ ಹೆವಿವೇಯ್ಟ್ ವಿಭಾಗದಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯರಾಗಿದ್ದಾರೆ. 2014ರ ಬಳಿಕ ಅವರು ಅಮೆರಿಕದಲ್ಲಿ ನೆಲೆಸಿ ಭಾರತ ವೀಸಾವನ್ನು ರದ್ದು ಪಡಿಸಿ ಅಲ್ಲಿನ ಕಾರ್ಡ್ ಪಡೆದಿದ್ದರು.
Advertisement
TMC writes to Election Commission of India over wrestler The Great Khali campaigning for BJP's Jadavpur MP candidate,Anupam Hazra on April 26. The letter states, 'He(Khali) holds US citizenship, therefore,a foreigner shouldn't be allowed to influence the minds of Indian electors' pic.twitter.com/DIOKzVjkcu
— ANI (@ANI) April 28, 2019
Advertisement
ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಸೂಪರ್ ಸ್ಟಾರ್ ಫಿದೋರ್ಸ್ ಅಹ್ಮದ್ ಕೂಡ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದರು. ಈ ವೇಳೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಟನ ಬಂಧನಕ್ಕೆ ಆಗ್ರಹಿಸಿತ್ತು. ಆ ಬಳಿಕ ನಟನ ವೀಸಾ ರದ್ದು ಪಡಿಸಿ ವಾಪಸ್ ಕಳುಹಿಸಲಾಗಿತ್ತು. ಅಲ್ಲದೇ ಕೇಂದ್ರ ಗೃಹ ಇಲಾಖೆ ನಟನ ವೀಸಾವನ್ನು ಬ್ಲಾಕ್ ಪಟ್ಟಿಗೆ ಸೇರಿಸಿತ್ತು. ಈ ವೇಳೆ ಬಾಂಗ್ಲಾ ವಲಸಿಗರನ್ನು ಓಲೈಕೆ ಮಾಡಲು ಟಿಎಂಸಿ ಈ ಮಾರ್ಗವನ್ನು ಬಳಸಿದೆ ಎಂದು ಬಿಜೆಪಿ ದೂರಿತ್ತು. ಅಲ್ಲದೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ರನ್ನು ಕೂಡ ಟಿಎಂಸಿ ಪ್ರಚಾರಕ್ಕೆ ಕರೆಸಿಕೊಳ್ಳಲಿ ಎಂದು ಬಿಜೆಪಿ ಆಕ್ರೋಶ ಹೊರಹಾಕಿತ್ತು.