ಸುದೀಪ್ ಹುಟ್ಟು ಹಬ್ಬಕ್ಕೆ ‘ಕಿಚ್ಚ 46’ ಸಿನಿಮಾದ ಟೈಟಲ್ ಲಾಂಚ್

Public TV
2 Min Read
Sudeep 6

ಸುದೀಪ್ (Sudeep) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈಗಾಗಲೇ ‘ಕಿಚ್ಚ 46’ ಹೆಸರಿನಲ್ಲಿ ಶೂಟಿಂಗ್ ಶುರು ಮಾಡಿರುವ ಚಿತ್ರದ ಹೆಸರನ್ನು ಅವರ ಹುಟ್ಟು ಹಬ್ಬದ ದಿನದಂದು ಲಾಂಚ್ ಮಾಡುವ ಸುದ್ದಿ ಹೊರ ಬಿದ್ದಿದೆ. ಸೆಪ್ಟಂಬರ್ 2 ರಂದು ಸುದೀಪ್ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ ಎನ್ನುವ ಮಾಹಿತಿ ಇದೆ.

sudeep

ಸದ್ಯ ಸುದೀಪ್ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಕನ್ನಡದ ಕಹಳೆ ಊದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಹೀರೋ ಆಗಿದ್ದರೂ ಕನ್ನಡ ನಾಡಿನ ಋಣ ತೀರಿಸಲು ಏನು ಮಾಡಬೇಕೊ ಎಲ್ಲವನ್ನೂ ಮುಗಿಸಿದ್ದಾರೆ. `ಕೆ-46′ (K-46) ಚಿತ್ರದಲ್ಲಿ ಈ ಕಾಯಕ ಮಾಡಿ ಕನ್ನಡಿಗರಿಂದ ಶಹಬ್ಬಾಶ್‌ ಗಿರಿ ಪಡೆದಿದ್ದಾರೆ. ಇದನ್ನೂ ಓದಿ:ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ- ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದ ರಶ್ಮಿಕಾ ಮಂದಣ್ಣ

sudeep 1 4

ಇದು ಕಿಚ್ಚನ ಹೊಸ ಸಿನಿಮಾ (New Cinema). ಟೈಟಲ್ ಇನ್ನೂ ಇಟ್ಟಿಲ್ಲ. ಇದರ ಶೂಟಿಂಗ್‌ಗಾಗಿ ಚೆನ್ನೈನ (Chennai) ಮಹಾಬಲಿಪುರಂನಲ್ಲಿ ಹಾಕಿದ ಸೆಟ್‌ನಲ್ಲಿ ಕಾರ್ಯ ನಿರತರಾಗಿದ್ದಾರೆ. ಇಲ್ಲಿಂದಲೇ ಅದೊಂದು ಮಹಾ ಗುಟ್ಟು ಹೊರ ಬಿದ್ದಿದೆ. ಇದರ ನಿರ್ಮಾಪಕ ಎಸ್ ಥಾನು (S Thanu), ನಿರ್ದೇಶಕ ವಿಜಯ್ (Vijay). ಇಬ್ಬರದೂ ತಮಿಳು ಮೂಲ. ಆದರೆ ಶೂಟಿಂಗ್ ಸೆಟ್‌ನಲ್ಲಿ ಬಹುತೇಕರು ಕನ್ನಡಿಗರೇ. ಅದಕ್ಕೆ ಕಾರಣ ಸುದೀಪ್. ತಮಿಳು ಭಾಷೆಯಲ್ಲೇ ಶೂಟಿಂಗ್ ಮಾಡೋಣ ಎಂದಿದ್ದ ನಿರ್ಮಾಪಕರ ಮಾತನ್ನು ಸುದೀಪ್ ನಿರಾಕರಿಸಿದ್ದು ಮೂಲ ಹೂರಣ.

kiccha sudeep

‘ಮೊದಲು ಕನ್ನಡ ಭಾಷೆಯಲ್ಲೇ ಶೂಟಿಂಗ್ ಮಾಡೋಣ. ನಂತರ ಅದನ್ನು ತಮಿಳಿಗೆ ಡಬ್ ಮಾಡೋಣ’ ಹೀಗಂತ ಸುದೀಪ್ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಾಕೀತು ಮಾಡಿದ್ದಾರಂತೆ. ಅದೇ ರೀತಿ ಕೆಲಸ ನಡೆಯುತ್ತಿದೆ. ಕೆಲವು ಹೀರೋಗಳು ತಮಿಳು ಸಿನಿಮಾ ಸಿಕ್ಕಿದ ಮಾತ್ರಕ್ಕೆ ಹುಟ್ಟಿದ ನೆಲ ಮರೆಯುತ್ತಾರೆ. ಆದರೆ ಸುದೀಪ್ ಹಾಗೆ ಮಾಡಿಲ್ಲ. ಮಾಡುವುದೂ ಇಲ್ಲ. ಅದರ ಪರಿಣಾಮ ಕಣ್ಣ ಮುಂದಿದೆ. ಕನ್ನಡ ನಾಡಿನ ಜನರು ಕೇಕೆ ಹಾಕುವಂತೆ ಮಾಡಿದೆ.

 

ಈ ಸಿನಿಮಾಗಾಗಿ ಸುದೀಪ್ ಒಂದೇ ಹಂತದ ಶೂಟಿಂಗ್ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ. ಅಂದುಕೊಂಡಂತೆ ಶೂಟಿಂಗ್ ಮಾಡಿ, ಇದೇ ವರ್ಷವೇ ಸಿನಿಮಾವನ್ನು ತೆರೆಗೆ ತರಲು ಸಿದ್ದತೆ ಕೂಡ ಮಾಡಿಕೊಂಡಿದ್ದಾರಂತೆ. ಸುದೀಪ್ ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ನಿಜಕ್ಕೂ ಇದೊಂದು ಗುಡ್ ನ್ಯೂಸ್.

Web Stories

Share This Article