ಟೈಟಲ್ ಲಾಂಚ್ ಗೆ ಕ್ಷಣಗಣನೆ: ಯಶ್ ಚಿತ್ರಕ್ಕೆ ಮೂವರು ನಾಯಕಿಯರು

Public TV
2 Min Read
yash 2

ನಾಳೆ ಯಶ್ ನಟನೆಯ ಹೊಸ ಸಿನಿಮಾದ ಟೈಟಲ್ ಅನಾವರಣವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರ ಇರಲಿದ್ದಾರೆ ಎನ್ನುವುದು ಲೆಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಲಾ ಠಾಕೂರ್ (Mrunal Thakur) ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರೆ.

Yash

ಟೈಟಲ್ ಬಗ್ಗೆ ಕ್ರೇಜ್

ಹಲವು ತಿಂಗಳಿಂದ ಯಶ್ ಅಭಿಮಾನಿಗಳು ಕಾಯುತ್ತಿರುವ ಸಮಯ ಕೊನೆಗೂ ಕೂಡಿ ಬಂದಿದೆ. ತಮ್ಮ ಹೊಸ ಸಿನಿಮಾದ ಟೈಟಲ್ (Title) ಅನ್ನು ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದಾರೆ. ಈ 9.55ಕ್ಕೆ ಸಮಯ ನಿಗದಿ ಆಗಿದ್ದು ಏಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ? ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

Yash 1

ಉತ್ತರ ಸಿಂಪಲ್ ಎನ್ನುತ್ತವೆ ಮೂಲಗಳು. ಯಶ್ ಅವರ 19ನೇ ಸಿನಿಮಾ ಇದಾಗಿದ್ದು, 9+5+5 ಒಟ್ಟು ಮಾಡಿದರೆ 19 ಸಂಖ್ಯೆಯಾಗುತ್ತದೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಹಾಗಾಗಿ ಈ ಲೆಕ್ಕಾಚಾರವನ್ನು ಅವರು ಹೊಸದಾಗಿ ಯೋಚಿಸಿದ್ದಾರೆ. ಅದರಾಚೆ ಏನೂ ಇಲ್ಲ ಎನ್ನುತ್ತಾರೆ ಯಶ್ ಆಪ್ತರು.

Yash

ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

 

ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ನಿನ್ನೆ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದರು.

Share This Article