– ‘ನಂದಿನಿ’ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟ ಕಾಯ್ದುಕೊಂಡ ತಿರುಪತಿ ಲಡ್ಡು
– ಪರಸ್ಪರರಿಗೆ ಲಡ್ಡು ತಿನ್ನಿಸಿ ಭಕ್ತರ ಸಂಭ್ರಮ
ಕೋಲಾರ/ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಗೊಂದಲ, ಅಪವಿತ್ರದ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ಭಕ್ತರು ಸೋಮವಾರ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದು ಲಡ್ಡುಗಾಗಿ ಮುಗಿಬಿದ್ದರು.
Advertisement
ತಿರುಪತಿ ಲಡ್ಡು ಪ್ರಸಾದ (Tirupati Laddu Row) ಅಪವಿತ್ರ ಭಾವನೆಯನ್ನು ಭಕ್ತರಿಂದ ತೊಡೆದುಹಾಕಲು, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶುದ್ಧೀಕರಣ ಮಾಡಲಾಯಿತು. ಜೊತೆಗೆ ಮಹಾಶಾಂತಿ ಹೋಮ ಕೂಡ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ
Advertisement
Advertisement
ಪ್ರಸಾದದ ವಿಚಾರವಾಗಿ ಸಾಕಷ್ಟು ವಿವಾದ ಎದ್ದಿದ್ದರೂ ಅದ್ಯಾವುದಕ್ಕೂ ಭಕ್ತರು ತಲೆಕೆಡೆಸಿಕೊಳ್ಳದೇ ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದರು. ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.
Advertisement
ತಿಮ್ಮಪ್ಪನ ದರ್ಶನ ಬಳಿಕ ಲಡ್ಡು ತೆಗೆದುಕೊಳ್ಳಲು ಭಕ್ತರ ದಂದೇ ಸರತಿ ಸಾಲಿನಲ್ಲಿ ನಿಂತಿತ್ತು. ದರ್ಶನದ ಮಾದರಿಯಲ್ಲೇ ಲಡ್ಡುಗಾಗಿ ಉದ್ದುದ್ದ ಕ್ಯೂ ನಿಂತಿದ್ದರು. ಪ್ರಸಾದ ಕಲಬೆರಕೆ, ಅಪವಿತ್ರದ ಸುದ್ದಿಗಳಿಗೆ ಜನ ಡೋಂಟ್ ಕೇರ್ ಎಂದಿರುವಂತೆ ಕಂಡುಬಂತು. ಎಂದಿನಂತೆ ಲಡ್ಡು ಖರೀದಿ ಭರಾಟೆ ಜೋರಾಗಿತ್ತು. ಇದನ್ನೂ ಓದಿ: ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ
ಅದರಲ್ಲೂ ಕೆಎಂಎಫ್ ನಂದಿನಿ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟವನ್ನು ಲಡ್ಡು ಕಾಯ್ದುಕೊಂಡಿದೆ. ಲಡ್ಡು ಸ್ವೀಕರಿಸಿ ಭಕ್ತರು ಖುಷಿ ಹಂಚಿಕೊಂಡರು. ಕೆಲವರು ಅಲ್ಲೇ ಪರಸ್ಪರ ಲಡ್ಡು ತಿನ್ನಿಸಿ ಭಕ್ತಿ ಮೆರೆದರು.