ಹೈದರಾಬಾದ್: ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪ ಒಂದು ತಿಂಗಳಲ್ಲೇ ಶತ ಕೋಟಿ ಗಳಿಸುವ ಮೂಲಕ ಆದಾಯದಲ್ಲೂ ದಾಖಲೆ ಬರೆದಿದ್ದಾನೆ.
ತಿರುಪತಿ ತಿಮ್ಮಪ್ಪನ ಹುಂಡಿಗೆ 2019 ರ ಜೂನ್ ತಿಂಗಳಲ್ಲಿ 100 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿದೆ. ಜೂನ್ ತಿಂಗಳ ಅಂಕಿ ಅಂಶಗಳಿಗೆ ಹೋಲಿಸಿದರೆ 2019 ಜೂನ್ ತಿಂಗಳಲ್ಲಿ ಲಡ್ಡು ವಿತರಣೆ, ಅನ್ನ ಪ್ರಸಾದ ವಿತರಣೆ, ಮುಡಿ ಕೊಟ್ಟವರ ಸಂಖ್ಯೆ ಸೇರಿದಂತೆ ಎಲ್ಲ ರೀತಿಯಲ್ಲೂ ಹೊಸ ದಾಖಲೆ ನಿರ್ಮಿಸಿದೆ.
Advertisement
Advertisement
ಕಳೆದ ವರ್ಷ ಜೂನ್ ತಿಂಗಳಲ್ಲಿ 24.10 ಲಕ್ಷ ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದರು. ಈ ವರ್ಷ ಹೆಚ್ಚುವರಿಯಾಗಿ 2.56ಲಕ್ಷ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡಿದ್ದಾರೆ. ಅದರಂತೆಯೇ ಕಳೆದ ವರ್ಷದ ಜೂನ್ ತಿಂಗಳಲ್ಲಿ ಶ್ರೀವಾರಿ ಹುಂಡಿಗೆ 91.81 ಕೋಟಿ ಹರಿದುಬಂದಿತ್ತು. ಈ ವರ್ಷ 100.37 ಕೋಟಿ ರೂಪಾಯಿ ದಾಖಲೆಯ ಹಣ ಸಂಗ್ರಹವಾಗಿದೆ.
Advertisement
ಈ ವರ್ಷ ದೇವಾಲಯದ ಮಂಡಳಿಯ ವಸತಿಗಳಲ್ಲಿ ಶೇ 107ರಷ್ಟು ಭಕ್ತರು ವಾಸ್ತವ್ಯ ಹೂಡಿದ್ದರು. ಕಳೆದ ವರ್ಷ ಶೇ.106ರಷ್ಟು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್) ವಸತಿಯನ್ನು ಬಳಸಿಕೊಂಡಿದ್ದರು. ಈ ವರ್ಷ 1.13 ಕೋಟಿ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಗಿದೆ.
Advertisement
ಇದೇ ತಿಂಗಳು ಕಳೆದ ವರ್ಷ ಭಕ್ತಾದಿಗಳಿಗೆ ಸುಮಾರು 95.58 ಲಕ್ಷ ಲಡ್ಡುಗಳನ್ನು ವಿತರಿಸಲಾಗಿತ್ತು. ಅಷ್ಟೇ ಅಲ್ಲದೆ ಈ ವರ್ಷದ ಜೂನ್‍ನಲ್ಲಿ 12.88 ಲಕ್ಷ ಮಂದಿ ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ. 71.02 ಲಕ್ಷ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗಿದೆ.