ಅಮರಾವತಿ: ಹಿಂದೂಗಳಲ್ಲದವರು, ಇತರೆ ಧರ್ಮಗಳನ್ನು ಪಾಲನೆ ಮಾಡಿದ ಹಿನ್ನೆಲೆಯಲ್ಲಿ ತಿರುಪತಿ (TTD) ನಾಲ್ವರು ನೌಕರರನ್ನು ಅಮಾನತು ಮಾಡಲಾಗಿದೆ.
ಉಪ ಕಾರ್ಯನಿರ್ವಾಹಕ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ) ಬಿ. ಎಲಿಜರ್, ಎಸ್‌ವಿ ಆಯುರ್ವೇದ ಫಾರ್ಮಸಿಯ ಜಿ. ಅಸುಂತ, ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ಸರ್ಜರಿ, ರಿಸರ್ಚ್ ಅಂಡ್ ರಿಹ್ಯಾಬಿಲಿಟೇಶನ್ ಫಾರ್ ದಿ ಡಿಸೇಬಲ್ಡ್ (ಬಿಐಆರ್‌ಆರ್‌ಡಿ) ಆಸ್ಪತ್ರೆಯ ನರ್ಸ್ ಎಸ್.ರೋಸಿ ಮತ್ತು ಗ್ರೇಡ್-ಐ ಫಾರ್ಮಾಸಿಸ್ಟ್ ಎಂ. ಪ್ರೇಮಾವತಿ ಅಮಾನತುಗೊಂಡ ನೌಕರರು ಎಂದು ಟಿಟಿಡಿ ಅಧಿಕೃತ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮಳೆ ಅವಾಂತರ – ಫ್ಲೈಓವರ್, ರಸ್ತೆಗಳು ಮುಳುಗಡೆ
ಮೇ ತಿಂಗಳಲ್ಲಿ ಮಂಡಳಿಯು ನಡೆಸುತ್ತಿರುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರನ್ನು ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲಾಗುವುದು ಅಥವಾ ಅದರ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಟಿಟಿಡಿ ಹೇಳಿತ್ತು.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಕಳೆದ ವಾರ ತಿರುಮಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ (ಟಿಟಿಡಿ) ಹಿಂದೂಯೇತರರನ್ನು ನೇಮಿಸಿಕೊಳ್ಳುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ
ಅಮಾನತುಗೊಂಡ ನೌಕರರು, ಸಂಸ್ಥೆಯ ನೀತಿ ಸಂಹಿತೆಯನ್ನು ಪಾಲಿಸದ ಮತ್ತು ಹಿಂದೂ ಧಾರ್ಮಿಕ ಸಂಘಟನೆಯ ನೌಕರರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪವನ್ನು ಹೊತ್ತಿದ್ದಾರೆ.
ಅನ್ಯ ಧರ್ಮವನ್ನು ಆಚರಿಸಿದ ಆರೋಪದ ಮೇಲೆ ಟಿಟಿಡಿ ಜು.9 ರಂದು ತನ್ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎ. ರಾಜಶೇಖರ್ ಬಾಬು ಅವರನ್ನು ಅಮಾನತುಗೊಳಿಸಿತ್ತು. ಬಾಬು ಅವರು ತಿರುಪತಿ ಜಿಲ್ಲೆಯ ತಮ್ಮ ಹುಟ್ಟೂರು ಪುತ್ತೂರಿನಲ್ಲಿ ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಟಿಟಿಡಿ ಹೇಳಿಕೆ ತಿಳಿಸಿದೆ.