ಬೆಂಗಳೂರು: ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಹಾಗೂ ಒಬ್ಬ ಅತ್ಯಾಚಾರಿ ಅವನ ಜಯಂತಿ ಆಚರಣೆ ಮಾಡುವುದರಲ್ಲಿ ಯಾವುದೇ ಆರ್ಥವಿಲ್ಲ ಎಂದು ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಕಿಡಿಕಾರಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾವುದೋ ಒಂದು ವರ್ಗದ ಓಲೈಕೆಗಾಗಿ ಮಾಡುತ್ತಾರೆ ಎಂಬ ವ್ಯಾಖ್ಯಾನ ಬೇರೆಯಾಗಿದ್ದು, ಆದರೆ ಟಿಪ್ಪು ಜಯಂತಿ ಆಚರಣೆ ಮಾಡುವುದು ಹಿಟ್ಲರ್ ಜಯಂತಿ ಮಾಡುವುದಕ್ಕೆ ಸಮ. ಇದು ಇತಿಹಾಸಕ್ಕೆ ಮಾಡುವ ಅವಮಾನ ಆಗಿದೆ ಎಂದು ಸರ್ಕಾರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಸಮ್ಮಿಶ್ರ ಈ ಸರ್ಕಾರ ಆದರು ಟಿಪ್ಪು ಜಯಂತಿ ವಿಚಾರವಾಗಿ ಮೌನವಾಗಿರುತ್ತೆ ಎಂದು ತಿಳಿದಿದ್ದೇವು. ಆದರೆ ಇವರು ಬುದ್ಧಿ ಇಲ್ಲದೆ ಮಾಡುತ್ತಿದ್ದಾರೆ. ಈಗ ನಮ್ಮ ಕೆಲಸ ಸತ್ಯದ ಪರ ನಿಲ್ಲುವುದು ನಮ್ಮ ಕರ್ತವ್ಯ ಆಗಿದೆ. ಹಿಂದೂಗಳನ್ನು ಕೊಲೆಗೈದ, ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿದ ಹಾಗೂ ಅನೇಕ ಹಿಂದೂ ಮಹಿಳೆಯರನ್ನು ತನ್ನ ಆಸ್ಥಾನದ ಅಧಿಕಾರಿಗಳಿಗೆ ಮಾರಾಟ ಮಾಡಿದ್ದಾನೆ. ಟಿಪ್ಪು ಒಬ್ಬ ಹಠವಾದಿ ಎಂಬುವುದು ಎಷ್ಟು ನಿಜವೋ ಅಷ್ಟೇ ಆತ ಒಬ್ಬ ಅತ್ಯಾಚಾರಿ, ಹಿಂದೂ ವಿರೋಧಿ ಎಂಬುವುದು ಕೂಡ ಅಷ್ಟೇ ಸತ್ಯ. ಇಂತಹ ಟಿಪ್ಪು ಜಯಂತಿ ಆಚರಿಸಿದರೆ ನಾವು ಹೋರಾಟ ಮಾಡುತ್ತೇವೆ. ಈಗಾಗಲೇ ಬಿಜೆಪಿಯೂ ಹೋರಾಟಕ್ಕೆ ಕರೆ ಕೊಟ್ಟಿದ್ದು ಅದರಲ್ಲಿ ತಾವು ಭಾಗವಹಿಸುತ್ತೇವೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://www.youtube.com/watch?v=IcSBtAQBloU