ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಸುಲ್ತಾನ್ ಪಠ್ಯ ಪುಸ್ತಕ ವಿವಾದ ನಿರ್ಧಾರ ಒಂದು ವರ್ಷ ಮುಂದೂಡಿಕೆಯಾಗಿದೆ. ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದ್ದು, ಮುಂದಿನ ವರ್ಷದ ಒಳಗೆ ವಿವಾದ ಬಗೆಹರಿಸುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಶಾಸಕ ಅಪ್ಪಚ್ಚು ರಂಜನ್ ಪತ್ರದ ಮೇಲೆ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಬೇಕೇ ಬೇಡವೇ ಎನ್ನುವುದಕ್ಕಾಗಿ ಒಂದು ಸಮಿತಿಯನ್ನು ನೇಮಕ ಮಾಡಲಾಗಿತ್ತು. ಸಮಿತಿಯು ಟಿಪ್ಪು ಆಡಳಿತ ಬಗ್ಗೆ ಮಾತ್ರ ಪಠ್ಯದಲ್ಲಿ ತಿಳಿಸಲಾಗಿದೆ. ಹೀಗಾಗಿ ಪಠ್ಯ ಕೈ ಬಿಡಬೇಡಿ ಅಂತ ಶಿಫಾರಸ್ಸು ಮಾಡಿತ್ತು. ಅಲ್ಲದೇ ಹೊಸ ಅಂಶ ಪಠ್ಯದಲ್ಲಿ ಸೇರಿಸಬೇಕಾದರೆ ಹೊಸ ಸಮಿತಿ ಮಾಡಿ ಅದರ ವರದಿ ಮೇಲೆ ನಿರ್ಧಾರ ಮಾಡಿ ಅಂತ ಸಲಹೆ ನೀಡಿತ್ತು. ಸಲಹೆ ಸ್ವೀಕಾರ ಮಾಡಿರುವ ಶಿಕ್ಷಣ ಸಚಿವರು ಟಿಪ್ಪುವಿನ ಕ್ರೌರ್ಯ ಸೇರಿದಂತೆ ಇನ್ನಿತರ ಅಂಶ ಸೇರಿಕೆ ಬಗ್ಗೆ ವರದಿ ನೀಡಲು ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ. ಕಮಿಟಿ ವರದಿ ಕೊಟ್ಟ ಬಳಿಕ ಮುಂದಿನ ನಿರ್ಧಾರ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
Advertisement
Advertisement
ಈ ವರ್ಷ ಪಠ್ಯ ಪುಸ್ತಕ ಮುದ್ರಣದ ಟೆಂಡರ್ ಮುಕ್ತಾಯವಾಗಿ ಮುದ್ರಣ ಹಂತಕ್ಕೆ ತಲುಪಿದೆ. ಈಗ ಹೊಸ ಅಂಶ ಸೇರ್ಪಡೆ ಸಾಧ್ಯವಿಲ್ಲ. ಹೀಗಾಗಿ ಈ ವರ್ಷದ ಪಠ್ಯದಲ್ಲಿ ಟಿಪ್ಪು ಇತಿಹಾಸ ತೆಗೆಯುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ವರ್ಷದ ಟಿಪ್ಪು ಬಗ್ಗೆ ಯಾವ ಅಂಶ ಸೇರ್ಪಡೆಯಾಗಬೇಕು ಎನ್ನುವ ಅಂಶವನ್ನು ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ.