ಕಿಚ್ಚ ಸುದೀಪ್ (Sudeep) ನಟನೆಯ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ರಂದು ತೆರೆಗೆ ಬರೋಕೆ ಸಿದ್ಧವಾಗಿದೆ. ಸುದೀಪ್ ಬರ್ತ್‍ಡೇ ವಿಶೇಷವಾಗಿ ಟೀಸರ್ ರಿಲೀಸ್ ಆಗಿ ಕಿಚ್ಚನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿತ್ತು. ಇದೀಗ ಟ್ರೈಲರ್ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಅಂದಹಾಗೆ ಮಾರ್ಕ್ ಸಿನಿಮಾದ (Mark Movie) ಟ್ರೈಲರ್ ಡಿ.7ರಂದು ಬೆಳಗ್ಗೆ 11.58ಕ್ಕೆ ರಿಲೀಸ್ ಆಗುತ್ತಿದೆ.
ಮ್ಯಾಕ್ಸ್ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಬಹುತೇಕ ಮ್ಯಾಕ್ಸ್ ಸಿನಿಮಾದ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಿದ್ದಾರೆ. ಟ್ರೈಲರ್ ರಿಲೀಸ್ ಬಗ್ಗೆ ಚಿತ್ರತಂಡ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಇನ್ನು ಕಿಚ್ಚ ಸುದೀಪ್ ಟ್ವೀಟ್ ಶೇರ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 5ಕ್ಕೆ ಡೆವಿಲ್ ಟ್ರೈಲರ್ ರಿಲೀಸ್ ಆಗಿ ಕಮಾಲ್ ಮಾಡ್ತಿದೆ. ಇದೀಗ ಸುದೀಪ್ ಅಭಿನಯದ ಮಾರ್ಕ್ ಟ್ರೈಲರ್ ರಿಲೀಸ್‍ಗೂ ಮುಹೂರ್ತ ಇಡಲಾಗಿದೆ.
ಸಿನಿಮಾದ ಟ್ರೈಲರ್ ಅಥವಾ ಸಾಂಗ್ಸ್ ಬರುವ ಮುನ್ನ ಒಂದು ವಾರದ ಮುಂಚೆನೇ ಅಭಿಮಾನಿಗಳಿಗೆ ಒಂದು ಸಂದೇಶ ಕೊಡುವ ಈ ಕಾಲದಲ್ಲಿ ಒಂದು ದಿನದ ಅಂತರದಲ್ಲೇ ಟ್ರೈಲರ್ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇನ್ನು ಟ್ರೈಲರ್ ಹೇಗಿರಲಿದೆ ಅನ್ನೋ ಕುತೂಹಲದಲ್ಲಿ ಕಿಚ್ಚನ ಫ್ಯಾನ್ಸ್ ಕಾಯುತ್ತಿದ್ದಾರೆ. ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

