ಚಿಕ್ಕಮಗಳೂರು: ಟಿಂಬರ್ ತುಂಬಿದ್ದ ಟ್ರ್ಯಾಕ್ಟರ್ ಓವರ್ ಲೋಡ್ ಆಗಿ ಎತ್ತರದ ದಿಬ್ಬ ಕ್ರಮಿಸಲಾಗದೇ ಹಿಮ್ಮುಖವಾಗಿ ಬಂದು ಪಲ್ಟಿಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ನಡೆದಿದೆ.
Advertisement
ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುವ ವೇಳೆ ನಿಯಂತ್ರಣ ಅಸಾಧ್ಯ ಎಂದು ಟ್ರ್ಯಾಕ್ಟರ್ ಚಾಲಕ ಹೊರಗೆ ಜೀವ ಉಳಿಸಿಕೊಂಡಿದ್ದಾನೆ. ಮೂಡಿಗೆರೆ ತಾಲೂಕಿನ ಬಾಳೂರಿನಿಂದ ಮರದ ಟಿಂಬರ್ ತುಂಬಿಕೊಂಡಿದ್ದ ಟ್ರ್ಯಾಕ್ಟರ್ ಮಾಕೋನಹಳ್ಳಿ ಮಾರ್ಗವಾಗಿ ಮೂಡಿಗೆರೆಯತ್ತ ಹೊರಟಿತ್ತು. ಟ್ರ್ಯಾಕ್ಟರ್ ಮಾಕೋನಹಳ್ಳಿ ಬಳಿ ಬರುತ್ತಿದ್ದಂತೆ ಎತ್ತರದಲ್ಲಿ ಟ್ರ್ಯಾಕ್ಟರ ಟೈರ್ ಪಂಚರ್ ಆಗಿದೆ. ಚಾಲಕ ಗಾಡಿಯನ್ನ ನಿಯಂತ್ರಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ. ಟ್ರ್ಯಾಕ್ಟರ್ ಯಾವಾಗ ನಿಯಂತ್ರಣಕ್ಕೆ ಸಿಗದೇ ಹಿಮ್ಮುಖವಾಗಿ ಚಲಿಸಲು ಆರಂಭವಾಯ್ತೋ ಚಾಲಕ ಟ್ರ್ಯಾಕ್ಟರ್ ನಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾನೆ.
Advertisement
Advertisement
ಅದೃಷ್ಟವಶಾತ್ ಟ್ರ್ಯಾಕ್ಟರ್ ಹಿಮ್ಮುಖವಾಗಿ ವೇಗವಾಗಿ ಚಲಿಸುವಾಗ ಹಿಂದಿಯೂ ಯಾವುದೇ ವಾಹನಗಳು ಇರಿಲಿಲ್ಲ. ಒಂದು ವೇಳೆ ವಾಹನಗಳು ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಟ್ರ್ಯಾಕ್ಟರ್ ಗೆ ಓವರ್ ಓವರ್ ಲೋಡ್ ತುಂಬಿದ್ದೇ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು
Advertisement
ಟ್ರ್ಯಾಕ್ಟರ್ ಹಾಗೂ ಲಾರಿಗಳಿಗೆ ಓವರ್ ಲೋಡ್ ತುಂಬುತ್ತಿರುವುದರಿಂದ ರಸ್ತೆಯೂ ಹಾಳಾಗುತ್ತಿದೆ ಎಂದು ಸ್ಥಳೀಯರು ಟಿಂಬರ್ ಸಾಗಿಸುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗ್ತಿದೆ: ಜಮೀರ್ ಅಹ್ಮದ್ ಖಾನ್