‘ಪ್ರೇಮಂ’ ಬೆಡಗಿ ಅನುಪಮಾ ಪರಮೇಶ್ವರನ್ ಸದ್ಯ ಪಡ್ಡೆಹುಡುಗರ ಕ್ರಶ್ ಆಗಿದ್ದಾರೆ. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾ ಸಕ್ಸಸ್ ಆದ್ಮೇಲೆ ಅನುಪಮಾ (Anupama Parameshwaran) ದುಬಾರಿ ನಟಿಯಾಗಿದ್ದಾರೆ. ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ. ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಎಂದಿದ್ದ ಅನುಪಮಾ ಇದೀಗ ಬದಲಾಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಅಭಿಮಾನಿಗಳ ಉತ್ತರ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ್ಮೇಲೆ ಅನುಪಮಾಗೆ ಸಹಜವಾಗಿ ಬೇಡಿಕೆ ಜಾಸ್ತಿ ಆಗಿದೆ.
ಕಳೆದ ವರ್ಷ ‘ಕಾರ್ತಿಕೇಯ 2’ ಸಿನಿಮಾ ಆದ್ಮೇಲೆ ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಕೂಡ ಬ್ರೇಕ್ ಸಿಕ್ಕಿದೆ. 40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಒಂದೂವರೆ ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಿದ್ದಾರಂತೆ.
ಇದೀಗ ಬರುತ್ತಿರುವ ಸಿನಿಮಾ ಆಫರ್‌ಗಳಿಗೆ ದುಬಾರಿ ಸಂಭಾವನೆಗೆ ನಟಿ ಬೇಡಿಕೆ ಇಡುತ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ. ಈ ಮೂಲಕ ರಶ್ಮಿಕಾ, ಶ್ರೀಲೀಲಾ, ಪೂಜಾ ಹೆಗ್ಡೆ ಸಾಲಿಗೆ ಸೇರುವ ಮೂಲಕ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೋನುಗೆ ಜಾಮೀನು: ಇಂದು ಜೈಲಿನಿಂದ ಬಿಡುಗಡೆ
ತೆಲುಗು ಮಾತ್ರವಲ್ಲ ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಿಂದ ನಟಿಗೆ ಬಂಪರ್ ಆಫರ್‌ಗಳು ಅರಸಿ ಬರುತ್ತಿದೆ. ಉತ್ತಮ ಕಥೆಯೊಂದಿಗೆ ನಟಿ ಮತ್ತೆ ಬರಲು ಪ್ಲ್ಯಾನ್ ಮಾಡಿದ್ದಾರೆ.