ಗಾಂಧಿನಗರ: ಆಕೆ ಸ್ಪುರದ್ರೂಪಿ ಯುವತಿ. ಯಾವ ಚಲನಚಿತ್ರದ ನಟಿಗೂ ಕಮ್ಮಿ ಇರ್ಲಿಲ್ಲ. ಒಮ್ಮೆ ಯಾರಾದ್ರೂ ಆಕೆಯನ್ನು ನೋಡಿದ್ರೆ ನೋಡ್ತಾನೆ ಇರ್ಬೇಕು ಅನ್ನುವಷ್ಟು ಸುಂದರಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಟಿಕ್‌ಟಾಕ್‌ಗಳಿಗೆ (TikTok) ಕಾಮೆಂಟ್ ಮಾಡುವ ಸಂದರ್ಭದಲ್ಲಿ ಯುವಕ-ಯುವತಿಯರ ನಡುವೆ ಜಗಳಗಳು ನಡೆಯುವುದು ಸಹಜ.
ಆದ್ರೆ ಇಲ್ಲೊಬ್ಬಳು ಟಿಕ್‌ಟಾಕ್ (TikTok) ತಾರೆ ತನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಜಗಳವಾಡಿದ್ದ ಯುವಕನಿಗೆ ಬೆದರಿಕೆ ಹಾಕಲೆಂದೇ 450 ಕಿಮೀ ಪ್ರಯಾಣ ಬೆಳೆಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ.. ಆದ್ರೆ ಅನಿವಾರ್ಯ – ಸಿಎಂ
Advertisement
Advertisement
ಸೂರತ್‌ನ ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ (Kirti Patel) ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಬೆದರಿಕೆ ಹಾಕಲು 450 ಕಿಮೀ ತೆರಳಿದ್ದಾಳೆ. ಆದ್ರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕಾಗಮಿಸಿದ ಪೊಲೀಸರು (Bhesan Police Station) ಪರಿಸ್ಥಿತಿ ಕೈಮೀರುವ ಮುನ್ನವೇ ಕೀರ್ತಿ ಪಟೇಲ್ ಹಾಗೂ ಇತರ 9 ಮಂದಿ ಸಹಚರರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ
Advertisement
Advertisement
ಕಾನೂನುಬಾಹಿರ ಸಭೆ, ಅಪರಾಧ ಕೃತ್ಯದ ಸಾಮಾನ್ಯ ಉದ್ದೇಶ, ಅವಮಾನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಟಿಕ್‌ಟಾಕ್ ತಾರೆಯನ್ನ ಬಂಧಿಸಲಾಗಿತ್ತು. ಆದ್ರೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಭೇಸನ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಕೀರ್ತಿ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ತನಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಳು. ಹಾಗಾಗಿ ಸೂರತ್‌ನಿಂದ ಭೇಸನ್‌ವರೆಗೆ ಬಂದಿದ್ದಳು ಎಂದು ಯುವಕ ಜಮನ್ ಭಯಾನಿ ಹೇಳಿದ್ದಾನೆ.
ಕೀರ್ತಿ ಪಟೇಲ್ ಕಿರಿಕ್ ಇದೇ ಮೊದಲೇನಲ್ಲ. ಈ ಹಿಂದೆಯೂ ವಸ್ತಾçಪುರ ಪ್ರದೇಶದಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಕ್ಕಾಗಿ ಅಹಮದಾಬಾದ್ ಪೊಲೀಸರು ಆಕೆಯನ್ನ ಬಂಧಿಸಿದ್ದರು.