ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲಕ ಟಿಕ್‍ಟಾಕ್ ಆ್ಯಪ್ ಮತ್ತೆ ಕೆಲ ತಿಂಗಳಲ್ಲಿ ಆರಂಭವಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.
Advertisement
ಟಿಕ್‍ಟಾಕ್ ಮಾಲೀಕತ್ವದ ಕಂಪನಿ ಬೈಟ್‍ಡಾನ್ಸ್ ಭಾರತದಲ್ಲಿ ಟಿಕ್‍ಟಾಕ್ ಅನ್ನು ಮತ್ತೆ ಆರಂಭಿಸಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳಿಂದ ವರದಿಯಾಗಿದೆ. ಅಲ್ಲದೆ ಕೆಲ ತಿಂಗಳಲ್ಲಿ ಟಿಕ್‍ಟಾಕ್ ಆ್ಯಪ್ ಮತ್ತೆ ಕಾಣಸಿಗಲಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಐಟಿ ನಿಯಮ – ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದಿಂದ 105 ಆದೇಶ
Advertisement
Advertisement
ಈ ಹಿಂದೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಟಿಕ್‍ಟಾಕ್ ಆ್ಯಪ್‍ನ್ನು ಭಾರತ ಸರ್ಕಾರ 2020ರಲ್ಲಿ ನಿಷೇಧಿಸಿತ್ತು. ಚೀನಾ ಅಪ್ಲಿಕೇಶನ್‍ಗಳ ಮೂಲಕ ಭಾರತದ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‍ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‍ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‍ಟಾಕ್ ಸೇರಿದಂತೆ 58 ಚೀನಾದ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಇದನ್ನೂ ಓದಿ: Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು
Advertisement
ಆ ಬಳಿಕ ಇದೀಗ ಮತ್ತೆ ದೇಶದಲ್ಲಿ ಟಿಕ್‍ಟಾಕ್ ಮತ್ತು ಬಿಜಿಎಮ್‍ಐ ಆ್ಯಪ್‍ಗಳನ್ನು ಆರಂಭಿಸಲು ಚರ್ಚೆ ನಡೆದಿದೆ. 5 ತಿಂಗಳ ಅಂತರದ ಒಳಗಾಗಿ ಆ್ಯಪ್‍ಗಳು ಪ್ಲೇಸ್ಟೋರ್‌ನಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬ್ಯಾನ್ ಆದ ಅಪ್ಲಿಕೇಶನ್‍ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು.