LatestMain PostSmartphonesTech

ಹೊಸ ಐಟಿ ನಿಯಮ – ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದಿಂದ 105 ಆದೇಶ

Advertisements

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮದ ವಿಷಯವನ್ನು ನಿರ್ಬಂಧಿಸಲು ಸರ್ಕಾರ 105 ಆದೇಶಗಳನ್ನು ಹೊರಡಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಅಡಿಯಲ್ಲಿ ವಿಷಯವನ್ನು ನಿರ್ಬಂಧಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ 105 ಆದೇಶಗಳನ್ನು ನೀಡಿದೆ. ಈ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಲಿಖಿತ ಪ್ರತಿಕ್ರಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜೀವ್ ಚಂದ್ರಶೇಖರ್ ನೀಡಿರುವ ಮಾಹಿತಿಯಲ್ಲಿ, ಡಿಸೆಂಬರ್ 2021 ಹಾಗೂ ಏಪ್ರಿಲ್ 2022ರ ನಡುವೆ ಯೂಟ್ಯೂಬ್‌ಗೆ ವಿಷಯಗಳನ್ನು ನಿರ್ಬಂಧಿಸುವ 94 ನಿರ್ದೇಶನಗಳನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಐಟಿ ನಿಯಮಗಳ ಅಡಿಯಲ್ಲಿ ಟ್ವಿಟ್ಟರ್‌ಗೆ 5 ಹಾಗೂ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ತಲಾ 3 ನಿರ್ದೇಶನಗಳನ್ನು ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಮಧ್ಯವರ್ತಿಗಳನ್ನು ಜವಾಬ್ದಾರಿಯುತರನ್ನಾಗಿ ಮಾಡಲು ಸರ್ಕಾರ ಐಟಿ ನಿಯಮವನ್ನು 2021ರ ಫೆಬ್ರವರಿ 25ರಂದು ಜಾರಿಗೆ ತಂದಿದೆ ಎಂದು ತಿಳಿಸಿದರು.

ಜೂನ್‌ನಲ್ಲಿ ಕೇಂದ್ರ ಐಟಿ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಸರ್ಕಾರ ಕಾನೂನು ಬದಲಾವಣೆ ಹಾಗೂ ನಿಯಮಗಳನ್ನು ತರಲಿದೆ ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಗಲ್ಲು ಶಿಕ್ಷೆ ಕಾನೂನಿನ ಬಳಿಕ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ: ಗೆಹ್ಲೋಟ್

Live Tv

Leave a Reply

Your email address will not be published.

Back to top button