ಮುಂಬೈ: ಟಿಕ್ ಟಾಕ್ ಆ್ಯಪ್ ಬ್ಯಾನ್ ಮಾಡುವಂತೆ ಸಾಕಷ್ಟು ಜನರು ಒತ್ತಾಯಿಸುತ್ತಿದ್ದಾರೆ. ಈ ನಡುವೆ 2016ರಲ್ಲಿ ನಾಪತ್ತೆಯಾಗಿದ್ದ ಮುಂಬೈ ಮೂಲದ ಯುವತಿಯೊಬ್ಬಳು 3 ವರ್ಷದ ಬಳಿಕ ಟಿಕ್ ಟಾಕ್ ಆ್ಯಪ್ ಮೂಲಕ ಪತ್ತೆಯಾಗಿದ್ದಾಳೆ.
2016ರಲ್ಲಿ ಯುವತಿಯೊಬ್ಬಳು ತನ್ನ ಮನೆಯನ್ನು ಬಿಟ್ಟು ಹೋಗಿದ್ದಳು. ಆಗ ಆಕೆಯ ಪೋಷಕರು ತಮ್ಮ ಮಗಳನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ಹುಡುಕಾಡಿದ್ದಾರೆ. ಆದರೆ ಆಕೆ ಎಲ್ಲೂ ಸಿಗದೇ ಇದ್ದಾಗ 2018ರಲ್ಲಿ ಪೊಲೀಸರು ಈ ಪ್ರಕರಣವನ್ನು ಮಾನವ ಕಳ್ಳಸಾಗಣೆ ಇಲಾಖೆಗೆ ಒಪ್ಪಿಸಿತ್ತು.
Advertisement
Advertisement
ಯುವತಿ ಪತ್ತೆಯಾಗಿದ್ದು ಹೇಗೆ?
ಕೆಲವು ದಿನಗಳ ಹಿಂದೆ ಯುವತಿಯ ಸಹೋದರಿ ಹಾಗೂ ಆಕೆಯ ಪತಿ ಭೋಜ್‍ಪುರಿ ಭಾಷೆಯಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು ಹಾಗೂ ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದ ಯುವತಿ, ಅಭಯ್ ಶೆಟ್ಟಿ ಎಂದು ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಅವರಿಗೆ ಮೆಸೇಜ್ ಮಾಡಲು ಶುರು ಮಾಡಿದ್ದಾಳೆ. ಮೆಸೇಜ್ ಮಾಡುವಾಗ ಯುವತಿ ಕುಟುಂಬದ ಸದಸ್ಯರ ಬಗ್ಗೆ ಪ್ರಶ್ನಿಸಿದ್ದಾಳೆ. ಇದರಿಂದ ಅನುಮಾನಗೊಂಡ ಸಹೋದರಿ ಆಕೆಯ ಪತಿಗೆ ಈ ವಿಷಯವನ್ನು ತಿಳಿಸಿದ್ದಾಳೆ.
Advertisement
Advertisement
ಯುವತಿಯ ಸಹೋದರಿ ತನ್ನ ಪತಿಗೆ ಅಲ್ಲದೇ ಪೊಲೀಸರಿಗೂ ಈ ವಿಷಯವನ್ನು ತಿಳಿಸಿದ್ದಾಳೆ. ಬಳಿಕ ಯುವತಿ ಮೆಸೇಜ್ ಮಾಡುವಾಗ ವಿಡಿಯೋ ಕಾಲ್ ಮಾಡು ಎಂದು ಆಕೆಯ ಸಹೋದರಿ ಹಾಗೂ ಆಕೆಯ ಪತಿ ಹೇಳಿದ್ದಾರೆ. ಯುವತಿ ವಿಡಿಯೋ ಕಾಲ್ ಮಾಡಿದ್ದಾಗ ಆಕೆಯ ಸಹೋದರಿ ಆಕೆಯನ್ನು ಗುರುತಿಸಿದ್ದಾಳೆ. ಬಳಿಕ ನಿನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ತಕ್ಷಣ ಯುವತಿ ಊರಿಗೆ ಹಿಂತಿರುಗಿದ್ದಳು.
ಯುವತಿ ಊರಿಗೆ ಹಿಂತಿರುಗುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆಗ ಆಕೆ ನನ್ನನ್ನು ಯಾರೂ ಅಪಹರಿಸಲಿಲ್ಲ. ನನ್ನ ಮನೆಯಲ್ಲಿ ನನಗೆ ಸ್ವಾತಂತ್ರ್ಯ ಇಲ್ಲದೇ ಇರುವ ಕಾರಣ ನಾನು ಮನೆ ಬಿಟ್ಟು ಓಡಿ ಹೋಗಿದೆ ಎಂದು ಯುವತಿ ಪೊಲೀಸರ ಬಳಿ ಹೇಳಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv