– ಇದ್ದಕ್ಕಿದ್ದಂತೆ ಕ್ಲಾರಿಫಿಕೇಶನ್ ಕೊಟ್ಟ ಹೆಚ್‍ಡಿಕೆ
ಬೆಂಗಳೂರು: ಲೋಕಸಭೆ ಚುನಾವಣೆಗೂ (Loksabha Election) ಮುನ್ನವೇ ಡಿಕೆ ಶಿವಕುಮಾರ್ (DK Shivakumar) ಅವರನ್ನ ವಿಪಕ್ಷಗಳು ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಲೋಕ ಸಮರಕ್ಕೆ ತಿಹಾರ್ ವಾರ್ ಶುರುವಾಗಿದ್ದು, ಡಿಕೆಶಿಯನ್ನ ಜೈಲಿಗೆ ಹಾಕುವ ಬಗ್ಗೆ ಪ್ರೀಪ್ಲ್ಯಾನ್ ಆಗಿದೆ ಎನ್ನಲಾಗುತ್ತಿದೆ. ಇದಕ್ಕೆ ಡಿಕೆ ಬ್ರದರ್ಸ್ ತಿರುಗುಬಾಣ ಅಸ್ತ್ರ ಪ್ರಯೋಗಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
Advertisement
ಎಲೆಕ್ಷನ್‍ಗೆ ಹಳೇ ಮೈಸೂರು ಭಾಗದಲ್ಲಿ ಇನ್ನೊಂದು ಅಸಲಿ ವಾರ್ ಬಾಕಿಯಿದೆ. 10-12 ದಿನಗಳ ಹಿಂದಷ್ಟೇ ಮಾಜಿ ಸಿಎಂ ಹೆಚ್‍ಡಿಕೆ ತಿಹಾರ್ ಜೈಲು ಬಗ್ಗೆ ನೆನಪಿಸಿ, ಮತ್ತೆ ತಿಹಾರ್ ಜೈಲಿಗೆ ಹೋಗೋ ಕಾಲ ಬರುತ್ತೆ ಎಂದು ಟಕ್ಕರ್ ಕೊಟ್ಟಿದ್ರು. ಅಮಿತ್ ಶಾ (Amitshah) ಬಳಿ ಜೈಲಿಗೆ ಕಳುಹಿಸೋ ಷರತ್ತು ಹಾಕಿ ಬಂದಿರಬೇಕು ಎಂದು ಡಿಕೆ ಬ್ರದರ್ಸ್ ಹೇಳಿದ್ರು. ಇದಷ್ಟೇ ಅಲ್ಲದೇ ಗುರುವಾರ ಇದೊಂದು ಪ್ರೀಪ್ಲ್ಯಾನ್ ಇರಬೇಕು ಎಂದು ಡಿಕೆಶಿಯಿಂದ ಸಿಂಪಥಿ ಗೇಮ್ ಶುರುಮಾಡಿದ್ದಾರಂತೆ. ಇದನ್ನೂ ಓದಿ: ಆಯುಧಪೂಜೆ ವೇಳೆ ರಾಸಾಯನಿಕಯುಕ್ತ ಅರಿಶಿಣ, ಕುಂಕುಮ ಬಳಸ್ಬೇಡಿ- ರಾಜಕೀಯ ಸ್ವರೂಪ ಪಡೆದ ಆದೇಶ
Advertisement
Advertisement
ಈ ಬೆನ್ನಲ್ಲೇ ಇದ್ದಕ್ಕಿದ್ದಂತೆ ತಿಹಾರ್ ಜೈಲು ಹೇಳಿಕೆಗೆ ಹೆಚ್‍ಡಿಕೆ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ನಾನು ಡಿಕೆಶಿ ಹೇಳಿಕೆಗೆ ರಾಜಕೀಯವಾಗಿ ಮಾತನಾಡಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಲೋಕಸಭೆ ಚುನಾವಣೆಗೆ ಹಳೇ ಮೈಸೂರು ಭಾಗದಲ್ಲಿ ಸಿಂಪಥಿ ಪಾಲಿಟಿಕ್ಸ್ ಆತಂಕ ಹೆಚ್ಚಾಯ್ತಾ..? ಹೆಚ್‍ಡಿಕೆ, ಬಿಜೆಪಿ ನಾಯಕರ ಆರೋಪಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ತಾರಾ ಡಿಕೆ ಬ್ರದರ್ಸ್. ಒಂದು ವೇಳೆ ಸಿಂಪಥಿ ಪಾಲಿಟಿಕ್ಸ್ ಪ್ಲೇ ಮಾಡಿದ್ರೆ ಬಿಜೆಪಿ, ಜೆಡಿಎಸ್‍ಗೆ ಎಷ್ಟು ನಷ್ಟ..? ಯಾರಿಗೆ ಲಾಭ..? ಅನ್ನೋದನ್ನ ಕಾದು ನೋಡಬೇಕಿದೆ.
Advertisement
Web Stories