ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ (Tigers Death Case) ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೃತ ಹಸುವಿನ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಸುವಿನ ಮಾಲೀಕ ಕಳ್ಳಬೇದೊಡ್ಡಿಯ ಕೋನಪ್ಪ ಹಾಗೂ ಮಾದುರಾಜ್, ಕೊಪ್ಪ ಗ್ರಾಮದ ನಾಗರಾಜು ಮೂವರ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?
ನಿನ್ನೆ ಹಸು ಯಾರದೆಂಬ ಪತ್ತೆಗೆ ದನಗಾಹಿಗಳನ್ನು ಸ್ಥಳಕ್ಕೆ ಕರೆತಂದು ಅರಣ್ಯ ಸಿಬ್ಬಂದಿ ವಿಚಾರಣೆ ನಡೆಸಿದ್ದರು. ಈ ವೇಳೆ ಹಸುವಿನ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದಿದ್ದರು. ಹಸುವಿನ ಮಾಲೀಕ ಕೋನಪ್ಪ ಮತ್ತು ನಾಗರಾಜು ಇಬ್ಬರೂ ಅಮಾಯಕರಂತೆ ವರ್ತಿಸಿದ್ದರು. ಹಸುವನ್ನು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಹುಲಿಗಳ ಸಾವು ಪ್ರಕರಣದವನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ. ಕೊಳ್ಳೇಗಾಲ ವಿಜಿಲೆನ್ಸ್ ತಂಡ ಹಾಗೂ ಅರಣ್ಯ ಇಲಾಖೆಯ ಎಸಿಎಫ್ ಗಜಾನನ ಹೆಗಡೆ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ನಿನ್ನೆ ಮೀಣ್ಯಂ, ಗಾಜನೂರು, ಕಳಬಾಯಿ ದೊಡ್ಡಿ, ಕೊಪ್ಪ ಗ್ರಾಮದ ಕೆಲ ಶಂಕಿತರನ್ನು ತಂಡ ವಿಚಾರಣೆ ನಡೆಸಿತ್ತು. ರಾತ್ರಿ ವಿಚಾರಣೆ ವೇಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತು. ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು
ನಿನ್ನೆ ಕಳ್ಳಬೇದೊಡ್ಡಿಯ ಶಿವಣ್ಣ ಎಂಬಾತನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು. ತಡರಾತ್ರಿ ಶಿವಣ್ಣ ಪುತ್ರ ಮಾದರಾಜು ಅರಣ್ಯ ಇಲಾಖೆ ವಶಕ್ಕೆ ಸಿಕ್ಕಿದ್ದಾನೆ. ಈತ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ.