– ನಮ್ಮಪ್ಪನಿಗೆ ಐವರು ಮಹಿಳೆಯರ ಜೊತೆಯಿದೆ ಸಂಬಂಧ
– ಅಮ್ಮನ ಬಾಯಲ್ಲಿ ಚಪ್ಪಲಿಯಿಟ್ಟು ಅವಮಾನಿಸ್ತಿದ್ದ
– ಸಹೋದರಿಯರ ಜೀವನ ಹಾಳಾಗಲು ಅಪ್ಪನೇ ಕಾರಣ
– 3 ಕೋಟಿಯ ಮನೆ ಸೋರುತ್ತಿದೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐವರ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಆತ್ಮಹತ್ಯೆಗೂ ಮುನ್ನ ಮಕ್ಕಳು ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡೆತ್ ನೋಟ್ ನಲ್ಲಿ ಮಕ್ಕಳು ಅಪ್ಪ ಶಂಕರ್ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ.
Advertisement
ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್ ಹಾಗೂ ಕುಡುಕ ಎಂದು ಮೃತ ಪುತ್ರ ಮಧುಸಾಗರ್ ಆರೋಪಿಸಿದ್ದಾರೆ. ನಮ್ಮಪ್ಪನಿಗೆ ಐವರು ಮಹಿಳೆಯರೊಂದಿಗೆ ಸಂಬಂಧ ಇತ್ತು. ಅಲ್ಲದೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯ ಮಗಳನ್ನು ಮದುವೆಯಾಗುವಂತೆ ನನ್ನನ್ನು ಪೀಡಿಸುತ್ತಿದ್ದನು. ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದನು ಎಂದೆಲ್ಲಾ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಇದನ್ನೂ ಓದಿ: ತಂದೆ ಶಂಕರ್ ಅನೈತಿಕ ಸಂಬಂಧವೇ ಕುಟುಂಬಕ್ಕೆ ಕುತ್ತಾಯ್ತಾ..? – ಅಪ್ಪನ ಬಗ್ಗೆ ಮೃತ ಮಕ್ಕಳ ಡೆತ್‍ನೋಟ್
Advertisement
Advertisement
ಡೆತ್ ನೋಟ್ ನಲ್ಲೇನಿದೆ..?
ನನ್ನ ತಂದೆ ಸ್ಯಾಡಿಸ್ಟ್, ಕಾಮುಕ. ತಂದೆ ಶಂಕರ್‍ಗೆ ಐವರು ವಿವಾಹಿತ ಮಹಿಳೆಯ ಜೊತೆ ಸಂಬಂಧವಿದೆ. ನಮ್ಮ ಏರಿಯಾದಲ್ಲೇ ಇರುವ ಓರ್ವ ಮಹಿಳೆ ಜೊತೆ ಸಂಪರ್ಕ ಇದೆ. ತಾನು ಸಂಬಂಧ ಹೊಂದಿದ್ದ ಮಹಿಳೆಯ ಮಗಳನ್ನೇ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾನೆ. ತನ್ನ ಕಚೇರಿಯಲ್ಲಿ ಓರ್ವ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹೀಗೆ ಹಲವು ಮಹಿಳೆಯರಿಗೆ ಬ್ಲಾಕ್‍ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹಲವು ಮಹಿಳೆಯರನ್ನು ಟ್ರ್ಯಾಪ್ ಮಾಡಿ ಸಂಬಂಧ ಹೊಂದಿದ್ದರು. ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಪ್ಪನಿಂದ ನಾನು, ಅಮ್ಮ ದೂರ ಉಳಿದಿದ್ದೆವು. ನಮ್ಮ ಅಮ್ಮ, ಅಕ್ಕಂದಿರಿಗೆ ಕಿರುಕುಳ ನೀಡುತ್ತಿದ್ದರು. ಈ ಮೂಲಕ ಅಕ್ಕಂದಿರ ಜೀವನವನ್ನೂ ಹಾಳು ಮಾಡಿದ್ದಾರೆ.
Advertisement
ನನ್ನ ತಂದೆ ಕಾಮುಕ, ಅಪ್ಪನ ಎಲ್ಲಾ ಕೃತ್ಯದ ಬಗ್ಗೆ ಅಮ್ಮನಿಗೆ ಗೊತ್ತಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆಗಳಾಗಿವೆ. ನಮ್ಮನ್ನು ಮನೆಯಲ್ಲೇ ಕೂಡಿ ಹಾಕುತ್ತಿದ್ದರು. ಅಪ್ಪನ ಕಿರುಕುಳದಿಂದ ಅಮ್ಮನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಯನ್ನು ಕೂಡ ನೀಡಲಾಗಿತ್ತು. ಈ ಹಿಂದೆ ಪೊಲೀಸ್ ಠಾಣೆಯಲ್ಲೂ ಅಪ್ಪನ ವಿರುದ್ಧ ಕೇಸ್ ದಾಖಲಾಗಿತ್ತು. 2007ರಲ್ಲಿ ಇದೇ ವಿಚಾರಕ್ಕೆ ಅಪ್ಪನ ಮೇಲೆ ಹಲ್ಲೆ ನಡೆದಿತ್ತು. 3 ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ರು, ಆದರೆ ಮನೆ ಸೋರುತ್ತೆ. ಕಿಟಕಿಯಿಂದ ನೀರು ಮನೆ ಒಳಗೆ ಬರುತ್ತೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು
ಅಕ್ಕನ ಗಂಡಂದಿರ ಮನೆಯವರು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಕ್ಕಂದಿರಿಗೆ ಅಪ್ಪ ಯಾವುದೇ ಆಸ್ತಿ ನೀಡಿರಲಿಲ್ಲ. ಹೀಗಾಗಿ ಗಂಡಂದಿರ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ನನ್ನ ತಂದೆ ಕುಡುಕ. ಹೀಗಾಗಿ ಮನೆಯ ಬಾಗಿಲು ಲಾಕ್ ಮಾಡುತ್ತಿರಲಿಲ್ಲ. ನಮ್ಮ ಅಪ್ಪ ಅತೀ ದೊಡ್ಡ ಸ್ಯಾಡಿಸ್ಟ್. ನನ್ನ ಅಮ್ಮನಿಗೆ ಕಿರುಕುಳ ಕೊಡುತ್ತಿದ್ದರು. ನನ್ನ ಅಮ್ಮನ ಚಾರಿತ್ರ್ಯಹರಣ ಮಾಡ್ತಿದ್ದರು. ಗಂಡ-ಹೆಂಡತಿ ನಡುವಿನ ಸಂಬಂಧ ಹಾಳು ಮಾಡ್ತಿದ್ದರು. ನಮ್ಮ ಅಪ್ಪ ಆತನ ಸಹೋದರಿಯನ್ನು ಆಕೆಯ ಗಂಡನಿಂದ ದೂರ ಮಾಡಿದ್ದಾರೆ.
ನನ್ನ ಮೊದಲ ಸಹೋದರಿಗೆ ಆಕೆಯ ಅತ್ತೆ ಮತ್ತು ಮಾವ, ಗಂಡನಿಗೆ ಹೇಳಿ ಹೊಡೆಸ್ತಿದ್ದರು. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಕ್ಕೆ ನಮ್ಮಪ್ಪನೇ ಕಾರಣ ಎಂದು ಮಗ ಮಧುಸಾಗರ್ ದೂರಿದ್ದಾನೆ. ನನ್ನ ಎರಡನೇ ಸಹೋದರಿಗೂ ನನ್ನ ತಂದೆ ತೊಂದರೆ ಕೊಟ್ಟಿದ್ದರು. ನನ್ನ ತಾಯಿಗೆ ಹಾನಿ ಉಂಟು ಮಾಡಲು ಯತ್ನಿಸಿದ್ದರು. ನಮ್ಮನಿಗೆ ನಮ್ಮಪ್ಪ ಚಪ್ಪಲಿಯಿಂದ ಹೊಡೆಯುತ್ತಿದ್ದರು. ನಮ್ಮಮ್ಮನ ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸ್ತಿದ್ದರು. ನಮ್ಮಮ್ಮನಿಗೆ ಇನ್ನೊಂದು ಸಂಬಂಧ ಇದೆ ಎಂದು ಶಂಕಿಸಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್
ನಮ್ಮನ್ನು ಮನೆಯೊಳಗೆ ಕೂಡಿ ಹಾಕಿ ಅಫೀಸ್‍ಗೆ ಹೋಗ್ತಿದ್ದರು. ನಮ್ಮಪ್ಪನ ಕಿರುಕುಳದಿಂದ ನನ್ನ ತಾಯಿ ಖಿನ್ನತೆಗೆ ಒಳಗಾಗಿ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ನಮ್ಮಮ್ಮನ ಅಸಹಾಯಕತೆಯನ್ನೇ ನಮ್ಮಪ್ಪ ಬಳಸಿಕೊಂಡು ಆಕೆಗೆ ಕಿರುಕುಳ ನೀಡ್ತಿದ್ದರು. ದಿನಾ ಕುಡಿದು ಬಂದು ಗಲಾಟೆ ಮಾಡ್ತಿದ್ದರು. ನಮ್ಮಪ್ಪನ ಜೊತೆ ನಾವು ಊಟನೂ ಮಾಡ್ತಿರಲಿಲ್ಲ. ಅವರು ಮನೆಗೆ ಬರುವ ಮೊದಲೇ ಊಟ ಮಾಡಿ ಮಲಗ್ತಿದ್ವಿ.
ಕೆಲಸ ಬಿಡುವಂತೆ ನನಗೆ, ನನ್ನ ಸಹೋದರರಿಗೆ ಕಿರುಕುಳ ಕೊಡ್ತಿದ್ದರು. ಅಪ್ಪನ ಕಿರುಕುಳ ತಾಳಲಾರದೇ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ. ನಾನು, ಅಮ್ಮ, ಸಹೋದರರಿರನ್ನು ಬೇರೆ ಬೇರೆ ಇಟ್ಟಿದ್ದರು. ನಮ್ಮ ಅಪ್ಪನ ಕಾಟದಿಂದ ನನ್ನ ಸಹೋದರರಿಯ ಶಿಕ್ಷಣ ಒಂದು ವರ್ಷ ಹಾಳಾಗಿತ್ತು ಎಂದೆಲ್ಲಾ ಡೆತ್ ನೋಟ್ ಬರೆದಿದ್ದು, ಈ ಡೆತ್ ನೋಟ್ ಶಂಕರ್ ಜೀವನಕ್ಕೆ ಕುತ್ತು ತರುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ- ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ