ಮಡಿಕೇರಿ: ಟಿಬೆಟಿಯನ್ನರಿಗೆ ಹೊಸ ವರ್ಷದ ಸಂಭ್ರಮ. ಕೊಡಗಿನ ಕುಶಾಲನಗರ ಸಮೀಪದ ಬೈಲುಕೊಪ್ಪದಲ್ಲಿರುವ ಟಿಬೆಟಿಯನ್ ಶಿಬಿರದಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ವಿಶ್ವದ ಅತೀ ದೊಡ್ಡ ಪರದೆಯನ್ನು ಇಂದು ಅನಾವರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಲಾಮಗಳು ಪಾಲ್ಗೊಂಡಿದ್ದರು.
ಫೆಬ್ರವರಿ ತಿಂಗಳಿಂದ ಟಿಬೆಟಿಯನ್ನರಿಗೆ ನೂತನ ವರ್ಷ ಆರಂಭವಾಗಿದೆ. ಇದಾದ ಹತ್ತು ದಿನಗಳಲ್ಲಿ ಲೋಸರ್ ಹಬ್ಬವನ್ನು ಅಚರಣೆ ಮಾಡುತ್ತಾರೆ. ಕೊಡಗಿನ ಕುಶಾಲನಗರ ಸಮೀಪದ ಬೈಲುಕೊಪ್ಪ ಟಿಬೆಟಿಯನ್ ಶಿಭಿರದಲ್ಲಿ ಇಂದು ಲೋಸರ್ ಹಬ್ಬವನ್ನು ಆಚರಿಸಲಾಯಿತು. ಇದನ್ನೂ ಓದಿ: ಅಂಡಮಾನ್ – ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಐಎಂಡಿ
Advertisement
Advertisement
ಹಬ್ಬದ ಸಂದರ್ಭದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡದಾದ ಪರದೆಯನ್ನು ಕೇವಲ 10 ನಿಮಿಷಗಳ ಕಾಲ ಅನಾವರಣ ಮಾಡಲಾಗುತ್ತದೆ. ಇದಕ್ಕೆ ಲೋಸರ್ ಎಂದು ಕರೆಯಲಾಗುತ್ತದೆ. ಈ ಪರದೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಟಿಬೆಟ್ ಗುರು ಮೊದಲು ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ಲಾಮಗಳು ಈ ಪರದೆಯನ್ನು ಮುಟ್ಟಿ ನಮಸ್ಕರಿಸುತ್ತಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಕೇವಲ ಅರ್ಧ ಗಂಟೆಯಲ್ಲಿ ಪೂರ್ಣಗೊಳ್ಳುತ್ತದೆ.
Advertisement
Advertisement
ಈ ಪರದೆಯ ಎತ್ತರ 180 ಅಡಿ ಹಾಗೂ ಅಗಲ 100 ಅಡಿ ಇದೆ. ಇದರ ಅನಾವರಣದ ಬಳಿಕ ಮತ್ತೆ ಗೋಲ್ಡ್ ಟೆಂಪಲ್‌ನಲ್ಲಿ ಇಡಲಾಗುತ್ತದೆ. ಇದನ್ನು ಮುಟ್ಟಿ ನಮಸ್ಕರಿಸುವುದರಿಂದ ಎಲ್ಲಾರಿಗೂ ಶಾಂತಿ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಲಾಮಗಳಲ್ಲಿ ಇದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಬಂದು ಟಿಬೆಟಿಯನ್ ಕ್ಯಾಂಪ್ ಮುಚ್ಚಲಾಗಿತ್ತು ಅಲ್ಲದೇ ಯಾವುದೇ ಹಬ್ಬ ಆಚರಣೆ ಮಾಡದೇ ಮೌನವಾಗಿದ್ದ ಕ್ಯಾಂಪ್‌ನಲ್ಲಿ ಇಂದು ಎಲ್ಲಾರೂ ಒಟ್ಟು ಸೇರಿ ಹೊಸ ವರ್ಷದ ಆಚರಣೆ ಮಾಡಿದರು. ಇದನ್ನೂ ಓದಿ: ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು
ಒಟ್ಟಿನಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಈ ಲೋಸರ್ ಹಬ್ಬವನ್ನು ವಿಜೃಂಭಣೆಯಿಂದ ಲಾಮಗಳು ಆಚರಣೆ ಮಾಡುತ್ತಾರೆ. ಇವರ ಪ್ರತಿಯೊಂದು ಆಚರಣೆಗಳೂ ಇದೇ ರೀತಿ ವಿಶೇಷತೆಯಿಂದ ಕೂಡಿರುತ್ತದೆ.