ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ (Kamal Haasan) ನಟಿಸಿರುವ ಬಹುನಿರೀಕ್ಷಿತ ‘ಥಗ್‌ಲೈಫ್’ (Thuglife) ಚಿತ್ರದ ʻಶುಗರ್ ಬೇಬಿʼ (Sugar Baby) ಹಾಡು ವಿವಾದಕ್ಕೀಡಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಸಿನಿಪ್ರಿಯರಲ್ಲಿ ಶುರುವಾಗಿದೆ.
Sweet surprise hits tomorrow at 5pm. Don’t miss it!#SugarBaby Second Single from May 21#ThuglifeAudioLaunch from May 24#Thuglife#ThuglifeFromJune5 #KamalHaasan #SilambarasanTR #IMAX
A #ManiRatnam Film
An @arrahman Musical@ikamalhaasan @SilambarasanTR_ #Mahendran… pic.twitter.com/2oRMFZGgc5
— Raaj Kamal Films International (@RKFI) May 20, 2025
ʻಶುಗರ್ ಬೇಬಿʼ ಎಂಬ ಪದವು ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರ ಹಾಡಿನ ಪ್ರೋಮೋ ಅನೇಕರ ಕುತೂಹಲ ಕೆರಳಿಸಿತ್ತು. ಇಂದು ಹಾಡು ಬಿಡುಗಡೆಯಾಗಲಿದ್ದು, ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದನ್ನೂ ಓದಿ: ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್ʼ!
ಚಿತ್ರದ ಸಂಗೀತ ಬಿಡುಗಡೆಯ ಭಾಗವಾಗಿ, ‘ಶುಗರ್ ಬೇಬಿ’ ಹಾಡು ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಇನ್ನೂ ಈ ಹಾಡಿನ ಶೀರ್ಷಿಕೆ ಮತ್ತು ನಟಿ ತ್ರಿಷಾ ಮಿಂಚಿಂಗ್ ದೃಶ್ಯಗಳ ಪ್ರೋಮೋ ಈಗಾಗಲೇ ಆರಂಭಿಕ ಸಂಚಲನ ಮೂಡಿಸಿದೆ.
ಪ್ರಚೋದನಕಾರಿ ವಿಷಯಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾದ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಹಿಂದಿನ ವಿಚಾರಗಳನ್ನು ಗಮನಿಸಿದರೆ, ಈ ಚಿತ್ರವೂ ಅದೇ ಹಾದಿಯಲ್ಲಿ ಸಾಗ್ತಿದಿಯೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಲ್ಲದೇ ಮಣಿರತ್ನಂ ನೀವು ಚೆನ್ನಾಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಮೇ 17 ರಂದು ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿತ್ತು. ಇನ್ನೂ ಸಿನಿ ರಸಿಕರ ಈ ಕಾತರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ! ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ