Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತ ಸ್ವತಂತ್ರವಾಗೋ 60 ದಿನಗಳ ಹಿಂದಿನ ಥ್ರಿಲ್ಲಿಂಗ್ ಕಹಾನಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಭಾರತ ಸ್ವತಂತ್ರವಾಗೋ 60 ದಿನಗಳ ಹಿಂದಿನ ಥ್ರಿಲ್ಲಿಂಗ್ ಕಹಾನಿ!

Bengaluru City

ಭಾರತ ಸ್ವತಂತ್ರವಾಗೋ 60 ದಿನಗಳ ಹಿಂದಿನ ಥ್ರಿಲ್ಲಿಂಗ್ ಕಹಾನಿ!

Public TV
Last updated: August 15, 2018 10:00 am
Public TV
Share
14 Min Read
60 day
SHARE

1947ರ ಜೂನ್ ತಿಂಗಳು ದೆಹಲಿ ಎಂದಿನಂತಿರಲಿಲ್ಲ. ತಾಪದಿಂದ ಸುಡುತ್ತಿದ್ದ ರಾಜಧಾನಿ ದೆಹಲಿ ರಾಜಕೀಯ ತಾಪದಲ್ಲಿ ಬೆಂದು ಹೋಗಿತ್ತು. ಪಂಜಾಬ್ ಹಾಗೂ ಬಂಗಾಳದಲ್ಲಿ ಹೊತ್ತಿಕೊಂಡ ದಂಗೆಯ ಬೆಂಕಿಯ ಧಗೆ ದೆಹಲಿಯನ್ನೂ ತಲುಪಿ ಬಿಟ್ಟಿತ್ತು. ರೈಸಿನಾ ಹಿಲ್ಸ್ನ ಹವಾನಿಯಂತ್ರಿತ ಕೋಣೆಯೊಂದ್ರಲ್ಲಿ ಕುಳಿತ ಮೌಂಟ್ ಬ್ಯಾಟನ್ ಗೆ ಈ ಬಿಸಿ ತಟ್ತಾ ಇತ್ತು. ದೇಶದ ಸ್ವಾತಂತ್ರ್ಯ ಹಾಗೂ ಯಾವ ರೀತಿ ದೇಶವನ್ನು ಇಬ್ಭಾಗಿಸಬೇಕು ಅನ್ನೋದಕ್ಕೆ ಕರೆಯಲಾಗಿದ್ದ ಸಭೆಯಲ್ಲೂ ಇದರ ಪರಿಣಾಮ ಚೆನ್ನಾಗೇ ತಟ್ಟಿತ್ತು. ಈ ಮೀಟಿಂಗ್ ನಲ್ಲಿ ಸರ್ದಾರ್ ಪಟೇಲರ್ ಹಾಗೂ ಜಿನ್ನಾ ನಡುವೆ ತೀವ್ರತೆರನಾದ ಚರ್ಚೆ ಆಯ್ತು. ಯಾರಿಗೂ ಒಂದು ನಿರ್ಧಾರಕ್ಕೆ ಬರೋದಕ್ಕೆ ಸಾಧ್ಯಾನೇ ಆಗ್ಲಿಲ್ಲ. ಹೀಗಾಗಿ, ಜೂನ್ ತಿಂಗಳ ಮೂರನೇ ವಾರದಲ್ಲಿ ಮತ್ತೆ ಮೌಂಟ್ ಬ್ಯಾಟನ್ ಮೀಟಿಂಗ್ ಕರೆದಿದ್ರು.

ಆದ್ರೆ ವಿಚಿತ್ರ ಅನ್ನುವಂತೆ ಆ ಮೀಟಿಂಗ್ ನಲ್ಲಿ ಮೊಹಮ್ಮದ್ ಆಲಿ ಜಿನ್ನಾ ತುಟಿಕ್ ಪಿಟಿಕ್ ಅನ್ನದೆ ತಮ್ಮಲ್ಲಿದ್ದ ಪೆನ್ ತೆಗೆದುಕೊಂಡು ಖಾಲಿ ಹಾಳೆಯ ಮೇಲೆ ಯಾವುದೋ ಚಿತ್ರ ಬರೀತಾ ಕೂತುಬಿಟ್ಟಿದ್ರು. ಅಂದ ಹಾಗೆ ಈ ಜಿನ್ನಾ ದಾದಾಬಾಯಿ ನವರೋಜಿ, ಗೋಖಲೆಯಂಥವ್ರ ಪ್ರಭಾವಕ್ಕೆ ಒಳಗಾಗಿದ್ದವರು. ಹಿಂದೂ ಮುಸ್ಲಿಂ ಐಕ್ಯತೆ ಮೇರೆಗೆ ಭಾರತ ಸ್ವಾತಂತ್ರ್ಯ ಗಳಿಸೋ ನಿಟ್ಟಿನಲ್ಲಿ ಶ್ರಮಿಸ್ತಿದ್ದ ವ್ಯಕ್ತಿ. ಆದ್ರೆ, 1920ರ ಬಳಿಕ ಮಹಾತ್ಮಾ ಗಾಂಧಿಯವ್ರು ಕಾಂಗ್ರೆಸ್ ನ ಅದ್ವಿತೀಯ ನಾಯಕರಾದ ಬಳಿಕ ಜಿನ್ನಾರ ಧೋರಣೆ ಸಂಪೂರ್ಣವಾಗಿ ಬದಲಾಗಿಹೋಗಿತ್ತು.

60 day 1

ಇಂಥಾ ಜಿನ್ನಾ ಆ ದಿನ ಮೀಟಿಂಗ್ ನಲ್ಲಿ ಯಾರ ಬ್ರಿಟೀಷ್ ಸರ್ಕಾರ, ಕಾಂಗ್ರೆಸ್ ಹೀಗೆ ಯಾರ ಮಾತನ್ನೂ ಕೇಳೋ ಸ್ಥಿತಿಯಲ್ಲೇ ಇರ್ಲಿಲ್ಲ. ಸಭೆಯಲ್ಲಿ ಕುಳಿತಷ್ಟೂ ಹೊತ್ತು ಹಾಳೆಯೊಂದರಲ್ಲಿ ಅದೇನೇನೋ ಗೀಚ್ತಾ ಕೂತುಬಿಟ್ಟಿದ್ರು. ಆ ಸಭೆಯ ಬಳಿಕ ಮೌಂಟ್ ಬ್ಯಾಟನ್ ರ ಮಾಧ್ಯಮ ಸಲಹೆಗಾರ ಕ್ಯಾಂಬಲ್ ಜಾನ್ಸನ್ ರಿಗೆ ಆ ಹಾಳೆ ಸಿಕ್ತು. ಅದನ್ನು ನೋಡಿ ಒಂದು ಕ್ಷಣ ಕ್ಯಾಂಬಲ್ ಜಾನ್ಸನ್ ದಿಘ್ಭ್ರಾಂತರಾಗಿಬಿಟ್ಟಿದ್ರು. ಈ ಕಾಗದದಲ್ಲಿ ಒಂದು ರೀತಿಯ ಶಕ್ತಿ ಹಾಗೂ ಛಲ ಅಭಿವ್ಯಕ್ತವಾಗಿರೋದು ಗಮನಕ್ಕೆ ಬಂದಿತ್ತು.

ಜೂನ್ ತಿಂಗಳ ಮೂರನೇ ವಾರದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದ್ರೂ ಕಾಶ್ಮೀರ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೌಂಟ್ ಬ್ಯಾಟನ್ ರ ಚಿಂತೆ ಮಾತ್ರ ನಿವಾರಣೆಯಾಗಿರ್ಲಿಲ್ಲ. ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ನಡುವಿನ ಅಶಾಂತಿಗೆ ಕಾರಣವಾಗಬಹುದು ಅನ್ನೋದನ್ನ ಮೌಂಟ್ ಬ್ಯಾಟನ್ ಅಂದೇ ಅರಿತುಬಿಟ್ಟಿದ್ರು. ಹೀಗಾಗಿ ಇದನ್ನು ಇಲ್ಲೇ ಪರಿಹರಿಸಬೇಕು ಅನ್ನೋ ನಿರ್ಧಾರಕ್ಕೆ ಬಂದ ಮೌಂಟ್ ಬ್ಯಾಟನ್ ಕಾಶ್ಮೀರದ ರಾಜ ಹರಿ ಸಿಂಗ್ ಅವ್ರನ್ನ ಭೇಟಿಯಾಗೋಕೆ ನಿರ್ಧರಿಸ್ತಾರೆ. ಆದ್ರೆ, ಭೇಟಿಗೆ ನಿಗದಿಯಾಗಿದ್ದ ದಿನದಂದೇ ರಾಜ ಹರಿಸಿಂಗ್ ತಮ್ಮ ಆರೋಗ್ಯ ಕೆಟ್ಟು ಹೋಗಿದೆ. ಹಾಗಾಗಿ ಭೇಟಿಯಾಗೋದಕ್ಕೆ ಸಾಧ್ಯ ಇಲ್ಲ ಅಂತಾ ಹೇಳಿ ಕಳಿಸ್ತಾರೆ.

60 day 2

ಇತ್ತ ಮಹಾತ್ಮಾ ಗಾಂದೀಜಿ ಹಾಗೂ ಜವಹರಲಾಲ್ ನೆಹರೂ ಕೂಡಾ ಕಾಶ್ಮೀರಕ್ಕೆ ಹೋಗೋಕೆ ಉತ್ಸುಕರಾಗಿದ್ರು. ಕಾಶ್ಮೀರದ ಭವಿಷ್ಯವೇನಿದ್ರೂ ಭಾರತದ ಜೊತೆಗೇ ಅನ್ನೋದನ್ನ ಮನವರಿಕೆ ಮಾಡಿಕೊಡೋಕೆ ಗಾಂಧಿ ಹಾಗೂ ನೆಹರೂ ಬಯಸಿದ್ರು. ಆದ್ರೆ, ಇತ್ತ ಮೊಹಮ್ಮದ್ ಆಲಿ ಜಿನ್ನಾ ಮಾತ್ರ ಖಾಲಿಯಾಗ್ತಿರೋ ತನ್ನ ಸಿಗಾರ್ ನಿಂದ ಬರೋ ಹೊಗೆಯಂತೆ ವಿಲ ವಿಲ ಒದ್ದಾಡ್ತಿದ್ರು. ಮೌಂಟ್ ಬ್ಯಾಟನ್ ಗೆ ಜಿನ್ನಾರ ಮನಸ್ಥಿತಿಯನ್ನು ಅರಿಯೋದು ಬಹಳ ದುಸ್ತರ ಅಂತಾ ಅನಿಸಿಬಿಟ್ಟಿತ್ತು.

ಇಂಥಾ ಸಂದರ್ಭದಲ್ಲೇ ಜೂನ್ 27ಕ್ಕೆ ರ್ಯಾಡ್ ಕ್ಲಿಫ್ ಅನ್ನೋ ಬ್ರಿಟೀಷ್ ಅಧಿಕಾರಿಗೆ ಭಾರತ ಹಾಗೂ ಪಾಕಿಸ್ತಾನವನ್ನು ವಿಭಜಿಸೋ ಜವಾಬ್ದಾರಿ ಕೊಡಲಾಯ್ತು. ಭಾರತದ ಬಗ್ಗೆ, ಭಾರತದ ಇತಿಹಾಸದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಅಷ್ಟೇ ಯಾಕೆ ಭಾರತದ ಮೇಲೆ ಕಾಲೂ ಇಡದಿದ್ದ ವ್ಯಕ್ತಿಯ ಹೆಗಲಿಗೆ ದೇಶ ಇಬ್ಭಾಗ ಮಾಡೋ ಜವಾಬ್ದಾರಿ..ಎಂಥಾ ವಿಪರ್ಯಾಸ ಅಲ್ವಾ..?

ಅಂದು ರ್ಯಾಡ್ ಕ್ಲಿಫ್ ಮುಂದೆ ಭಾರತದ ನಕ್ಷೆಯನ್ನು ತೆರೆದಿಟ್ಟಾಗ ಅವ್ರೂ ಒಂದು ಕ್ಷಣ ನಿಬ್ಬೆರಗಾಗಿದ್ರು. ಒಬ್ಬ ಬ್ರಿಟೀಷ್ ಅಧಿಕಾರಿಯ ಕೈಯ್ಯಲ್ಲಿ 9 ಕೋಟಿ ಜನರ ಹಣೆಬರಹ ನಿರ್ಧಾರ ಆಗೋದಿತ್ತು. ಹಿಂದೂಗಳ ಸಂಖ್ಯೆ ಹಾಗೂ ಮುಸಲ್ಮಾನರ ಸಂಖ್ಯೆ ಯಾವ ಭಾಗದಲ್ಲಿ ಎಷ್ಟಿದೆ ಅಂತಾ ನೋಡಿಕೊಂಡು ವಿಭಜನೆ ಮಾಡೋದಕ್ಕೆ ರ್ಯಾಡ್ ಕ್ಲಿಫ್ಗೆ ಸೂಚಿಸಲಾಯ್ತು. ಅದೇ ರೀತಿ ರ್ಯಾಡ್ ಕ್ಲಿಫ್ ಭಾರತ ಹಾಗೂ ಪಾಕಿಸ್ತಾನವನ್ನು ವಿಭಜನೆ ಮಾಡೇಬಿಟ್ಟಿದ್ರು. ಜುಲೈ 4 ರಂದು ಲಂಡನ್ ನಲ್ಲಿ ಸಿಕ್ಕಾಪಟ್ಟೆ ಮಳೆ ಸುರೀತಾ ಇತ್ತು. ಇತ್ತ ದೆಹಲಿಯಲ್ಲಿ ಸೂರ್ಯ ನೆತ್ತಿ ಸುಡ್ತಾ ಇದ್ದ. ಅದೇ ದಿನ ಗಾಂಧಿಜಿ ಮೌಂಟ್ ಬ್ಯಾಟನ್ ರನ್ನ ವೈಸ್ ರಾಯ್ ಹೌಸ್ ನಲ್ಲಿ ಭೇಟಿಯಾಗ್ತಾರೆ. ಕಾಂಗ್ರೆಸ್ ಕಡೆಯಿಂದ ದೇಶದ ಮೊದಲ ಗವರ್ನರ್ ಜನರಲ್ ಆಗುವ ಆಹ್ವಾನವನ್ನೂ ಕೊಟ್ರು. ಇದ್ರ ಜೊತೆಗೆ ವೈಸ್ ರಾಯ್ ಹೌಸ್ ನಿಂದ ದೆಹಲಿಯ ಯಾವ್ದಾದ್ರೂ ಬಂಗಲೆಗೆ ಶಿಫ್ಟ್ ಆಗುವಂತೆ ಹೇಳಿದ್ರು. ವೈಸ್ ರಾಯ್ ಹೌಸನ್ನ ಆಸ್ಪತ್ರೆಯಾಗಿ ಪರಿವರ್ತಿಸೋ ಇರಾದೆಯನ್ನು ವ್ಯಕ್ತಪಡಿಸಿದ್ರು. ಆದ್ರೆ, ಮೌಂಟ್ ಬ್ಯಾಟನ್ ಈ ಪ್ರಸ್ತಾಪಕ್ಕೆ ಏನೂ ಹೇಳದೇ ನಕ್ಕು ಸುಮ್ಮನಾದ್ರು.

60 day 3

ಆಗಿನ್ನೂ, ರ್ಯಾಡ್ ಕ್ಲಿಫ್ ವಿಭಜನೆಯಾಗೋ ದೇಶದ ನಕ್ಷೆಯನ್ನು ಕೈಯ್ಯಲ್ಲಿ ಹಿಡಿದು ಬಂದಿದ್ದರಷ್ಟೇ. ಆಗ ಇಡೀ ದೇಶದ ಜನ ಬಹಳ ಆತಂಕದಲ್ಲಿದ್ರು. ಆಗ, ಜನ ದಂಗೆ ಏಳೋದನ್ನ ತಪ್ಪಿಸಿಕೊಳ್ಳಬೇಕು ಅಂದ್ರೆ ಅದು ಮಹಾತ್ಮಾ ಗಾಂಧಿಯಿಂದ ಮಾತ್ರ ಸಾಧ್ಯ ಅನ್ನೋದನ್ನ ಅರಿತ ಮೌಂಟ್ ಬ್ಯಾಟನ್ ತಕ್ಷಣವೇ ಗಾಂಧಿಯವ್ರ ಭೇಟಿಗೆ ಕಲ್ಕತ್ತೆಗೆ ಬರ್ತಾರೆ. ಪಂಜಾಬ್ ನಲ್ಲಿ ಅದಾಗ್ಲೇ ಎದ್ದ ದಂಗೆಯನ್ನು ನಿಭಾಯಿಸುವಲ್ಲಿ ಮೌಂಟ್ ಬ್ಯಾಟನ್ ಥಂಡಾ ಹೊಡೆದು ಹೋಗಿದ್ರು. ಹೀಗಾಗಿ, ಕಲ್ಕತ್ತೆಯಲ್ಲಿ ಏಳಬಹುದಾದ ಆಂತರಿಕ ಕ್ಷೋಭೆಯನ್ನು ನಿಯಂತ್ರಣ ಮಾಡೋಕೆ ಗಾಂಧೀಜಿಯ ಸಹಾಯ ಯಾಚಿಸಿದ್ರು ಬ್ಯಾಟನ್. ಅಷ್ಟರಲ್ಲಿ ಮೌಂಟ್ ಬ್ಯಾಟನ್ ಭಾರತದ ಹಾಗೂ ಜಿನ್ನಾ ಪಾಕಿಸ್ತಾನದ ಗವರ್ನರ್ ಜನರಲ್ ಗಳು ಅನ್ನೋ ತೀರ್ಮಾನಕ್ಕೆ ಬರಲಾಯ್ತು.

ಅಂದು ಜುಲೈ 15ನೇ ತಾರೀಕು. ಭಾರತದ ಸ್ವಾತಂತ್ರ್ಯ ಸಿಗೋ 30 ದಿನಗಳ ಮೊದಲಿನ ಘಟನೆ. ಬ್ರಿಟೀಷರು ಭಾರತದ ಸ್ವಾತಂತ್ರ್ಯ ಕುರಿತಂತೆ ತಮ್ಮ ಸಮ್ಮತಿ ಸೂಚಿಸಿದ್ರು. ಮೌಂಟ್ ಬ್ಯಾಟನ್ ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಹಾಗೂ ಸ್ವಾತಂತ್ರ್ಯಕ್ಕಾಗಿ ತಮ್ಮ ಒಪ್ಪಿಗೆ ಸೂಚಿಸಿದ್ರೇನೋ ನಿಜ. ಆದ್ರೆ, ಸ್ವಾತಂತ್ರ್ಯದ ಸಮಯ ಹತ್ತಿರ ಬರ್ತಾ ಇದ್ದಂತೆ ಅವರೆದೆ ಒಂದೇ ಸಮನೆ ಢವ ಢವ ಅಂತಾ ಜೋರಾಗಿ ಹೊಡೆದುಕೊಳ್ಳೋದಕ್ಕೆ ಶುರುವಾಗಿಬಿಟ್ಟಿತ್ತು. ಅದಾಗ್ಲೇ ಹಿಂದೂ ಮುಸಲ್ಮಾನರ ನಡುವೆ ಒಳ ಜಗಳಗಳು ಆರಂಭವಾಗಿಬಿಟ್ಟಿತ್ತು. ಬೇಗೆ ಬೇಗ ತಮ್ಮ ಕೆಲಸ ಮುಗಿಸಿದ್ರೆ ದಂಗೆ ಕಮ್ಮಿಯಾಗಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದ ಮೌಂಟ್ ಬ್ಯಾಟನ್ ರಿಗೆ ಈ ಸಂದರ್ಭ ಒಂದು ರೀತಿಯಲ್ಲಿ ಮರ್ಮಾಘಾತ ಕೊಟ್ಟಿತ್ತು.

ಹಿಂದುಸ್ತಾನದಲ್ಲಿ ಅಕ್ಷರಶಃ ಜನ ರಕ್ತಕೂಪದಲ್ಲಿ ಕೂತಿದ್ರು. ಸಾವಿರಾರು ಜನ ಪ್ರಾಣ ಕಳೆದುಕೊಂಡ್ರು. ಆದ್ರೆ, ಬ್ರಿಟೀಷ್ ಅಧಿಕಾರಿಗಳಿಗೆ ಜನ್ರ ನೋವು, ಚೀತ್ಕಾರ, ಕಣ್ಣೀರು ಏನೂ ಕಾಣಿಸ್ಲೇ ಇಲ್ಲ. ಕಿವಿಯೂ ಕೇಳದಂತೆ, ಕಂಡೂ ಕಾಣದಂತಿದ್ದ ಅವರ ಹೃದಯ ಕಲ್ಲಿನಂತಾಗಿತ್ತು. ಕ್ಯಾಲೆಂಡರ್ ನಲ್ಲಿ ಒಂದೊಂದೇ ತಾರೀಕು ಕಳೀತಾ ಇತ್ತು. ಆಗಸ್ಟ್ ತಿಂಗಳ 1, 2, 3..ಹೀಗೆ ದಿನಗಳು ಉರುಳ್ತಾ ಇದ್ದಂತೆ ಮೌಂಟ್ ಬ್ಯಾಟನ್ ರ ಹಣೆಯ ಮೇಲೆ ಆತಂಕದ ರೇಖೆಗಳು ಮೂಡೋದಕ್ಕೆ ಶುರುವಾಯ್ತು. ಅದಾಗ್ಲೇ ತಮ್ಮ ಲಾಂಛನಗಳು ಎಲ್ಲೆಲ್ಲಿ ಇವೆಯೋ ಅದನ್ನೆಲ್ಲಾ ತೆಗೆದು ಹಾಕುವ ಕಾರ್ಯದಲ್ಲಿ ಬ್ರಿಟೀಷ್ ಅಧಿಕಾರಿಗಳ ಸೇವಕರು ತೊಡಗಿಕೊಂಡಿದ್ರು. ಅಷ್ಟೊತ್ತಿಗಾಗ್ಲೇ ದೇಶ ವಿಭಜನೆಯ ನಕ್ಷೆಯ ಜೊತೆಗೆ ಜನರ ಜಮೀನುಗಳನ್ನು, ಆಸ್ತಿಪಾಸ್ತಿಗಳನ್ನು ಇಬ್ಭಾಗ ಮಾಡೋ ಕೆಲಸದಲ್ಲಿ ಬ್ರಿಟೀಷ್ ಅಧಿಕಾರಿ ರೆಡ್ ಕ್ಲಿಫ್ ನಿರತರಾಗಿದ್ರು. ಯಾವುದೋ ಕಟುಕ ಪ್ರಾಣಿ ಬಲಿ ಕೊಡುವಂತೆ ರೆಡ್ ಕ್ಲಿಫ್ ದೇಶ ಒಡೆಯೋ ಕೆಲಸವನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಬಿಟ್ಟಿದ್ರು. ಚೌಧರಿ ಮಹಮ್ಮದ್ ಅಲಿ, ಎಚ್ ಎಂ ಪಟೇಲರಿಗೆ ಜನರಿಗೆ ಸಂಬಂಧಿಸಿದ ಆಸ್ತಿ ಬಟವಾಡೆ ಮಾಡೋ ಹೊಣೆಗಾರಿಕೆ ಕೊಡಲಾಯ್ತು. ಈ ಕೆಲಸ ಅಷ್ಟು ಸುಲಭ ಖಂಡಿತಾ ಆಗಿರ್ಲಿಲ್ಲ. ಹೀಗಾಗಿ ಇಬ್ಬರೂ ಕೂತು ಸರ್ದಾರ್ ಪಟೇಲರ ಕೋಣೆಯಲ್ಲಿ ಕುಳಿತು ಆಸ್ತಿ ಪತ್ರಗಳನ್ನಿಟ್ಟು ತಲೆ ಮೇಲೆ ಕೈ ಹೊತ್ತು ಕೂತ್ರು.

maxresdefault 2

ಕೊನೆಗೂ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ದಿನಗಳು ಹತ್ತಿರ ಬಂತು. 80 ಶೇಕಡಾ ಭಾರತ ಹಾಗೂ 20 ಶೇಕಡಾ ಪಾಕಿಸ್ತಾನಕ್ಕೆ ಕಳುಹಿಸುವ ಎಲ್ಲಾ ದಾಖಲೆ ಪತ್ರಗಳು ತಯಾರಾಯ್ತು. ಕೊನೆಗೂ ಆಸ್ತಿ ಪಾಸ್ತಿಗಳನ್ನು ಭಾಗ ಮಾಡುವಲ್ಲಿ ಒಂದು ತಾರ್ಕಿಕ ಅಂತ್ಯಕ್ಕೂ ಬರಲಾಯ್ತು. ಆದ್ರೆ, ಈ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿಯಿಂದ ಮಾಡಿದ ಕುದುರೆ ರಥವನ್ನು ಎರಡು ಭಾಗ ಮಾಡೋ ಕುರಿತಾಗಿ ವಾಗ್ವಾದ ಏಳ್ತು. ಪ್ರತಿಯೊಂದು ವಸ್ತುಗಳಿಗಾಗಿ ದೊಡ್ಡ ದೊಡ್ಡ ಜಗಳಗಳೇ ನಡೀತಿತ್ತು. ಲಾಹೋರ್ ನಲ್ಲಿದ್ದ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು ಪಾಕಿಸ್ತಾನಕ್ಕೆ ಸೇರಿಸ್ಬೇಕಾ..? ಅಥ್ವಾ ಭಾರತದ ಮಡಿಲಿಗೆ ಹಾಕಬೇಕಾ ಅನ್ನೋ ಬಗ್ಗೆ ನಿರ್ಧಾರ ತಾಳಲೇ ಇಲ್ಲ. ಆಗಸ್ಟ್ ತಿಂಗಳಲ್ಲಿ ಇಡೀ ದೇಶದಲ್ಲೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಜನ ಮಿಂದೇಳ್ತಾ ಇದ್ರು. ಆಗಸ್ಟ್ 4ನೇ ತಾರೀಕು ಮುಂಬೈಯ ತಾಜ್ ಹೋಟೇಲ್ ನ ಶಿಖರದಲ್ಲಿ ಭಾರತದ ಸ್ವತಂತ್ರ್ಯ ಭಾರತದ ಧ್ವಜವನ್ನು ಹಾರಾಡಿಸೋ ಬಗ್ಗೆ ಚಿಂತನೆ ನಡೀತಿತ್ತು. ಅಲ್ಲೀವರೆಗೂ ಹೊಟೇಲ್ ನಲ್ಲಿ ದಿನನಿತ್ಯ ನುಡಿಸಲ್ಪಡ್ತಿದ್ದ ಹಾಡಾದ ಗಾಡ್ ಸೇವ್ ದಿ ಕಿಂಗ್ ಅಂದ್ರೆ ದೇವರೇ ರಾಜನನ್ನು ರಕ್ಷಿಸು ಅನ್ನೋ ಹಾಡನ್ನು ಶಾಶ್ವತವಾಗಿ ಬಂದ್ ಮಾಡಿಸಲಾಯ್ತು.

ಅಂದು ಆಗಸ್ಟ್ 7ನೇ ತಾರೀಕು. ಸ್ವಾತಂತ್ರ್ಯ ಸಿಗೋ 8 ದಿನಗಳ ಮೊದಲು. ಮೊಹಮ್ಮದ್ ಅಲಿ ಜಿನ್ನಾ ದೆಹಲಿಗೆ ಶಾಶ್ವತವಾಗಿ ಗುಡ್ ಬೈ ಹೇಳಿ ಕರಾಚಿಯತ್ತ ಮುಖ ಮಾಡೋಕೆ ಅಣಿಯಾಗ್ತಿದ್ರು. ಅವತ್ತು ಜಿನ್ನಾ ಅಪರೂಪಕ್ಕೊಮ್ಮೆ ಧರಿಸ್ತಿದ್ದ ಬಟ್ಟೆಯನ್ನು ಧರಿಸಿದ್ರು. ದೆಹಲಿಯ ಔರಂಗಜೇಬ್ ರಸ್ತೆಯಲ್ಲಿದ್ದ ತಮ್ಮ ಮನೆಯ ಅಲ್ಮರಾದಿಂದ ತಮ್ಮ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಏರ್ ಏರ್ ಪೋರ್ಟ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ರು. ಜಿನ್ನಾ ಹೊರಡೋದು ಗೊತ್ತಾಗ್ತಿದ್ದಂತೆ ಮೌಂಟ್ ಬ್ಯಾಟನ್ ಜಿನ್ನಾಗಾಗಿ ತಮ್ಮ ಎರಡು ಕಾರ್ ಗಳನ್ನು ಕಾಣಿಕೆಯಾಗಿ ಕೊಟ್ರು. ವೈಸ್ ರಾಯ್ ಮೌಂಟ್ ಬ್ಯಾಟನ್ ಜಿನ್ನಾರನ್ನು ಕರಾಚಿಗೆ ಕಳುಹಿಸೋದಕ್ಕೆ ತಮ್ಮ ಪ್ರೈವೇಟ್ ಏರ್ ಕ್ರಾಫ್ಟ್ ಕೂಡಾ ಕೊಟ್ರು.

ಜಿನ್ನಾ ಏರ್ ಏರ್ ಪೋರ್ಟ್ ಗೆ ಹೋಗ್ತಿದ್ದಂತೆ ಬಹಳ ಕಡಿಮೆ ಜನ ಅವ್ರನ್ನ ಬೀಳಕೊಡೋದಕ್ಕೆ ಬಂದಿದ್ರು. ದೆಹಲಿಯ ಮೇಲಿಂದ ಹಾರಿ ಹೋಗ್ತಿದ್ದ ವಿಮಾನದ ಕಿಟಕಿ ಮೂಲಕ ಜಿನ್ನಾ ಕೆಳಗೆ ನೋಡಿ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದ್ರು. ವಿಮಾನದ ಪೈಲಟ್ ಗೆ ಬಹುಶಃ ಇದುವೇ ನನ್ನ ಕೊನೇಯ ದೆಹಲಿ ಭೇಟಿ ಅಂತಾ ಜಿನ್ನಾ ಹೇಳಿದ್ರು. ಕರಾಚಿಗೆ ಹೋಗೋವರೆಗೂ ತಮ್ಮ ಬಳಿ ಇದ್ದ ದಿನ ಪತ್ರಿಕೆಗಳನ್ನು ತಿರುವಿ ಹಾಕ್ತಿದ್ರು ಬಿಟ್ರೆ ಒಂದೇ ಒಂದೇ ಶಬ್ದ ಮಾತಾಡ್ಲಿಲ್ಲ. ಕರಾಚಿಗೆ ಜಿನ್ನಾ ಇದ್ದ ವಿಮಾನ ಹೋಗಿ ಇಳೀತಿದ್ದಂತೆ ವೆಲ್ ಕಮ್ ಮಾಡೋದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ರು. ಇಡೀ ಏರ್ ಪೋರ್ಟ್ ಜನರಿಂದ ತುಂಬಿ ಹೋಗಿತ್ತು. ಇತ್ತ ಜಿನ್ನಾ ಕರಾಚಿಯತ್ತ ಮುಖ ಮಾಡಿದ್ರೆ ಅತ್ತ ಮೌಂಟ್ ಬ್ಯಾಟನ್ ಗೆ ಕೊಟ್ಟ ವಚನಕ್ಕಾಗಿ ಗಾಂಧೀಜಿ ಕಲ್ಕತ್ತೆಯತ್ತ ಮುಖ ಮಾಡಿದ್ರು.

photo

ಜಿನ್ನಾ ಕರಾಚಿಗೆ ತಲುಪಿ ತಮಗೆ ಗೊತ್ತು ಮಾಡಲಾಗಿದ್ದ ಬಂಗಲೆಯತ್ತ ಮುಖ ಮಾಡ್ತಿದ್ದಂತೆ ಖುಷಿಯಲ್ಲಿದ್ರು. ಆದ್ರೆ, ಉತ್ತ ಗಾಂಧೀಜಿಯ ಮನಸ್ಸಲ್ಲಿ ಬೇರೇನೋ ಓಡ್ತಾ ಇತ್ತು. ಹೊತ್ತಿ ಉರೀತಿದ್ದ ಕಲ್ಕತ್ತೆಯನ್ನು ಶಾಂತ ಮಾಡೋಕೆ ಗಾಂಧೀಜಿ ಅಲ್ಲಿಗೆ ಹೋಗೊದು ಅನಿವಾರ್ಯ ಕೂಡಾ ಆಗಿತ್ತು. ಕಲ್ಕತ್ತೆಯನ್ನು ನಿಯಂತ್ರಣಕ್ಕೆ ತರೋದಕ್ಕೆ ಕೇವಲ ಮೌಂಟ್ ಬ್ಯಾಟನ್ ಮಾತ್ರ ಗಾಂಧೀಜಿಯವರನ್ನು ಕೇಳಿಕೊಂಡಿರಲಿಲ್ಲ. ಬಂಗಾಳದ ಪ್ರಧಾನ ಮಂತ್ರಿ ಹುಸೇನ್ ಶಹೀದ್ ಸುಹ್ರವಾರ್ಡಿಗೂ ಕಲ್ಕತ್ತೆ ದಂಗೆಯಲ್ಲಿ ಬೇಯೋದು ಬೇಡ ಅಂದಿದ್ರು. ಹೆಚ್ಚಿನ ಜನ್ರ ಮನಸ್ಸಲ್ಲಿದ್ದಿದ್ದು ಸುಹ್ರವಾರ್ಡಿಯವ್ರೇ ಈ ಎಲ್ಲಾ ಬೇಗುದಿಗೆ ಕಾರಣ ಅಂತಾ. ಹೀಗಾಗಿ ಸುಹ್ರವಾರ್ಡಿಯವ್ರಿಗೂ ಗಾಂಧೀಜಿ ಏಕಮಾತ್ರ ಆಶಾಕಿರಣವಾಗಿ ಗೋಚರಿಸಿದ್ರು.

ಆಗ ಗಾಂಧೀಜಿ ಬಾಂಗ್ಲಾ ಪ್ರಧಾನಿ ಸುಹ್ರವಾರ್ಡಿಯವ್ರಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನಿಟ್ರು. ನೋವಾಖಲಿಯಲ್ಲಿದ್ದ ಮುಸಲ್ಮಾನರು ಅಲ್ಲಿದ್ದ ಹಿಂದೂಗಳ ಜೊತೆ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳಬೇಕು. ಹಾಗೂ ಸುಹ್ರಾವಾರ್ಡಿಯವ್ರು ಕಲ್ಕತ್ತಾದಲ್ಲಿ ಕೆಲಸ ದಿನ ತಮ್ಮ ಜೊತೆಯೇ ಇರಬೇಕು ಅನ್ನೋದಾಗಿ ಗಾಂಧೀಜಿ ನಿಭಂಧನೆ ವಿಧಿಸ್ತಾರೆ. ಅದಕ್ಕೆ ಅನಿವಾರ್ಯವಾಗಿ ಸುಹ್ರಾವಾರ್ಡಿಯವ್ರು ಒಪ್ಪಿಗೆ ಸೂಚಿಸ್ತಾರೆ. ಗಾಂಧೀಜಿಯವ್ರ ಈ ತೀರ್ಮಾನ ತಿಳಿದ ಸರ್ದಾರ್ ಪಟೇಲ್ ರು ಗಾಂಧಿಜಿಗೆ ಒಂದು ಪತ್ರ ಬರೀತಾರೆ.

ನೀವು ಹೋಗಿ ಇರುವ ಸ್ಥಳ ಯಾವುದೇ ಪ್ರಾಣಿಗಳನ್ನು ಹತ್ಯೆ ಮಾಡೋ ಸ್ಥಳಕ್ಕಿಂತ ಕಮ್ಮಿ ಇಲ್ಲ. ಅದೂ ಅಲ್ಲದೇ ನೀವು ನಿಮ್ಮ ಜೊತೆ ಇರೋದಕ್ಕೆ ಅದೆಂಥಾ ವ್ಯಕ್ತಿಯನ್ನು ಆರಿಸಿಕೊಂಡಿದ್ದೀರಿ. ಅದೂ ಸುಹ್ರವಾರ್ಡಿ ಎಂದು ಪತ್ರ ಬರೆಯುತ್ತಾರೆ. ಆದ್ರೆ ಇದೇ ಸುಹ್ರಾವಾರ್ಡಿ ಕಲ್ಕತ್ತೆ ದಂಗೆಯ ಸಮಯದಲ್ಲಿ ಗಾಂಧೀಜಿಗೆ ಹೆಗಲಿಗೆ ಹೆಗಲು ಕೊಟ್ಟಿದ್ರು. ಅದೂ ಅಲ್ಲದೇ ಅನೇಕ ಹಿಂದೂ ಮನೆತನಗಳ ಜೊತೆ ಸುಹ್ರಾವಾರ್ಡಿ ಉತ್ತಮ ಸಂಬಂಧ ಕೂಡಾ ಹೊಂದಿದ್ರು. ಅಷ್ಟ್ರಲ್ಲಾಗ್ಲೇ ಸ್ವಾಂತಂತ್ರ್ಯದ ದಿನ ಅಂತಾ ಆಗಸ್ಟ್ 15ಕ್ಕೆ ದಿನಾಂಕ ನಿಗದಿಗೊಳಿಸಲಾಯ್ತು. ಆದ್ರೆ, ವಿಪರ್ಯಾಸ ಅಂದ್ರೆ ಜ್ಯೋತಿಷಿಗಳು ಈ ದಿನವನ್ನು ಅಶುಭ ಅಂತಾ ಹೇಳಿ ಮುಂದಕ್ಕೆ ಹಾಕುವಂತೆ ಸೂಚಿಸಿದ್ರು.

Independence Day India Getty

ನವದೆಹಲಿಯ ಒಂದು ಬಂಗ್ಲೆಯಲ್ಲಿ ಕೂತು ರೆಡ್ ಕ್ಲಿಫ್ ಇನ್ನೂ ದೇಶ ವಿಭಜನೆಯ ನಕ್ಷೆ ಹಿಡಿದು ಯೋಚನೆ ಮಾಡ್ತಾ ಇದ್ರು. ಕೇವಲ 72 ಗಂಟೆಗಳು ಮಾತ್ರ ರೆಡ್ ಕ್ಲಿಫ್ ಬಳಿ ಇತ್ತು. ಅಂದ್ರೆ ಕೇವಲ ಮೂರು ಗಂಟೆಗಳು ಮಾತ್ರ. ಬ್ರಿಟೀಷ್ ಸರ್ಕಾರ ಇದನ್ನು ಬಹಳ ಗೌಪ್ಯವಾಗಿ ಮಾಡಿ ಮುಗಿಸಬೇಕು ಅನ್ನೋ ತರಾತುರಿಯಲ್ಲಿತ್ತು. ಯಾವುದೇ ಕಾರಣಕ್ಕೂ ಎರಡೂ ದೇಶಗಳ ಸ್ವಾತಂತ್ರ್ಯದ ಮೊದಲು ಈ ವಿಚಾರದ ಸಣ್ಣ ಕ್ಲೂ ಕೂಡಾ ಯಾರಿಗೂ ಸಿಗದಂತೆ ನಿಗಾ ವಹಿಸಲಾಗಿತ್ತು.

ಅಂದು ಆಗಸ್ಟ್ 12. ಅಂದ್ರೆ ಸ್ವಾತಂತ್ರ್ಯ ಸಿಗೋ ಕೇವಲ 72 ಗಂಟೆಗಳ ಮೊದಲು. ಅಂದು ರೆಡ್ ಕ್ಲಿಫ್ ರ ವರದಿ ತಯಾರಾಗಿತ್ತು. ಅದನ್ನು ವೈಸ್ ರಾಯ್ ಬಂಗಲೆಗೆ ತೆಗೆದುಕೊಂಡು ಹೋಗಲಾಯ್ತು. ಎರಡೂ ದೇಶಗಳ ಹಣೆಬರಹ, ಭವಿಷ್ಯ ಎಲ್ಲವೂ ಈ ಲಕೋಟೆಯಲ್ಲಿ ಭದ್ರವಾಗಿತ್ತು. ಈ ಲಕೋಟೆ ಯಾವಾಗ ತೆರೆಯಲಾಗುತ್ತೋ ಅಂದು ಇಡೀ ದೇಶದಲ್ಲಿ ದೊಂಬಿ ಏಳಬಹುದು ಅನ್ನೋದು ವೈಸ್ ರಾಯ್ ಗೆ ಚೆನ್ನಾಗೇ ಗೊತ್ತಿತ್ತು. ವೈಸ್ ರಾಯ್ ಅಂದೇ ಮಧ್ಯಾಹ್ನ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗೋದಕ್ಕೆ ಕರಾಚಿಯತ್ತ ಮುಖ ಮಾಡಿದ್ರು. ಅದಾಗ್ಲೇ ಜ್ಯೋತಿಷಿಗಳೂ ಆಗಸ್ಟ್ 15 ಅಶುಭ ಅಂದಿದ್ರಿಂದ 14ರಂದೇ ಸ್ವಾತಂತ್ರ್ಯದ ಆಡಳಿತಾತ್ಮಕ ಪ್ರಕ್ರಿಯೆಗಳು ಆರಂಭವಾಗಿದ್ವು. ಅಲ್ಲೀವೆರಗೂ ಪಾಕಿಸ್ತಾನದಲ್ಲಿದ್ದ ಜಿನ್ನಾ ಖುಷಿಯಾಗಿದ್ರು. ಆದ್ರೆ, ಅದಾಗ್ಲೇ ಒಂದು ಅಪಶಕುನ ಸಿಕ್ಸ್ತ್ ಸೆನ್ಸ್ ನಲ್ಲಿ ಲೊಚಗುಟ್ಟೋಕೆ ಶುರುವಾಗಿತ್ತು.

ಯಾವ ಕುದುರೆ ಸಾರೋಟಿನಲ್ಲಿ ಕೂತು ಜಿನ್ನಾ ಪಾಕಿಸ್ತಾನದಲ್ಲಿ ತಮ್ಮ ಅಧಿಕಾರ ವಹಿಸ್ಬೇಕಾಗಿತ್ತೋ ಆ ಕುದುರೆಯ ಕಾಲಿಗೆ ಪೆಟ್ಟಾಯ್ತು. ಆಗಸ್ಟ್ 13ನೇ ತಾರೀಕು ಜಿನ್ನಾ ತಮ್ಮ ಬಂಗಲೆಯಲ್ಲಿ ಎಲ್ಲರಿಗೂ ಔತಣ ಕೂಟ ಏರ್ಪಾಡು ಮಾಡಿದ್ರು. ಆ ದಿನ ರಂಜಾನ್ ಮಾಸದ ಕೊನೆಯ ವಾರದಲ್ಲಿ ಬರುತ್ತೆ ಅನ್ನೋದು ಅವ್ರಿಗೆ ಆಮೇಲೆ ಗೊತ್ತಾಯ್ತು. ಹೀಗಾಗಿ, ಒಂದು ಕಡೆ ಆಗಸ್ಟ್ 15ನ್ನು ಭಾರತದಲ್ಲಿ ಜ್ಯೋತಿಷಿ ಅಶುಭ ಅಂತಾ ಹೇಳಿದ್ರೆ ಜಿನ್ನಾಗೆ ಕೂಡಾ ಆಗಸ್ಟ್ 13 ಅನುಕೂಲವಾಗಿರ್ಲಿಲ್ಲ.

d2575dc512368e71378f3a9cfec3bc21

ಅಂದು ಆಗಸ್ಟ್ 14. ಸ್ವಾತಂತ್ರ್ಯ ಸಿಗೋ 36 ಗಂಟೆ ಮೊದಲು. ಅಷ್ಟ್ರಲ್ಲಿ ಮಹಾತ್ಮಾ ಗಾಂಧಿ ತಾವು ಉಳಿದುಕೊಂಡಿದ್ದ ಆಶ್ರಮದಿಂದ ಹೊರಟಾಗಿತ್ತು. ಕಲ್ಕತ್ತೆಯನ್ನು ದಂಗೆಯಿಂದ ರಕ್ಷಿಸಿಕೊಳ್ಳೋ ಅಚಲ ವಿಶ್ವಾಸ ಅವ್ರಿಗೆ ಇತ್ತು. ಮೌಂಟ್ ಬ್ಯಾಟನ್ ಜೊತೆಗೆ ಇಡೀ ದೇಶಕ್ಕೆ ಮಹಾತ್ಮಾ ಏನಾದ್ರೂ ಚಮತ್ಕಾರ ಮಾಡ್ತಾರೆ ಅನ್ನೋ ನಂಬಿಕೆ ಇತ್ತು. ಸೋದಪುರ್ ನ ತಮ್ಮ ಆಶ್ರಮದಿಂದ ಹತ್ತು ಮೈಲು ದೂರವಿದ್ದ ಹೈದರಿ ಹೌಸ್ ಗೆ ಹೋಗೋದು ಅವ್ರ ಗುರಿಯಾಗಿತ್ತು. ಆ ದಿನ ಹತ್ತು ಮೈಲಿ ನಡೆಯೋದು ಯಾವತ್ತೂ ಮುಗಿಯದ ಪಯಣದ ರೀತಿ ಗಾಂಧೀಜಿಗೆ ಭಾಸವಾಗ್ತಿತ್ತು. ಅಂದ ಹಾಗೆ, ಈ ಹೈದ್ರಿ ಹೌಸ್ ಒಂದು ಶ್ರೀಮಂತ ಕುಟುಂಬದ ಮುಸಲ್ಮಾನರ ಬಂಗಲೆಯಾಗಿತ್ತು. ಇಷ್ಟು ದೊಡ್ಡ ಬಂಗಲೆಯನ್ನು ಹಾಗೇ ಬಿಟ್ಟ ಕಾರಣ ಅದು ಪಾಳು ಬಿದ್ದಿತ್ತು. ಇಲ್ಲಿಗೂ ಗಾಂಧಿ ಬಾಂಗ್ಲಾ ಪ್ರಧಾನಿ ಸುಹ್ರಾವಾರ್ಡಿ ಜೊತೆಗೆ ಬಂದಿದ್ರು.

ಹೈದರಿ ಹೌಸ್ ಒಳಗಡೆ ಗಾಂಧಿ ತಮ್ಮ ಜೊತೆಗೆ ಬಂದಿದ್ದ ಸುಹ್ರಾವಾರ್ಡಿಯ ಜೊತೆ ಕುತಿದ್ರು. ಆಕ್ರೋಶಗೊಂಡಿದ್ದ ಹಿಂದೂಗಳು ಸುಹ್ರಾವಾರ್ಡಿಯರತ್ತ ಕಲ್ಲು ತೂರೋದಕ್ಕೆ ಶುರುಮಾಡಿದ್ರು. ಗಾಂಧೀಜಿಗೆ ಅಂದು ಮೊಟ್ಟ ಮೊದಲ ಬಾರಿಗೆ ಇಂಥಾ ಒಂದು ಸಂದಿಗ್ಧ ಸ್ಥಿತಿಯನ್ನು ಎದುರಿಸೋ ಹಾಗಾಯ್ತು. ದೇಶದ ಮಹಾತ್ಮಾ ಅನಿಸಿಕೊಂಡ ವ್ಯಕ್ತಿ ಅದೆಂಥಾ ಪರಿಸ್ಥಿತಿಯನ್ನ ಎದುರಿಸಿರಬೇಡ ಯೋಚಿಸಿ. ಅಷ್ಟ್ರಲ್ಲಿ ನೆಹರೂ ನೀವು ಈ ಕೂಡಲೇ ದೆಹಲಿಗೆ ಬನ್ನಿ. ಇಲ್ಲಿ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ ಅಂತಾ ಗಾಂಧೀಜಿಗೆ ಬುಲಾವ್ ಕೊಟ್ಟಿದ್ರು. ಆ ಹೊತ್ತಿಗೆ ಅಲ್ಲಿನ ಜನ ಯಾರೂ ಕೂಡಾ ಮಾತು ಕೇಳೋ ಪರಿಸ್ಥಿತಿಯಲ್ಲೇ ಇರ್ಲಿಲ್ಲ.

ಅತ್ತ ಕರಾಚಿಯಲ್ಲಿ ಜಿನ್ನಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋದಕ್ಕೆ ಹೊರಟಿದ್ರು. ದೇಶ ಒಟ್ಟಾಗಿರಬೇಕು ಅಂತಾ ಯಾವ ಮಹಾತ್ಮ ಅಂದುಕೊಂಡಿದ್ರೋ ಅವ್ರ ಇಚ್ಚೆಯ ವಿರುದ್ಧವಾಗಿ ಜಿನ್ನಾ ಜಯ ಸಾಧಿಸಿದ್ರು. ಕರಾಚಿಯ ಮೈದಾನ ಇತಿಹಾಸದ ಪುಟಗಳಲ್ಲಿ ದೊಡ್ಡ ಘಟನೆಯೊಂದಕ್ಕೆ ಸಾಕ್ಷಿಯಾಯ್ತು. ಈ ಮೂಲಕ ಮೊಹಮ್ಮದ್ ಅಲಿ ಜಿನ್ನಾ ದೇಶ ವಿಭಜನೆಯ ತಮ್ಮ ಗುರಿಯನ್ನು ಸಾಧಿಸಿಯಾಗಿತ್ತು. ಆದ್ರೆ, ಗಾಂಧೀಜಿ ಅಂದು ಈ ಸ್ವಾತಂತ್ರ್ಯವನ್ನು ನಾನು ನಿಜವಾದ ಸ್ವಾತಂತ್ರ್ಯ ಅಂತಾ ಅಂದುಕೊಳ್ಳೋದಿಲ್ಲ ಅಂತಾ ಮನಸ್ಸಲ್ಲೇ ನಿಶ್ಚಯಿಸಿಬಿಟ್ಟಿದ್ರು. ಇದೇ ಅವಧಿಯಲ್ಲಿ ಮೌಂಟ್ ಬ್ಯಾಟನ್ ಕೂಡಾ ಮತ್ತೊಂದು ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ರು. ಮೌಂಟ್ ಬ್ಯಾಟನ್ ಬಳಿ ಸಮಯ ಬಹಳ ಕಮ್ಮಿ ಇತ್ತು.

independence day 1 043015040308

ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಯಾಗಿತ್ತು. ಇಡೀ ದೇಶವಾಸಿಗಳಿಗೆ ಈ ದಿನದ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಸಾವು ನೋವಿನ ಮಧ್ಯೆ ಅಂಗ್ರೇಝಿಗಳ ಹುಕುಂ ಹಾಗೂ ಸ್ವಾತಂತ್ರ್ಯದ ಪ್ರಥಮ ಗಾಳಿಯನ್ನು ಉಡಿರಾಡೋ ತೀವ್ರತೆಗೆ ಭಾರತೀಯರು ಬಿದ್ದಿದ್ರು. ಆದ್ರೆ, ನಾಳೆ ದಿನ ಈ ಸ್ವಾತಂತ್ರ್ಯಕ್ಕೆ ಯಾವ ರೀತಿಯ ಬೆಲೆ ಕಟ್ಬೇಕಾಗುತ್ತೆ ಅನ್ನೋ ಭಯ ಪ್ರತಿಯೊಬ್ಬ ಭಾರತೀಯನಿಗೂ ಆತಂಕದ ಛಾಯೆ ಮೂಡಿಸಿತ್ತು. 14ರ ರಾತ್ರಿ ದೆಹಲಿಯಲ್ಲಿ ಭಾರೀ ಮಳೆ ಸುರೀತಾ ಇತ್ತು. ಆದ್ರೆ, ಅಲ್ಲಿ ನೆರೆದಿದ್ದ ಜನ್ರು ಹಠದಲ್ಲಿ ಅಲ್ಲೇ ನಿಂತಿದ್ರು. ಕೆಂಪುಕೋಟೆಯ ಹೊರಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ರು. ಸರಿಯಾಗಿ 12 ಗಂಟೆಗೆ ಪಂಡಿತ್ ಜವಹರಲಾಲ್ ನೆಹರೂರವರಿಗೆ ಪ್ರಧಾನಮಂತ್ರಿ ಪದವಿಯಲ್ಲಿ ಕೂರಿಸಲಾಯ್ತು. ಜವಹರಲಾಲ್ ನೆಹರೂ ಇಡೀ ದೇಶವನ್ನು ಉದ್ದೇಶಿಸಿ ತಮ್ಮ ಐತಿಹಾಸಿಕ ಭಾಷಣ ಮಂಡಿಸಿದ್ರು. ಇಡೀ ಭಾರತಕ್ಕೆ ಭಾರತವೇ ಸಂಭ್ರಮ ಸಡಗರದಲ್ಲಿ ತೇಲಾಡ್ತಾ ಇತ್ತು. ಆದ್ರೆ, ಇಡೀ ದೇಶವನ್ನೇ ಸ್ವಾತಂತ್ರ್ಯಕ್ಕಾಗಿ ಬಡಿದೆಬ್ಬಿಸಿದ ಮಹಾತ್ಮ ಮಾತ್ರ ಹೈದರೀ ಹೌಸ್ ನಲ್ಲಿ ಶಾಂತಿಯಿಂದ ನಿದ್ದೆಗೆ ಜಾರಿದ್ರು. ಗಾಂಧೀಜಿಯನ್ನು ಅಂದು ದೂರವಿಟ್ಟಿರಲಿಲ್ಲ. ಬದಲಾಗಿ ದೇಶಕ್ಕಾಗಿ ಆಜೀವ ಪರ್ಯಂತ ಸವೆಸಿದ್ದ ಜೀವ ಬಹಳ ಬಳಲಿ ಹೋಗಿತ್ತು.

ಶಪಥ ತೆಗೆದುಕೊಂಡ ಬಳಿಕ ನೆಹರು ತಮ್ಮ ಸಂಪುಟದ ಮಂತ್ರಿಗಳ ಹೆಸರಿರುವ ಲಕೋಟೆಯನ್ನು ಮೌಂಟ್ ಬ್ಯಾಟನ್ ಮುಂದಿಟ್ರು. 15ನೇ ಆಗಸ್ಟ್ ಭಾರತ ಸ್ವತಂತ್ರವಾಯ್ತು. ಬ್ರಿಟೀಷರ ಕಪಿಮುಷ್ಟಿಯಿಂದ ಹೊರಬಂತು. ಆದ್ರೆ ಆ ದಿನ ಗಾಂಧಿ ಸ್ವಾತಂತ್ರ್ಯವನ್ನು ಉಪವಾಸ ಮಾಡೋದ್ರ ಮೂಲಕ ಗಾಂಧಿ ಹೃದರೀ ಹೌಸ್ ನಲ್ಲಿಯೇ ತಮ್ಮದೇ ರೀತಿಯಲ್ಲಿ ಅನುಭವಿಸಿದ್ರು. ಸ್ವಾತಂತ್ರ್ಯದ ಸಂದೇಶ ಕೊಡಿ ಅಂತಾ ಪತ್ರಿಕೆಯವರು ಸಂದರ್ಶನಕ್ಕೆ ಅಂತಾ ಬಂದಾಗ ನನ್ನ ಶಕ್ತಿ ಕುಗ್ಗಿದೆ ಅಂತಾ ಅಂದುಬಿಟ್ಟಿದ್ರು. ಗಾಂಧೀಜಿ ಯಾವ ಉದ್ದೇಶಕ್ಕೆ ಈ ಮಾತು ಹೇಳಿದ್ರು ಅನ್ನೋದು ನಿಗೂಢವಾಗಿಯೇ ಉಳೀತು.

  • ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

flag2

ಮೌಂಟ್ ಬ್ಯಾಟನ್ ಹಾಗೂ ಅವ್ರ ಪತ್ನಿ ಬಹಳ ಖುಷಿಯಲ್ಲಿದ್ರು. ಒಂದು ಮಿಷನ್ ನನ್ನ ಪೂರ್ಣ ಮಾಡಿದ ಸಂತೃಪ್ತಿ ಅವರಲ್ಲಿತ್ತು. ಆದ್ರೆ, ಸ್ವಾತಂತ್ರ್ಯ ಸಿಕ್ಕಿದ ಇಂಥಾ ಸಮಯದಲ್ಲೂ ದೇಶದ ಕೆಲವಷ್ಟು ಜನ್ರು ಗೊಂದಲದಲ್ಲಿದ್ರು. ನಾವು ಸಂಭ್ರಮಿಸ್ಬೇಕೋ ಅಥವಾ ದುಃಖಿಸ್ಬೇಕೋ ಅನ್ನೋದು ಅವ್ರಿಗೆ ಗೊತ್ತೇ ಆಗ್ಲಿಲ್ಲ. ಇಂಥಾ ಹೊತ್ತಲ್ಲಿ ಮುಂಬೈಯ ಆ ಬಂಗಲೆಯೊಂದರಲ್ಲಿ ವಿಚಿತ್ರವಾದ ಅಷ್ಟೇ ಸಂವೇದನಾಶೀಲವಾದ ಸ್ವಾತಂತ್ರ್ಯದ ಸಂಭ್ರಮವಿತ್ತು. ಅಲ್ಲಿ ಪಾಕಿಸ್ತಾನ ಹಾಗೂ ಭಾರತ ಎರಡೂ ಸ್ವತಂತ್ರ ರಾಷ್ಟ್ರಗಳ ಬಾವುಟ ಹಾರ್ತಾ ಇತ್ತು. ಅಂದ ಹಾಗೆ, ಅದು ಬೇರ್ಯಾರೂ ಅಲ್ಲ ಮೊಹಮ್ಮದ್ ಅಲಿ ಜಿನ್ನಾರ ಮಗಳು ದಿನಾ ವಾಡಿಯಾರ ಬಂಗ್ಲೆಯಾಗಿತ್ತು. ಇದು ದೇಶ ವಿಭಜನೆಯ ನೋವಿನ ಕಥೆ. ಎರಡು ದೇಶಗಳು ಉದಯವಾದ ಕಥೆ.

  • ಕ್ಷಮಾ ಭಾರಧ್ವಜ್
TAGGED:independnce dayPublic TVಪಬ್ಲಿಕ್ ಟಿವಿಸ್ವತಂತ್ರ ದಿನಾಚರಣೆಸ್ವತಂತ್ರ್ಯೋತ್ಸವ ದಿನಹೋರಾಟ
Share This Article
Facebook Whatsapp Whatsapp Telegram

Cinema news

Kamal R Khan
ವಸತಿ ಕಟ್ಟಡದ ಮೇಲೆ ಫೈರಿಂಗ್ – ಬಾಲಿವುಡ್ ನಟ ಕಮಲ್ ಆರ್ ಖಾನ್ ಅರೆಸ್ಟ್
Bollywood Cinema Crime Latest Top Stories
Karunya Ram 1
ಸಿಸಿಬಿಯಿಂದ ನನಗೆ ನ್ಯಾಯ ಸಿಕ್ಕಿದೆ: ಕಾರುಣ್ಯ ರಾಮ್‌
Cinema Latest Sandalwood Top Stories
indira film 1
ಇಂದಿರಾ ಇದು ಗಾಂಧಿ ಕಥೆಯಲ್ಲ: ಕುತೂಹಲ ಮೂಡಿಸಿದ ಸಿನಿಮಾ
Cinema Latest Sandalwood
Muddu Gumma Karavali Movie
ಕರಾವಳಿ ಮುದ್ದು ಗುಮ್ಮನಿಗಾಗಿ ಹಾಡಿದ ಸಿದ್ ಶ್ರೀರಾಮ್
Cinema Latest Sandalwood Top Stories

You Might Also Like

Jammu Kashmir
Latest

ಜಮ್ಮು-ಕಾಶ್ಮೀರದಲ್ಲಿ ನಿರಂತರ ಹಿಮಪಾತ – ಶ್ರೀನಗರ ಏರ್‌ಪೋರ್ಟ್‌ನಲ್ಲಿ ಹಿಮ ತೆರವು ಕಾರ್ಯ

Public TV
By Public TV
7 minutes ago
shidlaghatta City Municipal Council Commissioner Amrutha Gowda receives death threat from Congress Leader Rajeev Gowda 1
Bengaluru City

ನಗರಸಭೆ ಪೌರಾಯುಕ್ತೆಗೆ ಬೆದರಿಕೆ – ರಾಜೀವ್ ಗೌಡ ನಿವಾಸದ ಮೇಲೆ ಪೊಲೀಸರ ದಾಳಿ

Public TV
By Public TV
20 minutes ago
Indian Man Shoot
Latest

ಅಮೆರಿಕದಲ್ಲಿ ಪತ್ನಿ, ಮೂವರು ಸಂಬಂಧಿಕರನ್ನ ಗುಂಡಿಟ್ಟು ಕೊಂದ ಭಾರತೀಯ ವ್ಯಕ್ತಿ – 12 ಕೇಸ್‌ ದಾಖಲು

Public TV
By Public TV
23 minutes ago
Seemanth kumar Singh Maheshwar Rao
Bengaluru City

77ನೇ ಗಣರಾಜ್ಯೋತ್ಸವ; ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ 2,000 ಇ-ಪಾಸ್ ವ್ಯವಸ್ಥೆ: ಸೀಮಂತ್ ಕುಮಾರ್ ಸಿಂಗ್

Public TV
By Public TV
45 minutes ago
Modi Trump
Latest

ಗುಡ್‌ ನ್ಯೂಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್‌ ಸಿದ್ಧತೆ!

Public TV
By Public TV
1 hour ago
Ballari Janardhan Reddy Sriramulu Model House Fire
Bellary

ರೆಡ್ಡಿ, ರಾಮುಲುಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ – ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?