ಬೆಂಗಳೂರು: ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್‌ನಲ್ಲಿ ಜಲಮಂಡಳಿ (BWSSB) ತೋಡಿದ ಗುಂಡಿಗೆ ಬಿದ್ದು ಓರ್ವ ಯುವಕ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ವ್ಹೀಲಿಂಗ್ (Wheeling) ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಸಂತೋಷ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಸದ್ದಾಂ ಪಾಷಾ(20) ಸಾವನ್ನಪ್ಪಿದ್ದರೆ, ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಜೆ ನಗರ (JJ Nagara) ಮೂಲದ ಇವರು ಒಂದೇ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: `ಲೋಕ’ ಅಖಾಡದಲ್ಲಿ ಮತ್ತೆ ಮೋದಿ-ಗೌಡರ ಜೋಡಿ ಕಮಾಲ್ – ಏ.20ಕ್ಕೆ ದೇವನಹಳ್ಳಿಯಲ್ಲಿ ಬೃಹತ್ ಮೈತ್ರಿ ಸಮಾವೇಶ
Advertisement
Advertisement
ಜಲ ಮಂಡಳಿಯವರು ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿದ್ದರು. ಕೊಮ್ಮಘಟ್ಟ ಸರ್ಕಲ್ ಬಳಿ ಬರುವಾಗ ಬ್ಯಾರಿಕೇಡ್ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ಚಲಾಯಿಸಿದ ಪರಿಣಾಮ ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಕೂಡಲೇ ನೆರವಿಗೆ ದಾಖಲಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೆಲಕ್ಕೆ ಎತ್ತು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಯಡಿಯೂರಪ್ಪನವ್ರೇ ನೀವು ಕರೆದಲ್ಲಿ ಬಂದು ಪ್ರಚಾರ ಮಾಡ್ತೀನಿ: ಹೆಚ್‍ಡಿಡಿ
Advertisement
Advertisement
ಸಂತೋಷ್ ಹೇಳಿದ್ದೇನು?
ಭಾನುವಾರ ರಾತ್ರಿ 8:45ರ ಸಮಯದಲ್ಲಿ ನಾನು ಕೂಡ ಕೆಂಗೇರಿ ರಸ್ತೆಯಲ್ಲಿ ಬರುತ್ತಿದೆ. ನನ್ನನ್ನು ಓವರ್ ಟೇಕ್ ಮಾಡಿಕೊಂಡು ಮೂವರು ಯುವಕರು ಸ್ಕೂಟರ್‌ನಲ್ಲಿ ಬಂದರು. ಅದೇ ವೇಗದಲ್ಲಿ ವ್ಹೀಲಿಂಗ್ ಮಾಡುತ್ತಾ ಮುಂದೆ ಸಾಗುತ್ತಿದ್ದರು.
ವ್ಹೀಲಿಂಗ್ ಮಾಡುವ ವೇಳೆ ಸ್ಕೂಟರ್ ಹೆಡ್‌ಲೈಟ್ ಮೇಲಕ್ಕೆ ಹೋಗಿದೆ. ಆಗ ಗುಂಡಿ ಮುಂದಕ್ಕೆ ಇರುವುದು ಕಾಣಿಸದೇ ನೇರವಾಗಿ ಬಂದು ಒಳಗಡೆ ಬಿದ್ದಿದ್ದಾರೆ. ನಾವೇ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ ಸೇರಿಸಿದ್ದೆವು. ಯುವಕರ ಪುಂಡಾಟಕ್ಕೆ ಜೀವ ತೆತ್ತಿದ್ದಾರೆ. ಜಲ ಮಂಡಳಿಯವರು ಬ್ಯಾರಿಕೇಡ್ ಹಾಕಿದ್ದರು. ಆದರೆ ಅವರು ವೇಗವಾಗಿ ಬಂದು ಬ್ಯಾರಿಕೇಡ್‌ಗೆ ಗುದ್ದಿ ಗುಂಡಿಗೆ ಬಿದ್ದಿದ್ದಾರೆ ಎಂದು ವಿವರಿಸಿದರು.