ಬೆಂಗಳೂರು: ಯುವತಿಯರು ಡ್ರಗ್ಸ್ (Drugs) ಸೇವನೆ ಸಂಬಂಧ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಎನ್‌ಸಿಬಿ (NCB) ಅಧಿಕಾರಿಗಳು ತಡರಾತ್ರಿ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ NCB ಅಧಿಕಾರಿಗಳು ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್‌ನ ಫ್ಲಾಟ್ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ಉತ್ತರ ಭಾರತ ಮೂಲದ ಮೂವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ
Advertisement
Advertisement
ವಶಕ್ಕೆ ಪಡೆದ ಮೂವರಲ್ಲಿ, ಓರ್ವ ಯುವತಿಗೆ ಡಾರ್ಕ್ ವೆಬ್‌ಗೂ ಲಿಂಕ್ ಇರುವ ಮಾಹಿತಿ ಸಿಕ್ಕಿದೆ. ಡಾರ್ಕ್ ವೆಬ್ ಮೂಲಕ ಯುವತಿಯರು ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
Advertisement
Advertisement
MBA ಪದವೀಧರೆಯಾದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿಯಿಂದ ಡ್ರಗ್ಸ್ ಡೀಲ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ವಶಕ್ಕೆ ಪಡೆಯಲಾಗಿದೆ. ಸದ್ಯ ಎನ್‌ಸಿಬಿ ಅಧಿಕಾರಿಗಳು ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ