ಬಳ್ಳಾರಿ: ಕಳೆದ ನಾಲ್ಕು ದಿನಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತೀಸ್‍ಗಢದ ರಾಯಗಢ ಗ್ರಾಮದ ನಿವಾಸಿಗಳಾದ ಅಜಾದ್ ಸಿಂಗ್, ಅಂಗದ್ ಸಿಂಗ್ ಮತ್ತು ಜಗತ್ ಸಿಂಗ್ ಬಂಧಿತ ಆರೋಪಿಗಳು.
ಐಸಿಐಸಿಐ ಬ್ಯಾಂಕ್ ಎಟಿಎಂ ಮತ್ತು ಬ್ಯಾಂಕ್ ಸೆಕ್ಯೂರಿಟಿಯಾಗಿದ್ದ ಬಸವರಾಜ್‍ನನ್ನು ನಾಲ್ಕು ದಿನಗಳ ಹಿಂದೆ ಕೊಲೆ ಮಾಡಿದ್ದರು. ಆರಂಭದಲ್ಲಿ ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿದ್ದು ಎನ್ನಲಾಗಿದ್ದರೂ ನಂತರ ಬ್ಯಾಂಕ್ ದರೋಡೆಯ ಹಿನ್ನೆಲೆಯಲ್ಲಿ ನಡೆದ ಕೊಲೆ ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: ವಿಫಲ ಕೊಳವೆ ಬಾವಿಗಳಲ್ಲಿ ಅಚ್ಚರಿಯೋ ಅಚ್ಚರಿ!
ಹಗರಿ ಗ್ರಾಮದ ಬಳಿಯಲ್ಲಿ ಇರುವ ಗ್ಯಾಸ್ ಲೈನ್ ಕೆಲಸ ಮಾಡುತ್ತಿದ್ದ ಆರೋಪಿಗಳು ಅಣ್ಣ, ತಮ್ಮ ಹಾಗೂ ಅಣ್ಣನ ಮಗ ಮೊದಲ ಬಾರಿ ಕಳ್ಳತನಕ್ಕೆ ಯತ್ನಿಸಿದ್ದರು. ನಂತರ ಸೆಕ್ಯೂರಿಟಿ ಗಾರ್ಡ್ ಅನ್ನು ಕೊಲೆ ಮಾಡಿ ಕಾರೆಕಲ್ ಗ್ರಾಮದ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಮಾರಣಾಂತಿಕ ಹಲ್ಲೆ ಹಾಗೂ ಕೊಲೆಗೈದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬ್ರೂಸ್ಪೇಟ್ ಪೊಲೀಸರು ಬಂಧಿಸಿದ್ದಾರೆ.