ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ಎರಡುವರೆ ವರ್ಷ ಮೂರು ತಿಂಗಳ ಕಾಲ ಅಧಿಕಾರ ನಡೆಸಿದ ನೀಲಮಣಿ ಎನ್.ರಾಜು ಇಂದು ಸೇವೆಯಿಂದ ನಿವೃತ್ತಿಹೊಂದಿದರು.
ಡಿಜಿ, ಐಜಿಪಿ ಜೊತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿ ಪಡೆದರು. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ, ವಸತಿ ಮೂಲ ಸೌಕರ್ಯ ನಿಗಮದ ಡಿಜಿಪಿ ನಿವೃತ್ತಿಯಾದರು. ನಿವೃತ್ತಿಯಾದ ಮೂವರು ಅಧಿಕಾರಿಗಳಿಗೆ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ಬಿಳ್ಕೋಡೆಗೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.
Advertisement
Advertisement
ಕಾರ್ಯಕ್ರಮದಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳ ಬಿಳ್ಕೋಡೆಗೆ ಕಾರ್ಯಕ್ರಮಕ್ಕೆ ಗೃಹ ಇಲಾಖೆ ಅಪರ ಕಾರ್ಯದರ್ಶಿ ರಜನೀಶ್ ಗೊಯಲ್, ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
Advertisement
ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಾರಥಿಯಾಗಿ ಕೆಲಸ ಮಾಡುವುದಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಹಾಗೂ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಭದ್ರತೆಗೆ ಕೇಂದ್ರ ಚುನಾವಣಾ ಆಯೋಗ ಪ್ರಶಂಸೆಯ ಪತ್ರಕೊಟ್ಟಿದೆ. ಇದು ಕರ್ನಾಟಕ ಪೊಲೀಸರಿಗೆ ಸಿಕ್ಕ ದೊಡ್ಡಗೌರವ. ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಜನಸ್ನೇಹಿ ಪೊಲೀಸ್ ಸೇರಿ ಹಲವು ರೀತಿಯ ಬದಲಾವಣೆಗಳನ್ನ ಮಾಡಿದ್ದೇನೆ. ಇಲಾಖೆಯಲ್ಲಿ 100 ಪರ್ಸೆಂಟ್ ಯಶಸ್ಸು ಖಂಡಿರುವ ಹೆಮ್ಮೆ ಇದೆ ಎಂದು ತನ್ನ ಅಧಿಕಾರದ ಅವಧಿಯಲ್ಲಾದ ಕೆಲಸಗಳು ಹಾಗೂ ಘಟನೆಗಳ ಬಗ್ಗೆ ನೀಲಮಣಿ ಅವರು ಮೇಲಕು ಹಾಕಿದರು.