ನವದೆಹಲಿ: ತುಮಕೂರು (Tumakuru) ಜಿಲ್ಲೆಗೆ ರೈಲ್ವೆಯ 2 ಕೆಳ ಸೇತುವೆ, 1 ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವಾಲಯ ಮಂಜೂರು ಮಾಡಿದೆ. ಈ ಮೂರು ಸೇತುವೆಗಳು ಒಟ್ಟು 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ (V.Somanna) ತಿಳಿಸಿದ್ದಾರೆ.
ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಫೋರ್ಜರಿ ಸಹಿ ಮಾಡಿದ್ರೆ ಏಕೆ ದೂರು ಕೊಡಲಿಲ್ಲ?: ಹೆಚ್‍ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ
Advertisement
Advertisement
ಈ ಹಿಂದೆ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ತುಮಕೂರು ನಗರದಲ್ಲಿ 3, ನಗರದ ಹೊರ ವಲಯದ ಹರಿಯೂರು (ಮಲ್ಲಸಂದ್ರ) ಬಳಿ 1, ಗುಬ್ಬಿ ತಾಲ್ಲೂಕಿನ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ 1 ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು 350 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆದೇಶಿಸಿತ್ತು.